Video : ದಯವಿಟ್ಟು ಯುರೋಪ್‌ಗೆ ಯಾರು ಬರ್ಬೇಡಿ : ಭಾರತೀಯ ಪ್ರವಾಸಿಗ ಹೀಗೆಂದಿದ್ದೇಕೆ?

ವಿದೇಶಕ್ಕೆ ತೆರಳಬೇಕು, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಕಣ್ತುಂಬಿಸಿಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಹೀಗಾಗಿ ಹೆಚ್ಚಿನವರು ಮಕ್ಕಳಿಗೆ ರಜೆ ಸಿಕ್ಕೊಡನೆ ವಿದೇಶಕ್ಕೆ ಟ್ರಿಪ್ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಭಾರತೀಯ ಪ್ರವಾಸಿಗನು ದಯವಿಟ್ಟು ಯಾರು ಕೂಡ ಯೂರೋಪ್‌ಗೆ ಯಾರು ಬರಬೇಡಿ ಎಂದಿದ್ದಾನೆ. ಪ್ರವಾಸದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ಯಾವ ಸಮಯದಲ್ಲಿ ಇಲ್ಲಿಗೆ ಬಂದರೆ ಬೆಸ್ಟ್ ಎನ್ನುವ ಸಲಹೆಯನ್ನು ನೀಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈತನ ಸಲಹೆಯನ್ನು ಸ್ವೀಕರಿಸಿದ್ದಾರೆ.

Video : ದಯವಿಟ್ಟು ಯುರೋಪ್‌ಗೆ ಯಾರು ಬರ್ಬೇಡಿ : ಭಾರತೀಯ ಪ್ರವಾಸಿಗ ಹೀಗೆಂದಿದ್ದೇಕೆ?
ವೈರಲ್ ವಿಡಿಯೋ
Image Credit source: Instagram

Updated on: Jul 07, 2025 | 3:04 PM

ವಿದೇಶ ಪ್ರವಾಸವೆಂದರೆ (foreign trip) ನಮ್ಮ ಕಿವಿ ನೆಟ್ಟಗಾಗುತ್ತದೆ. ನಾವು ಅಲ್ಲಿ ಎಲ್ಲಾ ಸೌಕರ್ಯ ಸವಲತ್ತುಗಳು ಇರುತ್ತದೆ, ಎಂಜಾಯ್ ಮಾಡಬಹುದು ಎಂದುಕೊಳ್ಳುತ್ತೇವೆ. ಆದರೆ ಎಷ್ಟೋ ಸಲ ನಾವಂದುಕೊಂಡಕ್ಕಿಂತ ಕೆಟ್ಟ ಪರಿಸ್ಥಿತಿ ಅಲ್ಲಿನದ್ದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಭಾರತೀಯ ಪ್ರವಾಸಿಗನು ಯುರೋಪ್ ಪ್ರವಾಸ (Europe trip) ಕೈಗೊಂಡಿದ್ದು ಈ ವೇಳೆಯಲ್ಲಿ ಅಲ್ಲಿನ ವಾಸ್ತವ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸಿದ್ದಾನೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ಭಾರತೀಯ ಪ್ರವಾಸಿಗನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

pandeyijipardesi ಹೆಸರಿನ ಖಾತೆಯಲ್ಲಿ ಯುರೋಪ್ ಟ್ರಿಪ್ ವೇಳೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಯುರೋಪ್‌ಗೆ ಬರಬೇಡಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಯುರೋಪಿನಲ್ಲಿ ಬೇಸಿಗೆಯ ಹವಾಮಾನದ ಬಗ್ಗೆ ಎಚ್ಚರಿಕೆ ನೀಡಿದ್ದಾನೆ. ಈ ಋತುಮಾನದಲ್ಲಿ ಇಲ್ಲಿ ಪ್ರವಾಸಕ್ಕೆಂದು ಬರುವುದೇ ಸವಾಲಿನ ಸಂಗತಿ. ಹೆಚ್ಚಿನ ಸ್ಥಳಗಳಲ್ಲಿ ಎಸಿ ಅಥವಾ ಪ್ಯಾನ್‌ಗಳೇ ಇಲ್ಲ. ಬಿಸಿಲು ತೀವ್ರವಾಗಿದೆ ಎಂದು ಬೇಸಿಗೆಯಲ್ಲಿನ ಇಲ್ಲಿನ ಹವಾಮಾನದ ಹೇಗಿರುತ್ತದೆ ಎಂದು ವಿವರಿಸಿದ್ದಾನೆ.

ಇದನ್ನೂ ಓದಿ
ರ‍್ಯಾಂಪ್ ವಾಕ್ ಮಾಡುವಾಗ ಮಾಡೆಲ್‌ಗಳು ನಗುವುದಿಲ್ಲ, ಯಾಕೆ ಗೊತ್ತಾ?
ಈ ಬುಡಕಟ್ಟಿನ ಹೆಣ್ಣು ಮಕ್ಕಳು ತುಟಿಯನ್ನೇ ತೂತು ಮಾಡ್ತಾರೆ? ಯಾಕೆ ಗೊತ್ತಾ?
ಕಂದಮ್ಮನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಬಂದ ತಾಯಿ ಬೆಕ್ಕು
ಚಾಟ್ ಜಿಪಿಟಿ ಸಲಹೆ ಪಡೆದು 30 ದಿನಗಳಲ್ಲಿ ಹತ್ತು ಲಕ್ಷ ಸಾಲ ತೀರಿಸಿದ ಮಹಿಳೆ

ಇದನ್ನೂ ಓದಿ :Video : ಈ ಮಹಿಳಾ ಅಧಿಕಾರಿಯ ಧೈರ್ಯಕ್ಕೆ ಮೆಚ್ಚಲೇಬೇಕು, 18 ಅಡಿ ಉದ್ದದ ಕಿಂಗ್‌ ಕೋಬ್ರಾವನ್ನು ರಕ್ಷಣೆ ಮಾಡಿದ ಲೇಡಿ ಸಿಂಗಂ

ಯುರೋಪಿಯನ್ ನಗರಗಳು ಬಲು ದುಬಾರಿ, ಒಂದು ಸಣ್ಣ ಬಾಟಲಿ ನೀರಿನ ಬೆಲೆ 2 ರಿಂದ 2.5 ಯುರೋಗಳಾಗಿದೆ. ವಸತಿ ಸೌಕರ್ಯವಂತೂ ಇನ್ನೂ ದುಬಾರಿಯಾಗಿದ್ದು, ಹೇಳುವಷ್ಟು ಚೆನ್ನಾಗಿಲ್ಲ ಎಂದಿದ್ದಾನೆ. ನೀವೇನಾದ್ರೂ ಇಲ್ಲಿ ಟ್ರಿಪ್ ಪ್ಲ್ಯಾನ್ ಮಾಡಿಕೊಳ್ಳುತ್ತೀರಾ ಅಂತಾದ್ರೆ ಬೇಸಿಗೆಯ ಬದಲು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಯುರೋಪ್‌ಗೆ ಭೇಟಿ ನೀಡಿ. ಬೇಸಿಗೆ ರಜೆಯಲ್ಲಿ ಯುರೋಪ್ ಭೇಟಿ ನೀಡಬೇಕೆಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ರೆ ದಯವಿಟ್ಟು ಬರಬೇಡಿ ಎಂದು ಹೇಳಿರುವುದನ್ನು ಇಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರತೀಯ ಪ್ರವಾಸಿಗನ ಪ್ರಾಮಾಣಿಕ ಅನುಭವವನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, ಜೂನ್‌ನಿಂದ ಆಗಸ್ಟ್ ತಿಂಗಳವರೆಗೆ ಇರಲು ಬೆಂಗಳೂರು ಬೆಸ್ಟ್ ನಗರ ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಮಾಹಿತಿಗಾಗಿ ಧನ್ಯವಾದಗಳು. ನಮ್ಮ ದೇಶವೇ ಬೆಸ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಯುರೋಪ್ ನಿಜಕ್ಕೂ ಸುಂದರವಾಗಿದೆ, ಇಲ್ಲಿನ ಬಸ್, ರೈಲು ಹಾಗೂ ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆ ಹವಾನಿಯಂತ್ರಣಗಳಿವೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:45 pm, Mon, 7 July 25