Viral Video: 3 ಮೊಟ್ಟೆಗಳನ್ನು ಆಲೂಗಡ್ಡೆ ಚಿಪ್ಸ್​​​ ಪ್ಯಾಕೆಟ್​ನಲ್ಲಿ ಹಾಕಿ, ಮುಂದೇನಾಗುತ್ತದೆ ನೋಡಿ

Omlette : ನಿಜಕ್ಕೂ ಇದು ಅದ್ಭುತವಾದ ಪ್ರಯೋಗ ಆದರೆ ಅಷ್ಟೇ ಅನಾರೋಗ್ಯಕರವೂ ಎಂದ ಹಲವರು. ಪಿಕ್ನಿಕ್​ಗೆ ಹೋದಾಗ ಈ ರೆಸಿಪಿ ಬಹಳ ಅನುಕೂಲಕರ ಎಂದು ಕೆಲವರು. ಈ ವಿಡಿಯೋ ನೋಡಿದ ನೀವು ಏನು ಹೇಳುತ್ತೀರಿ?

Viral Video: 3 ಮೊಟ್ಟೆಗಳನ್ನು ಆಲೂಗಡ್ಡೆ ಚಿಪ್ಸ್​​​ ಪ್ಯಾಕೆಟ್​ನಲ್ಲಿ ಹಾಕಿ, ಮುಂದೇನಾಗುತ್ತದೆ ನೋಡಿ
ಆಲೂಗಡ್ಡೆ ಚಿಪ್ಸ್​ ಪ್ಯಾಕೆಟ್​ನಲ್ಲಿ ಮೊಟ್ಟೆಪಾಕ

Updated on: Jul 25, 2023 | 2:17 PM

Egg : ಸಮದ್ಸ್​ ಕಿಚನ್​ ಎಂಬ ಫೇಸ್​ಬುಕ್​ನಲ್ಲಿ ಈ ಪಾಕವಿಧಾನ ಹಂಚಿಕೊಳ್ಳಲಾಗಿದೆ. ಲೇಯ್ಸ್​ ಆಲೂಗಡ್ಡೆ ಚಿಪ್ಸ್​ ಪ್ಯಾಕೆಟ್​ನಲ್ಲಿರುವ (Potato Chips) ಚಿಪ್ಸ್​ಗಳನ್ನು ಪುಡಿಮಾಡಿ ಅದಕ್ಕೆ ಮೂರು ಮೊಟ್ಟೆಗಳನ್ನು ಒಡೆದು ಹಾಕಲಾಗುತ್ತದೆ. ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮ್ಯಾಟೋ, ಉಪ್ಪು, ಕೊತ್ತಂಬರಿ ಎಲ್ಲವನ್ನೂ ಈ ಪ್ಯಾಕೆಟ್​ಗೆ ಸುರಿಯಲಾಗುತ್ತದೆ. ಎಲ್ಲವನ್ನೂ ಮಿಕ್ಸ್​ ಮಾಡಿ ಈ ಪ್ಯಾಕೆಟ್​​ನ ಬಾಯಿಯನ್ನು ಗಟ್ಟಿಯಾಗಿ ಕಟ್ಟಿ ಕುದಿಯುವ ನೀರಿನೊಳಗೆ 15 ನಿಮಿಷ ಇಡಲಾಗುತ್ತದೆ. ನಂತರ ಪ್ಯಾಕೆಟ್​ ತೆರೆದರೆ! ನೋಡಿ ನೀವೆ ಹೇಗಿರುತ್ತದೆ ಎಂದು.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದು ಸ್ವಲ್ಪವೂ ಇಷ್ಟವಾಗಲಿಲ್ಲ, ಏಕೆಂದರೆ ನಾನ್‌ಫುಡ್‌ಗ್ರೇಡ್ ಪಾಲಿಬ್ಯಾಗ್‌ನಲ್ಲಿ ಅಡುಗೆ ಮಾಡುವುದು ಅಪಾಯಕಾರಿ ಎಂದಿದ್ದಾರೆ ಕೆಲವರು. ಇದರ ಬದಲಾಗಿ ಫ್ರೆಂಚ್ ಆಮ್ಲೆಟ್​ ತಯಾರಿಸಿ ಬ್ರೆಡ್ ಮತ್ತು ಚಿಪ್ಸ್​ನೊಂದಿಗೆ ತಿನ್ನಿ ಎಂದಿದ್ದಾರೆ ಒಬ್ಬರು. ವಾವ್​ ಇದು ಹೊಸಬಗೆಯ ವಿಧಾನ, ಪ್ರವಾಸಕ್ಕೆ ಹೋದಾಗ ಇದನ್ನು ತಯಾರಿಸುವುದು ಒಳ್ಳೆಯದು. ನನಗಂತೂ ಇದು ಬಹಳ ಉಪಯುಕ್ತವಾಗಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ವರ್ಕ್​ ಫ್ರಂ ಹೋಮ್​ ಮಾಡಿದರೆ ಕೆಲಸದಿಂದ ವಜಾ ಮಾಡುವುದಾಗಿ ಮೇಲಧಿಕಾರಿ ಬೆದರಿಕೆ

ಖಂಡಿತವಾಗಿಯೂ ಇದು ಆರೋಗ್ಯಕರವಾದ ವಿಧಾನವಲ್ಲ ಆದರೆ ಅದ್ಭುತವಾಗಿದೆ! ಎಂದಿದ್ದಾರೆ ಇನ್ನೊಬ್ಬರು. ನೀವೊಬ್ಬ ಅತ್ಯುತ್ತಮ ಪಾಕ ಪರಿಣತರು, ನಿಮ್ಮದೇ ಆದ ಪಾಕವಿಧಾನಗಳನ್ನು ನಾವು ಬಹಳ ಇಷ್ಟಪಡುತ್ತೇವೆ, ಅಂಥವನ್ನು ಹೆಚ್ಚು ಪೋಸ್ಟ್ ಮಾಡಿ ಎಂದಿದ್ದಾರೆ ಅನೇಕರು. ನಾನು ಈ ರೀತಿ ಈ ತಿನಿಸನ್ನು ಮಾಡುವ ವಿಡಿಯೋ ಅನ್ನು ಈ ಮೊದಲು ನೋಡಿದ್ದೇನೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಬೆಂಗಾಲಿಯನ್ನು ಫ್ರೆಂಚ್​ ಶೈಲಿಯಲ್ಲಿ, ಮರಾಠಿಯನ್ನು ಐರಿಷ್​ ಶೈಲಿಯಲ್ಲಿ ಮಾತನಾಡಿದಾಗ

ಈತನಕ ಈ ವಿಡಿಯೋ ಅನ್ನು 4 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 800 ಜನರು ಪ್ರತಿಕ್ರಿಯಿಸಿದ್ಧಾರೆ. 1,500 ಜನರು ಇಷ್ಟಪಟ್ಟಿದ್ಧಾರೆ. ದಿನಕ್ಕೆ ಸಾವಿರಾರು ಪಾಕಪ್ರಯೋಗಗಳ ವಿಡಿಯೋಗಳನ್ನು ನೀವು ನೋಡುತ್ತಿರುತ್ತೀರಿ. ಆದರೆ ಎಲ್ಲವೂ ಆರೋಗ್ಯಕರ ವಿಧಾನಗಳಿಂದ ಕೂಡಿರುತ್ತವೆಯೇ? ಎನ್ನುವುದನ್ನು ಗಮನಿಸುವುದು ಒಳಿತು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

 

Published On - 2:15 pm, Tue, 25 July 23