ಪೆಟ್ರೋಲ್ ಬಂಕ್ನಲ್ಲಿ ಕಾರಿನಲ್ಲಿ ಕೂತು ಸಿಗರೇಟ್ ಸೇದುತ್ತಿದ್ದ ವ್ಯಕ್ತಿಗೆ ತಕ್ಕ ಪಾಠ ಕಲಿಸಿದ ಮಾಲೀಕ!
ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಹಚ್ಚಿಕೊಂಡು ಸೇದುತ್ತಾ ನಿಂತಿದ್ದ ವ್ಯಕ್ತಿಯನ್ನು ನೋಡಿದ ಮಾಲೀಕ ಬೆಂಕಿ ನಂದಿಸುವ ಸಾಧನ ಬಳಸಿದ್ದಾರೆ.
ಕೆಲವು ವಿಡಿಯೋಗಳು ಅದೆಷ್ಟೋ ಜನರಿಗೆ ಎಚ್ಚರಿಕೆ ಸಂದೇಶವನ್ನು ಸಾರುತ್ತದೆ. ಇನ್ನು ಕೆಲವು ವಿಡಿಯೋಗಳು ಭಯಾನಕವಾಗಿರುತ್ತದೆ. ಇನ್ನು ಕೆಲವದರಿಂದ ತಿಳಿದುಕೊಳ್ಳಬೇಕಾದದ್ದು ಅನೇಕ ಸಂಗತಿಗಳಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಕೇವಲ ತಮಾಷೆಯ ವಿಡಿಯೋಗಳಷ್ಟೇ ಅಲ್ಲ.. ಏನೆಲ್ಲಾ ಮಾಡಬಾರದು.. ಅವುಗಳಿಂದ ಏನೆಲ್ಲಾ ಅಪಾಯ ಸಂಭವಿಸಬಹುದು ಎಂಬುದಕ್ಕೆ ಸಾಕ್ಷಿ ಎಂಬಂತೆ ವಿಡಿಯೋಗಳು ಹರಿದಾಡುತ್ತವೆ. ಇವುಗಳನ್ನು ನೋಡಿದ ಜನರು ತಿಳಿದುಕೊಳ್ಳುವುದು ಅನೇಕ ಸಂಗತಿಗಳಿವೆ. ಅಂತಹುದೇ ಒಂದು ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.
ಪೆಟ್ರೋಲ್ಗೆ ಚೂರೇಚೂರು ಬೆಂಕಿ ತಾಗಿದರೆ ಸಾಕು ಧಗ ಧಗ ಹೊತ್ತಿಕೊಂಡು ಉರಿದುಬಿಡುತ್ತದೆ. ಇಂತಹ ಅನೇಕ ಘಟನೆಗಳೂ ಸಹ ನಡೆದಿವೆ. ಅಂತಹ ವಿಷಯ ಗೊತ್ತಿದ್ದರೂ ಸಹ ಕೆಲವರು ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದ್ದಾರೆ. ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಹಚ್ಚಿಕೊಂಡು ಸೇದುತ್ತಾ ನಿಂತಿದ್ದ ವ್ಯಕ್ತಿಯನ್ನು ನೋಡಿದ ಮಾಲೀಕ ಬೆಂಕಿ ನಂದಿಸುವ ಸಾಧನ ಬಳಸಿದ್ದಾರೆ. ಹಳೆಯ ವಿಡಿಯೋ ಇದೀಗ ಮತ್ತೆ ಫುಲ್ ವೈರಲ್ ಆಗುತ್ತಿದೆ.
ವರದಿಗಳ ಪ್ರಕಾರ, ಪೆಟ್ರೋಲ್ ತುಂಬಿಸಿಕೊಳ್ಳಲು ಕಾರು ಪೆಟ್ರೋಲ್ ಬಂಕ್ಗೆ ಬಂದಿದೆ. ಆ ಸಂದರ್ಭದಲ್ಲಿ ಕಾರಿನ ಚಾಲಕ ಸಿಗರೇಟ್ ಸೇದುತ್ತಿರುವುದನ್ನು ಮಾಲೀಕರು ನೋಡಿದ್ದಾರೆ. ಸಿಗರೇಟ್ ಬದಿಗಿಡಲು ಆ ವ್ಯಕ್ತಿ ನಿರಾಕರಿಸಿದ್ದರಿಂದ ಮಾಲೀಕರು ಕ್ರಮ ಕೈಗೊಳ್ಳಬೇಕಾಯಿತು.
ವಿಡಿಯೋದಲ್ಲಿ ಗಮನಿಸಿದಂತೆ ನೀಲಿ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿ ಇನ್ನೊಂದು ಕಡೆ ನಿಂತಿದ್ದಾರೆ. ಅವರೂ ಸಹ ಕಾರಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ. ಇನ್ನುಂದೆಡೆ ಬಿಳಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿ ಸಿಗರೇಟ್ ಹಿಡಿದು ನಿಂತಿರುವುದು ಕಂಡು ಬಂದಿದೆ.
ಇದನ್ನು ಗಮನಿಸಿದ ಮಾಲೀಕ ಬಿಳಿ ಬಣ್ಣದ ಶರ್ಟ್ ಧರಿಸಿರುವ ವ್ಯಕ್ತಿಯ ಬಳಿ ವೇಗವಾಗಿ ನಡೆದರು. ನಂತರ ಸಿಗರೇಟ್ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಘಟನೆ ಸುಮಾರು 4 ವರ್ಷಗಳ ಹಿಂದೆ ನಡೆದಿದೆ. ಇದೀಗ ಮತ್ತೆ ವೈರಲ್ ಆಗಿದೆ.
ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಾನು ಸಿಲೆಂಡರ್ ಗ್ಯಾಸ್ ತುಂಬಿಸಿಕೊಡುವ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತೇನೆ. ನನ್ನ ಮುಂದೆ ಇಂತಹ ಘಟನೆಗಳು ನಡೆದರೆ ನಾನೂ ಸಹ ಇದೇ ರೀತಿ ಮಾಡುವೆ ಎಂದು ಓರ್ವರು ಹೇಳಿದ್ದಾರೆ. ಇದೇ ರೀತಿ ನಾನಾ ಪ್ರತಿಕ್ರಿಯೆಗಳು ಕೇಳಿ ಬಂದಿದೆ. ವಿಡಿಯೋ 73,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
Viral Video: ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋದಿಂದ ಸಂಕಷ್ಟಕ್ಕೆ ಸಿಲುಕಿದ ನರ್ಸ್
Viral Video: ಅಡುಗೆ ಮನೆ ಪ್ರವೇಶಿಸಿ ಆಹಾರ ಕದಿಯುತ್ತಿರುವ ಬುದ್ಧಿವಂತ ಶ್ವಾನ; ವಿಡಿಯೊ ನೋಡಿ
Published On - 12:29 pm, Tue, 24 August 21