Viral: ಆರ್ಡರ್ ಮಾಡಿದ ಆರು ನಿಮಿಷಕ್ಕೆ ಕೈ ಸೇರಿತು ಪ್ರಾಡಕ್ಟ್; ಬ್ಲಿಂಕಿಟ್‌ನ ಕ್ಷಿಪ್ರ ಸೇವೆ ಕಂಡು ವಿದೇಶಿಗ ಶಾಕ್
ಇತ್ತೀಚೆಗಿನ ದಿನಗಳಲ್ಲಿ ತಮಗೆ ಬೇಕಾದ ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲಿ ಖರೀದಿ ಮಾಡುವವರೇ ಹೆಚ್ಚು. ವಿದೇಶಿಗರು ಕೂಡ ಭಾರತಕ್ಕೆ ಬಂದರೆ ಆನ್ಲೈನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಆದರೆ ವಿದೇಶಿಗರೊಬ್ಬರು ಬ್ಲಿಂಕಿಟ್ ನಲ್ಲಿ ಆರ್ಡರ್ ಮಾಡಿದ್ದ ವಸ್ತು ಕ್ಷಣಾರ್ಧದಲ್ಲಿ ಮನೆ ಬಾಗಿಲಿಗೆ ಬಂದಿದೆ. ಈ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ವಿಡಿಯೋ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (Online shopping) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಕುಳಿತಲ್ಲಿಂದಲೇ ಬೇಕಾದ ವಸ್ತುಗಳನ್ನು ಆನ್ಲೈನ್‌ನಲ್ಲೇ ಆರ್ಡರ್ ಮಾಡುತ್ತಾರೆ. ಆದರೆ ದೆಹಲಿಗೆ ಬಂದಿದ್ದ ಅಮೆರಿಕನ್ ವ್ಯಕ್ತಿಗೆ ಹೊಸ ಅನುಭವವಾಗಿದೆ. ತಾನು ಆರ್ಡರ್ ಮಾಡಿದ್ದ ಐಟಂ ಕೇವಲ ಆರು ನಿಮಿಷಗಳಲ್ಲಿ ಮನೆಬಾಗಿಲಿಗೆ ಬಂದಿದೆ. ಬ್ಲಿಂಕಿಟ್‌ನ ಕ್ಷಿಪ್ರ ಸೇವೆಯನ್ನು ಕಂಡು ಅಚ್ಚರಿ ಪಟ್ಟು ಕೊಂಡಿದ್ದಾರೆ.
ವರ್ಕ್ ಪಾಂಡೆಮಿಕ್ (@workpandemic) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವಿದೇಶಿಗರೊಬ್ಬರು ಆನ್ಲೈನ್ ಶಾಪಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಅಮೆರಿಕ ಪ್ರಜೆ ಚಾರ್ಲಿ ಇವಾನ್ಸ್ ಇತ್ತೀಚೆಗೆ ದೆಹಲಿ ಆಗಮಿಸಿದ್ದ ವೇಳೆ ಬ್ಲಿಂಕಿ ಟ್‌ನಿಂದ ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಆರ್ಡರ್ ಮಾಡಿದ್ದರು. ಎಷ್ಟು ಬೇಗನೆ ಮನೆ ಬಾಗಿಲಿಗೆ ಆರ್ಡರ್ ಬರುತ್ತದೆ ಎಂದು ತಿಳಿಯಲು ರೆಕಾರ್ಡ್ ಮಾಡಿದ್ದು, ಈ ವೇಳೆ ಅಚ್ಚರಿಯೊಂದು ಕಾದಿದೆ. ಈ ವಿಡಿಯೋದಲ್ಲಿ ಸಂಜೆ 5:43ಕ್ಕೆ ವಿಡಿಯೊವನ್ನು ಪ್ರಾರಂಭಿಸಿದ್ದಾಗಿ ಹೇಳಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
American shocking reaction when he ordered on @letsblinkit and the order arrived within 6 minutes pic.twitter.com/HbqBnXUCtr
— Woke Eminent (@WokePandemic) December 26, 2025
ನಾನು ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ್ದೇನೆ. ಈ ಅಪ್ಲಿಕೇಶನ್ ಸೇವೆ ಎಷ್ಟು ವೇಗವಾಗಿದೆ ಎಂಬುದನ್ನು ನಾನು ನನ್ನ ಅಮೆರಿಕದ ಸ್ನೇಹಿತರಿಗೆ ತೋರಿಸುತ್ತಿದ್ದೇನೆ. ಎಷ್ಟು ನಿಮಿಷದಲ್ಲಿ ಬ್ಲಿಂಕಿಟ್ ಆರ್ಡರ್ ಬರುತ್ತದೆ ನೋಡೋಣ ಎಂದು ವಿವರಿಸುವುದನ್ನು ನೋಡಬಹುದು. ನಾನು ಆರ್ಡರ್ ಮಾಡಿದ ವಸ್ತು ಪಡೆದುಕೊಂಡಾಗ 5:49 ಆಗಿತ್ತು. ಅಂದರೆ 6 ನಿಮಿಷದಲ್ಲಿ ಆರ್ಡರ್ ಕೈ ಸೇರಿದೆ. ನೀರಿನ ಬಾಟಲ್ ಮತ್ತು ಸ್ಕ್ರೂಡ್ರೈವರ್ ಸರಿಯಾದ ಸಮಯಕ್ಕೆ ಕೈ ಸೇರಿದೆ. ಅವರ ಸೇವೆ ಅತ್ಯುತ್ತಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾಂಡೋಮ್‌ಗಾಗಿ ಬರೋಬ್ಬರಿ 1 ಲಕ್ಷ ರೂ ಖರ್ಚು ಮಾಡಿದ ಚೆನ್ನೈ ವ್ಯಕ್ತಿ
ಈ ವಿಡಿಯೋ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಹಲವು ಕ್ಷೇತ್ರಗಳಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಭಾರತದ ತ್ವರಿತ ವಿತರಣಾ ಸೇವೆಯನ್ನು ಇದು ಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಆಹಾರ ವಿತರಕರು ಎಷ್ಟು ಶ್ರದ್ಧೆ ಹಾಗೂ ವೇಗವಾಗಿ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




