Personality Test: ನೀವು ಮೊಬೈಲ್ ಹಿಡಿಯುವ ರೀತಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವ
ನೀವು ಮೊಬೈಲ್ ಬಳಸುವಾಗ ಯಾವ ರೀತಿ ಹಿಡಿದುಕೊಳ್ಳುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಕೆಳಗೆ ನೀಡಲಾಗಿರುವ ಚಿತ್ರವನ್ನು ಗಮನಿಸಿ, ನೀವು ಯಾವ ರೀತಿ ಫೋನ್ ಹಿಡಿದುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ.
ನೀವು ಮೊಬೈಲ್ ಅನ್ನು ಯಾವ ರೀತಿ ಹಿಡಿದು ಬಳಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದಾಗಿದೆ. ಈ ಮೇಲಿನ ಚಿತ್ರದಲ್ಲಿ ನಾಲ್ಕು ರೀತಿಯಲ್ಲಿ ಮೊಬೈಲ್ ಹಿಡಿಯುವವರನ್ನು ಕಾಣಬಹುದು. ನೀವು ಯಾವ ರೀತಿ ಹಿಡಿದು ಮೊಬೈಲ್ ಬಳಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಿರಿ.
1. ಒಂದು ಕೈಯಿಂದ ಫೋನ್ ಹಿಡಿದು ಅದೇ ಕೈಯ ಹೆಬ್ಬೆರಳು ಬಳಸಿ ಮೊಬೈಲ್ ಬಳಕೆ:
ತಮ್ಮ ಫೋನ್ ಅನ್ನು ಈ ರೀತಿ ಬಳಸುವ ಜನರು ಆಶಾವಾದಿ ಮತ್ತು ಆತ್ಮವಿಶ್ವಾಸದ ಜನರು ಎಂದು ಹೇಳಲಾಗುತ್ತದೆ. ಅವರು ಯಾವತ್ತೂ ಅಸಡ್ಡೆಯಿಂದ ವರ್ತಿಸುವವರಲ್ಲ. ಅವರು ಯಾವುದೇ ದೂರುಗಳಿಲ್ಲದೆ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಾರೆ. ಇದಲ್ಲದೇ ತಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸುತ್ತಾರೆ. ಇವರು ಯಾವುದೇ ವಿಷಯವನ್ನು ಆಳವಾಗಿ ನೋಡದೆ ಧಾವಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ.
2. ಎರಡೂ ಕೈಗಳಿಂದ ಫೋನ್ ಹಿಡಿದು ಒಂದು ಕೈಯ ಹೆಬ್ಬೆರಳಿನಿಂದ ಫೋನ್ ಬಳಕೆ:
ಈ ರೀತಿಯ ಮೊಬೈಲ್ ಬಳಕೆದಾರರು ತಮ್ಮ ಜೀವನವನ್ನು ಎಚ್ಚರಿಕೆಯಿಂದ ಮುಂದುವರಿಸುತ್ತಾರೆ. ಇವರು ಪ್ರತಿಯೊಂದು ವಿಷಯವನ್ನು ಆಳವಾಗಿ ಪರಿಶೀಲಿಸುತ್ತಾರೆ. ಇದರಿಂದ ಇವರ ಸಂಬಂಧಗಳು ಮತ್ತು ಸನ್ನಿವೇಶಗಳ ಬಗ್ಗೆ ಇವರಿಗೆ ಸಂಪೂರ್ಣ ಸ್ಪಷ್ಟತೆ ಇರುತ್ತದೆ. ಇವರ ಶಾಂತ ಸ್ವಭಾವ, ಇತರರಿಗೆ ಸಾಂತ್ವನ ನೀಡುತ್ತದೆ.
ಇದನ್ನೂ ಓದಿ: ಮಹಿಳೆಯ ಮೂಗಿನ ಆಕಾರವೇ ಆಕೆಯ ಸ್ವಭಾವ ಏನೆಂಬುದನ್ನು ಹೇಳುತ್ತೆ
3. ಎರಡು ಕೈಗಳಿಂದ ಫೋನ್ ಹಿಡಿದು, ಎರಡು ಹೆಬ್ಬೆರಳುಗಳಿಂದ ಫೋನ್ ಬಳಕೆ:
ಈ ರೀತಿ ಫೋನ್ ಬಳಸುವವರು ಮುಕ್ತ ಪಕ್ಷಿಗಳು, ಯಾವಾಗಲೂ ಶಕ್ತಿಯಿಂದ ತುಂಬಿರುತ್ತಾರೆ. ಪರಿಸ್ಥಿತಿಯನ್ನು ತ್ವರಿತವಾಗಿ ವಿಶ್ಲೇಷಿಸಿ ಮತ್ತು ಸಮಸ್ಯೆಗೆ ತ್ವರಿತ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇವರು ವಿಭಿನ್ನ ಕೌಶಲ್ಯಗಳೊಂದಿಗೆ ಯಾವುದೇ ಸವಾಲನ್ನು ಸುಲಭವಾಗಿ ಸ್ವೀಕರಿಸುತ್ತಾರೆ. ಜೊತೆಗೆ ಎಲ್ಲದರಲ್ಲೂ ಮೇಲುಗೈ ಸಾಧಿಸುತ್ತಾರೆ. ಇವರು ಹೆಚ್ಚು ಸ್ಪರ್ಧಾತ್ಮಕ ಮತ್ತು ಬೇಡಿಕೆಯ ಕ್ಷೇತ್ರಗಳ ಕಡೆಗೆ ಆಕರ್ಷಿತರಾಗುತ್ತಾರೆ.
4. ಒಂದು ಕೈಯಿಂದ ಫೋನ್ ಹಿಡಿದುಕೊಂಡು ಇನ್ನೊಂದು ಕೈಯ ತೋರು ಬೆರಳಿನಿಂದ ಫೋನ್ ಬಳಕೆ:
ತಮ್ಮ ಫೋನ್ ಅನ್ನು ಹೀಗೆ ಬಳಸುವ ಜನರು ಹೆಚ್ಚಿನ ಮಾನಸಿಕ ಸ್ಥಿರತೆ ಮತ್ತು ಪ್ರಬುದ್ಧತೆಯ ಮಟ್ಟವನ್ನು ಹೊಂದಿರುತ್ತಾರೆ. ಅಪರೂಪವಾಗಿ ನಿರ್ಧಾರಗಳನ್ನು ತೆಗೆದುಕೊಂಡು ಮುಂದುವರಿಯುತ್ತಾರೆ. ಪ್ರತಿ ಬಾರಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರು ತಮ್ಮ ಆಯ್ಕೆಗಳನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಇತರರಿಗೆ ಸುಲಭವಾಗಿ ಮಣಿಯುವುದಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ