ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧುಗೆ ದೆಹಲಿಗೆ ಹಿಂತಿರುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಜತೆ ಐಸ್ಕ್ರೀಂ ತಿನ್ನುವ ಅವಕಾಶ
ಆಗಸ್ಟ್ 3ರಂದು ಸಿಂಧು ಬರುತ್ತಿದ್ದಾಳೆ. ನಾನು ದೆಹಲಿಗೆ ತೆರಳಬೇಕು ಎಂದು ಯೋಚಿಸುತ್ತಿದ್ದೇನೆ. ಒಲಂಕ್ಸ್ನಲ್ಲಿ ನಾವು ಸಾಧ್ಯವಾದಷ್ಟೂ ಪದಕಗಳನ್ನು ಬಾಚಿಕೊಳ್ಳಬೇಕು. ಸಿಂಧು ಸಾಧನೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಿಂಧು ಅವರ ತಂದೆ ಹೇಳಿದ್ದಾರೆ.
ನಡೆಯುತ್ತಿರುವ ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ನೀಡಿ ನಮ್ಮನ್ನು ಬೆರಗುಗೊಳಿಸುತ್ತಿದ್ದಾರೆ. ಮೊದಲಿಗೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದರು. ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ. ಒಲಿಂಪಿಕ್ ಪದಕಗಳನ್ನು ಸತತವಾಗಿ ಎರಡು ವರ್ಷ ಗೆದ್ದ ಭಾರತೀಯ ಮಹಿಳೆ. ಈ ಸಂತೋಷದ ವಿಷಯವನ್ನು ಪಿವಿ ಸಿಂಧು ಅವರ ತಂದೆ ಪಿವಿ ರಮಣ ಅವರು ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. ಒಲಿಂಪಿಕ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಂತೆಯೇ ಪ್ರಧಾನಿ ಮೋದಿಯವರೊಂದಿಗೆ ಐಸ್ಕ್ರೀಂ ತಿನ್ನುವ ಯೋಚನೆಯಲ್ಲಿದ್ದಾರೆ ಎಂದು ತಿಳಿಸಿದರು.
ಆಗಸ್ಟ್ 3ರಂದು ಸಿಂಧು ಬರುತ್ತಿದ್ದಾಳೆ. ನಾನು ದೆಹಲಿಗೆ ತೆರಳಬೇಕು ಎಂದು ಯೋಚಿಸುತ್ತಿದ್ದೇನೆ. ಒಲಂಪಿಕ್ಸ್ನಲ್ಲಿ ನಾವು ಸಾಧ್ಯವಾದಷ್ಟೂ ಪದಕಗಳನ್ನು ಬಾಚಿಕೊಳ್ಳಬೇಕು. ಸಿಂಧು ಸಾಧನೆಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಒಲಂಪಿಕ್ಸ್ ಮುಗಿಸಿ ಮರಳಿದ ಬಳಿಕ ಇಬ್ಬರೂ ಐಸ್ಕ್ರೀಂ ತಿನ್ನುತ್ತೇವೆ ಎಂದು ಪ್ರಧಾನಿ ಹೇಳಿದ್ದಾರೆ. ಸಿಂಧು ಹಿಂತಿರುಗಿದ ಬಳಿಕ ಪ್ರಧಾನಿಯವರ ಜತೆ ಐಸ್ಕ್ರೀಂ ತಿನ್ನುತ್ತಾಳೆ ಎಂದು ಅವರು ಹೇಳಿದ್ದಾರೆ.
ಜುಲೈ 13ರಂದು ಪಿಎಂ ಮೋದಿ, ಪಿವಿ ಸಿಂಧು ಮತ್ತು ಕುಟುಂಬದವರೊಂದಿಗೆ ಚರ್ಚೆ ನಡೆಸಿದ್ದರು. ಅವಳ ಆಹಾರ ಕ್ರಮದ ಬಗ್ಗೆ ಕೇಳಿದಾಗಿ ಸಿಂಧು ಹೀಗೆ ಉತ್ತರಿಸಿದ್ದರು. ನಿಸ್ಸಂಶಯವಾಗಿಯೂ ನಾನು ಆಹಾರ ಕ್ರಮದ ಬಗ್ಗೆ ಹೆಚ್ಚು ಗಮನವಹಿಸಬೇಕು. ಏಕೆಂದರೆ ಕ್ರೀಡಾಪಟುವಿಗೆ ಆಹಾರದ ಕ್ರಮ ಬಹಳ ಮುಖ್ಯ. ನಾನು ಒಲಿಂಪಿಕ್ ತಯಾರಿ ನಡೆಸುತ್ತಿರುವುದರಿಂದ ಆಹಾರ ನಿಯಂತ್ರಣದಲ್ಲಿರಲೇಬೇಕು ಎಂದು ಹೇಳಿದರು. ಸ್ಪರ್ಧೆ ಮುಗಿದ ಬಳಿಕ ಕ್ರೀಡಾಪಟುವಿನೊಂದಿಗೆ ಐಸ್ಕ್ರೀಂ ತಿನ್ನುತ್ತೇನೆ ಎಂದು ಪ್ರಧಾನಿ ಹೆಳಿದ್ದರು.
Being an athlete requires a rigorous schedule and hardwork. I asked @Pvsindhu1 about her love for ice-cream and also interacted with her parents. pic.twitter.com/Hlapc8VJhp
— Narendra Modi (@narendramodi) July 13, 2021
ಸಿಂಧು ಹಿಂತಿರುಗಿದ ಮೇಲೆ ಇಬ್ಬರೂ ಐಸ್ಕ್ರೀಂ ತಿನ್ನುವುದನ್ನು ನೋಡಲು ನಾವು ಖಂಡಿತವಾಗಿಯೂ ಕಾಯುತ್ತಿದ್ದೇವೆ ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
PV Sindhu: ಒಲಂಪಿಕ್ಸ್ನಲ್ಲಿ ಕಂಚಿನ ಪದಕ ಪಡೆದ ಪಿವಿ ಸಿಂಧು ಗುರು ಯಾರು?
PV Sindhu: ಪಿವಿ ಸಿಂಧುಗೆ ಕಂಚಿನ ಪದಕ: ಹೊಸ ದಾಖಲೆ ಬರೆದ ಭಾರತೀಯ ಆಟಗಾರ್ತಿ