
ಪ್ರಾಣಿಗಳೇ (Animals) ಗುಣದಲಿ ಮೇಲು… ಮಾನವನದಕಿಂತ ಕೀಳು… ಮನುಷ್ಯರಿಗೆ ಹೋಲಿಸಿದರೆ ಗುಣದಲಿ, ಪ್ರೀತಿಯಲ್ಲಿ, ಮಾನವೀಯತೆಯ ವಿಷಯದಲ್ಲಿ ಪ್ರಾಣಿಗಳೇ ಎಷ್ಟೋ ಪಾಲು ಮೇಲು ಎಂದು ಹೇಳುತ್ತಾರೆ. ಮನುಷ್ಯನಿಗೆ ಹೋಲಿಸಿದರೆ ಪ್ರೀತಿ, ನಿಯತ್ತು ಪ್ರಾಣಿಗಳಿಗೆ ಜಾಸ್ತಿಯೇ ಇದೆ. ಈ ಮಾತಿಗೆ ನಿದರ್ಶನದಂತಿರುವ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಪ್ರಾಣಿಗಳಿಗೆ (Pets) ತಮ್ಮ ಮಾಲೀಕರ ಮೇಲೆ ಪ್ರೀತಿ, ನಿಯತ್ತು ಎಷ್ಟಿದೆ ಎಂದು ತೋರಿಸುವಂತಹ ದೃಶ್ಯ ವೈರಲ್ ಆಗಿದೆ. ಮಾಲೀಕರು ಬರುತ್ತಿದ್ದಂತೆ ನಾಯಿ, ದನಗಳು, ಕುದುರೆ ಓಡಿ ಹೋಗಿ ಅವರನ್ನು ಪ್ರೀತಿಯಿಂದ ಸ್ವಾಗತಿಸಿವೆ. ಮಾಲೀಕರ ಕಾರು ಬರುತ್ತಿದ್ದಂತೆ ಓಡಿ ಹೋಗಿ ವೆಲ್‌ಕಮ್ ಮಾಡಿದ್ದು, ಈ ಅದ್ಭುತ ದೃಶ್ಯ ಎಲ್ಲರ ಮನ ಗೆದ್ದಿದೆ.
ಓನರ್ ಕಾರು ಸದ್ದು ಕೇಳಿಸುತ್ತಿದ್ದಂತೆ, ಮನೆಯ ಅಂಗಳದಲ್ಲಿದ್ದ ಎರಡು ಹಸುಗಳು, ಎರಡು ಶ್ವಾನ, ಒಂದು ಕುದುರೆ ಕಾರ್ ಬಳಿ ಓಡುತ್ತಾ ಹೋಗಿ, ಮಾಲೀಕರನ್ನು ಪ್ರೀತಿಯಿಂದ ಸ್ವಾಗತಿಸಿವೆ. ಓನರ್ ಬಂದ್ರೂ ಎಂದು ಖುಷಿ ಖುಷಿಯಾಗಿ ಓಡಿ ಹೋಗಿ ಅವರನ್ನು ತಬ್ಬಿ ಸ್ವಾಗತಿಸಿವೆ.
ಈ ಮುದ್ದಾದ ದೃಶ್ಯವನ್ನು Buitengebieden ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅತ್ಯುತ್ತಮ ಸ್ವಾಗತ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
The best welcome home.. 😊 pic.twitter.com/QZxEclhGRX
— Buitengebieden (@buitengebieden) July 26, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಾಕು ಪ್ರಾಣಿಗಳು ಓಡಿ ಹೋಗಿ ಮನೆಯ ಮಾಲೀಕರನ್ನು ಸ್ವಾಗತಿಸುತ್ತಿರುವ ದೃಶ್ಯವನ್ನು ಕಾಣಬಹುದು. ಓನರ್ ಕಾರು ಸದ್ದು ಕೇಳಿಸುತ್ತಿದ್ದಂತೆ, ಓನರ್ ಬಂದೇ ಬಿಟ್ರು ಎಂದು ಮನೆಯ ಅಂಗಳದಲ್ಲಿದ್ದ ಎರಡು ಹಸುಗಳು, ಶ್ವಾನಗಳು ಹಾಗೂ ಒಂದು ಕುದುರೆ ಬಹಳ ಖುಷಿಯಿಂದ ಓಡಿ ಹೋಗಿ ಮಾಲೀಕರನ್ನು ತಬ್ಬಿ ಪ್ರೀತಿಯ ಸ್ವಾಗತ ಕೋರಿವೆ.
ಇದನ್ನೂ ಓದಿ: ಸಾಕಮ್ಮ ಚಳಿ ಆಗುತ್ತೆ, ತಾಯಾನೆ ಮರಿಯಾನೆಗೆ ಸ್ನಾನ ಮಾಡಿಸುವ ಚಂದ ನೋಡಿ
ಜುಲೈ 26 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜಕ್ಕೂ ಪ್ರಾಣಿಗಳೇ ಎಷ್ಟೋ ಉತ್ತಮʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪ್ರಾಣಿಗಳ ಜೊತೆ ಇಂತಹ ಜೀವನ ನಡೆಸುವುದು ನನ್ನ ದೊಡ್ಡ ಕನಸುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಎಂತಹ ಪ್ರೀತಿ, ಜೀವನದಲ್ಲಿ ಇದಕ್ಕಿಂತ ಸಂತೋಷ ಯಾವುದೂ ಇಲ್ಲʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ