spurious liquor: ಕಲಬೆರಕೆ ಮದ್ಯ ಸೇವಿಸಿ 21 ಮಂದಿ ಸಾವು; 40 ಮಂದಿ ತೀವ್ರ ಅಸ್ವಸ್ಥ
ಸಂತ್ರಸ್ತರೆಲ್ಲರೂ ದಿನಗೂಲಿ ಕಾರ್ಮಿಕರು. ಮದ್ಯದಲ್ಲಿ ಮೆಥನಾಲ್ ಅಂಶ ಮಿಶ್ರಣವಾಗಿದ್ದರಿಂದ ಸಾವಿಗೆ ಕಾರಣವಾಯಿತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಒಟ್ಟು ಸಾವಿನ ಸಂಖ್ಯೆ 21 ಕ್ಕೆ ತಲುಪಿದೆ. ಇದುವರೆಗೆ ಸುಮಾರು 40 ಮಂದಿ ತೀವ್ರ ಅಸ್ವಸ್ಥರಾಗಿದ್ದು,ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಪಂಜಾಬ್: ಕಲಬೆರಕೆ ಮದ್ಯ ಸೇವಿಸಿ 21 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್‌ನ ಹಾಡಿ ಸಂಗ್ರೂರ್ನಲ್ಲಿ ನಡೆದಿದೆ. ಎಥೆನಾಲ್ ಇರುವ ಮದ್ಯ ಸೇವಿಸಿದ್ದರಿಂದ ಈ ದುಷ್ಕೃತ್ಯ ನಡೆದಿದೆ. ಮದ್ಯ ಸೇವಿಸಿದ 40ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ.
ಸಂಗ್ರೂರ್ ಮುಖ್ಯ ವೈದ್ಯಕೀಯ ಅಧಿಕಾರಿ (CMO) ಪ್ರಕಾರ ಕಳೆದ ಬುಧವಾರ (ಮಾರ್ಚ್ 20) ಪಂಜಾಬ್‌ನ ಹಾಡಿ ಸಂಗ್ರೂರ್ ಜಿಲ್ಲೆಯ ಹಲವು ಗ್ರಾಮಗಳಿಗೆ ಸೇರಿದ ಜನರು ಮದ್ಯ ಸೇವಿಸಿದ್ದಾರೆ. ಪರಿಣಾಮ ಒಂದೇ ದಿನ ನಾಲ್ವರು ಸಾವನ್ನಪ್ಪಿದ್ದಾರೆ. ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮರುದಿನ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ಶುಕ್ರವಾರ (ಮಾರ್ಚ್ 22) ಎಂಟು ಜನರು ಸಾವನ್ನಪ್ಪಿದ್ದಾರೆ. ಮರುದಿನ, ಶನಿವಾರ (ಮಾರ್ಚ್ 23), ಇನ್ನೂ ಐವರು ಸಾವನ್ನಪ್ಪಿದರು, ಒಟ್ಟು ಸಾವಿನ ಸಂಖ್ಯೆ 21 ಕ್ಕೆ ತಲುಪಿದೆ. ಇದುವರೆಗೆ ಸುಮಾರು 40 ಮಂದಿ ತೀವ್ರ ಅಸ್ವಸ್ಥರಾಗಿದ್ದು,ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಂತ್ರಸ್ತರೆಲ್ಲರೂ ದಿನಗೂಲಿ ಕಾರ್ಮಿಕರು. ಈ ಘಟನೆಗೆ ಮದ್ಯದಲ್ಲಿ ಮೆಥನಾಲ್ ಅಂಶ ಮಿಶ್ರಣವಾಗಿದ್ದರಿಂದ ಸಾವಿಗೆ ಕಾರಣವಾಯಿತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ನವ ದಂಪತಿ ವಿರುದ್ಧ ಎಫ್‌ಐಆರ್ ದಾಖಲು
ಘಟನೆಯ ತನಿಖೆಗಾಗಿ ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ತನಿಖೆ ವೇಳೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮನೆಯೊಂದರಲ್ಲಿ ಕಲಬೆರಕೆ ಮದ್ಯ ತಯಾರಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿ 200 ಲೀಟರ್ ಎಥೆನಾಲ್, ವಿಷಕಾರಿ ರಾಸಾಯನಿಕ ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ಹರ್ಚರಣ್ ಸಿಂಗ್ ಭುಲ್ಲರ್ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ