ಹೇ ಮಾನವ! ಎಂದಾದರೂ ನನ್ನನ್ನು ಪ್ಯಾರಾಗ್ಲೈಡಿಂಗ್​ ಕರೆದುಕೊಂಡು ಹೋಗು ಎಂದಿದ್ದೆನಾ?

| Updated By: ಶ್ರೀದೇವಿ ಕಳಸದ

Updated on: Oct 12, 2022 | 1:19 PM

Pet dog goes paragliding : ‘ಅದರ ಕಣ್ಣು ನೋಡ್ರೋ, ಭಯದಿಂದ ತುಂಬಿ ತುಳುಕ್ತಿವೆ. ನಿಮ್ಮ ಸಂತೋಷಕ್ಕಾಗಿ ಏನೂ ಮಾಡುತ್ತೀರಿ ನೀವು.‘ 8 ಲಕ್ಷ ನೆಟ್ಟಿಗರೇನೋ ಈ ವಿಡಿಯೋ ನೋಡಿದ್ದಾರೆ. ಆದರೆ ಯಾರೊಬ್ಬರಿಗೂ ಇದು ಖುಷಿತಂದಿಲ್ಲ.

ಹೇ ಮಾನವ! ಎಂದಾದರೂ ನನ್ನನ್ನು ಪ್ಯಾರಾಗ್ಲೈಡಿಂಗ್​ ಕರೆದುಕೊಂಡು ಹೋಗು ಎಂದಿದ್ದೆನಾ?
Pet dog goes paragliding with hooman
Follow us on

Viral Video : ನಿಮ್ಮ ಸ್ನೇಹಿತರ ಜೊತೆ, ನಿಮ್ಮ ಹುಡುಗಿಯ ಜೊತೆ, ನಿಮ್ಮ ಹುಡುಗನ ಜೊತೆ, ನಿಮ್ಮ ಗಂಡನ ಜೊತೆ, ನಿಮ್ಮ ಹೆಂಡತಿಯ ಜೊತೆ, ನಿಮ್ಮ ಮಕ್ಕಳ ಜೊತೆ… ಹೀಗೆ ಪ್ಯಾರಾಗ್ಲೈಡಿಂಗ್ ಮಾಡಿರುತ್ತೀರಿ. ಆದರೆ ನಿಮ್ಮ ಸಾಕುಪ್ರಾಣಿಗಳ ಜೊತೆ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿರಬಹುದು. ಅದನ್ನು ಇಲ್ಲೊಬ್ಬರು ತಮ್ಮ ಸಾಕುನಾಯಿಯೊಂದಿಗೆ ಪ್ಯಾರಾಗ್ಲೈಡಿಂಗ್ ಮಾಡಿ ಸಾಧ್ಯವಾಗಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸುತ್ತಿದ್ದಾರೆ. ನಾಯಿಯ ಪರವಾಗಿ ಅನೇಕರು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Ladbible ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. 8 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ಅನ್ನು ಮೊದಲು ಪೋಸ್ಟ್ ಮಾಡಿದ್ದು ನ್ಯೂಸ್​ಫ್ಲೇರ್. ಇದು ವೈರಲ್ ಆಗಿದ್ದು Ladbible ಖಾತೆಯಲ್ಲಿ ಕಾಣಿಸಿಕೊಂಡಾಗ.

ಈ ವಿಡಿಯೋ ನೋಡಿದ ನೆಟ್ಟಿಗರು ಸಂತೋಷಪಟ್ಟಿಲ್ಲ, ಅಚ್ಚರಿಗೂ ಒಳಗಾಗಿಲ್ಲ. ಬದಲಾಗಿ ನಾಯಿಯ ಬಗ್ಗೆ ಹೆಚ್ಚು ಆತಂಕಿತರಾಗಿದ್ದಾರೆ. ಪ್ಯಾರಾಗ್ಲೈಡಿಂಗ್​ನಿಂದ ಅದು ಭಯಕ್ಕೆ ಬಿದ್ದಿದೆ. ಇದರಿಂದ ಅದಕ್ಕೆ ಹಿಂಸೆಯಾದಂತಿದೆ ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.

ಅವಳ ಮುಖ ನೋಡುತ್ತಿದ್ದರೆ ಬಹುಶಃ ಸಾವಿನ ಭಯದಲ್ಲಿದ್ದ ಹಾಗಿದೆ ನನ್ನ ಮಾತನ್ನು ನಂಬಿ ಎಂದು ಒಬ್ಬ ನೆಟ್ಟಿಗರು ಆತಂಕದಿಂದ ಪ್ರತಿಕ್ರಿಯಿಸಿದ್ದಾರೆ. ಕೊನೇಪಕ್ಷ ಅದರ ಕಣ್ಣಿಗೆ ಕೂಲಿಂಗ್​ ಗ್ಲಾಸ್ ಆದರೂ ಹಾಕಬೇಕಾಗಿತ್ತು ಎಂದು ದುಃಖಿಸಿದ್ದಾರೆ ಇನ್ನೊಬ್ಬ ನೆಟ್ಟಿಗರು.

ನಿಲ್ಲಿಸಿ ಸಾಕು! ಅದರ ಕಣ್ಣು ನೋಡಿದರೆ ಗೊತ್ತಾಗುತ್ತಿಲ್ಲವಾ ಅದೆಷ್ಟು ಭಯದಿಂದ ಕೂಡಿದೆಯೆಂದು… ಮತ್ತೊಬ್ಬ ನೆಟ್ಟಿಗರು ಕೋಪದಿಂದ ಹೇಳಿದ್ದಾರೆ. ಈ ನಾಯಿ ಎಂದಾದರೂ ನನ್ನನ್ನು ಪ್ಯಾರಾಗ್ಲೈಡಿಂಗ್​ಗೆ ಕರೆದುಕೊಂಡು ಹೋಗು ಎಂದು ಹೇಳಿತ್ತಾ? ಅದರ ಕಣ್ಣುಗಳಲ್ಲಿಯ ಭಯ ನೋಡಿದರೆ ನಿಮಗೇನೂ ಅನ್ನಿಸುತ್ತಿಲ್ಲವಾ? ಎಂದಿದ್ದಾರೆ ಇನ್ನೊಬ್ಬರು.

ತಮ್ಮ ಸಂತೋಷಕ್ಕಾಗಿ ಈ ಮನುಷ್ಯರು ಪ್ರಾಣಿಗಳನ್ನು ಬಳಸಿಕೊಳ್ಳುತ್ತಾರೆ ಛೆ ಎಂದಿದ್ದಾರೆ ಇನ್ನೂ ಒಬ್ಬರು. ಗಾಳಿಯಲ್ಲಿ ಹೀಗೆ ಹಾರಾಡುವುದು ನಾಯಿಗಳಿಗೆ ಸಲ್ಲದು. ಅದಕ್ಕೆ ಏನಿದ್ದರೂ ಚೆನ್ನಾಗಿ ತಿನ್ನಿಸಬೇಕು, ವಾಕಿಂಗ್​ ಕರೆದುಕೊಂಡು ಹೋಗಬೇಕು. ಅಂದಾಗಲೇ ಖುಷಿ ಎಂದಿದ್ದಾರೆ ಮಗದೊಬ್ಬರು.

ಹೀಗೆ ಅವರವರ ಮನಸಿನಲ್ಲಿರುವುದನ್ನೆಲ್ಲ ಅವರವರಿಗೆ ತಿಳಿದಿರುವುದನ್ನೆಲ್ಲ ಹೇಳಿದ್ದಾರೆ. ನಾಯಿ ಏನು ಹೇಳೀತು?! ಪಾಪದ್ದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:12 pm, Wed, 12 October 22