Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್

ಮೊದಲ ಸುರಂಗದಿಂದ ಹೊರಬಂದಾಗ ವಿಮಾನವು ಬಲಕ್ಕೆ ಚಲಿಸಲು ಪ್ರಾರಂಭಿಸಿತು. ಆ ಸಮಯದಲ್ಲಿ ನನಗೆ ಏನು ನಡೆಯುತ್ತಿದೆ ಎಂದೇ ತಿಳಿಯದಂತಾಯಿತು. ಇನ್ನೊಂದು ಸುರಂಗವನ್ನು ದಾಟಲು ನನ್ನ ಮನಸ್ಸನ್ನು ಕೇಂದ್ರೀಕರಿಸಿದೆ ಎಂದು ಪೈಲಟ್​ ಅನುಭವ ಹಂಚಿಕೊಂಡಿದ್ದಾರೆ.

Viral Video: ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್; ದಿಗ್ಭ್ರಮೆಗೊಳಿಸುವ ವಿಡಿಯೋ ವೈರಲ್
ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ ಪೈಲಟ್
Edited By:

Updated on: Sep 06, 2021 | 2:30 PM

ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿರುವ ವಿಡಿಯೋ ಎಲ್ಲರಿಗೂ ಅಚ್ಚರಿ ಮೂಡಿಸುವಂತಿದೆ. ಸುರಂಗಗಳ ಮೂಲಕ ವಿಮಾನ ಹಾರಾಟ ನಡೆಸಿರುವುದನ್ನು ಎಲ್ಲಾದರೂ ನೋಡಿದ್ದೀರಾ? ಇದೇ ಮೊದಲಾಗಿರಬಹುದು. ಡೇರಿಯೊ ಕೋಸ್ಟಾ ಎಂಬ ಪೈಲಟ್ ಎರಡು ಸುರಂಗಗಳ ಮೂಲಕ ವಿಮಾನ ಹಾರಿಸಿದ್ದಾರೆ. ಎಲ್ಲರನ್ನು ಬೆರಗುಗೊಳಿಸಿರುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ನಾವು ಅಕ್ಷರಶಃ ಮೂಕರಾಗಿದ್ದೇವೆ ಎಂದು ವಿಡಿಯೋ ಶೀರ್ಷಿಕೆಯನ್ನು ಬರೆಯಲಾಗಿದೆ. ಕ್ಯಾಟಲ್ಕಾ ಸುರಂಗಗಳ ಮೂಲಕ ವಿಮಾನ ಹಾರಿದ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅತಿವೇಗದಲ್ಲಿ ವಿಮಾನ ಸುರಂಗವನ್ನು ದಾಟಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಮೊದಲ ಸುರಂಗದಿಂದ ಹೊರಬಂದಾಗ ವಿಮಾನವು ಬಲಕ್ಕೆ ಚಲಿಸಲು ಪ್ರಾರಂಭಿಸಿತು. ಆ ಸಮಯದಲ್ಲಿ ನನಗೆ ಏನು ನಡೆಯುತ್ತಿದೆ ಎಂದೇ ತಿಳಿಯದಂತಾಯಿತು. ಇನ್ನೊಂದು ಸುರಂಗವನ್ನು ದಾಟಲು ನನ್ನ ಮನಸ್ಸನ್ನು ಕೇಂದ್ರೀಕರಿಸಿದೆ. ಬಳಿಕ ನನ್ನ ಮನಸ್ಸು ಅತಿವೇಗದಲ್ಲಿ ಚುರುಕುಗೊಂಡಿತು ಎಂದು ಪೈಲಟ್ ಕೋಸ್ಟಾ ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತಂತೆ ರೆಡ್ ಬುಲ್ ಹಂಚಿಕೊಂಡ ವಿಡಿಯೋದಲ್ಲಿ ಮಾಹಿತಿ ನೀಡಲಾಗಿದೆ.

ನಾನು ನನ್ನ ಜೀವನದಲ್ಲಿ ಇಲ್ಲಿಯವರೆಗೂ ಸುರಂಗದ ಮೂಲಕ ವಿಮಾನ ಹಾರಾಟ ಮಾಡಿಲ್ಲ. ಹಾಗಾಗಿ ಎಲ್ಲವೂ ನಮ್ಮ ನಿರೀಕ್ಷೆಯಂತೆಯೇ ನಡೆಯುತ್ತದೆಯೇ ಎಂಬ ಗೊಂದಲವೂ ಇತ್ತು. ಇಂಥಹ ಪ್ರಶ್ನೆ ಮೂಡುವುದು ಸಹಜವೂ ಹೌದು. ಆದರೆ ನನ್ನ ಕನಸು ನನಸಾಗಿದೆ ಎಂಬುದರ ಬಗ್ಗೆ ಖುಷಿ ಇದೆ ಎಂದು ಪೈಲಟ್ ಹೇಳಿದ್ದಾರೆ.

ವಿಡಿಯೋವನ್ನು ಸೆಪ್ಟೆಂಬರ್ 4ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ 3.1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಸುಮಾರು 8,900 ಕ್ಕೂ ಹೆಚ್ಚು ಲೈಕ್ಸ್​ಗಳು ಲಭ್ಯವಾಗಿವೆ. ಅನೇಕ ವಿಡಿಯೋವನ್ನು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ವಿಡಿಯೋ ಗೇಮ್ ಆಡುತ್ತಿದ್ದಂತೆ ಭಾಸವಾಗುತ್ತಿದೆ ಎಂದು ಓರ್ವರು ಹೇಳಿದ್ದಾರೆ. ಇದು ಎಷ್ಟು ಕಷ್ಟವಾಗಿದೆ ಎಂಬುದು ಜನರಿಗೆ ಅರ್ಥವಾಗುತ್ತದೆ ಎಂದು ಮತ್ತೋರ್ವರು ಹೇಳಿದ್ದಾರೆ. ಪೈಲಟ್ ಕೋಸ್ಟಾ ಕ್ಯಾಟಲ್ಕಾ ಸುರಂಗಗಳನ್ನು 44 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ದಾಟಿದ್ದಾರೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:

Viral Video: ಮದುವೆಯ ಸಂಭ್ರಮದಲ್ಲಿ ಪಿಜ್ಜಾ ರುಚಿ ಸವಿಯುತ್ತಿರುವ ವಧು; ವೈರಲ್​ ವಿಡಿಯೋ ನೋಡಿ

Viral Video: ಕ್ಯೂಟ್ ಸ್ಮೈಲ್ ಮಾಡುತ್ತಾ ಮೇಕೆ ಜೊತೆ ಸೆಲ್ಫಿ ತೆಗೆಯೋಕೆ ಹೋದ ಯುವತಿಯ ಫಜೀತಿ ನೋಡಿ

(Pilot flies airplane two road tunnel video goes viral)