Viral Video: ಆಕಾಶದ ಬಣ್ಣ ಬದಲು! ವಿಸ್ಮಯ ವಿದ್ಯಮಾನಕ್ಕೆ ಕಾರಣ ಉಲ್ಕಾಪಾತವೋ ಅಥವಾ ಅನ್ಯಗ್ರಹ ಜೀವಿಗಳೋ?
ಟರ್ಕಿಯ ಡಾ. ಹಸನ್ ಅಲಿ ಎಂಬ ಖಗೋಲಶಾಸ್ತ್ರ ಪರಿಣಿತರೊಬ್ಬರು ಸಹ ಈ ಕುರಿತು ವಿವರಿಸಿದ್ದು, ಉಲ್ಕೆಯೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕಾರಣ ಹೊತ್ತಿ ಉರಿದಿದೆ. ಈ ಕಾರಣದಿಂದಲೇ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ಟರ್ಕಿ ದೇಶದ ಇಜ್ಮೀರ್ ಎಂಬ ನಗರದಲ್ಲಿ ಇಡೀ ಆಕಾಶವು ಹಸಿರು ಬಣ್ಣಕ್ಕೆ ತಿರುಗಿದಂತೆ ಒಂದು ಕ್ಷಣ ಕಾಣಿಸಿದ್ದು ಅತ್ಯಂತ ಆಶ್ಚರ್ಯ ಮೂಡಿಸಿದೆ. ಈ ಘಟನೆಯಿಂದ ನಗರವಾಸಿಗಳು ದಿಗಿಲುಗೊಂಡಿದ್ದಷ್ಟೇ ಅಲ್ಲದೇ, ಭಯಭೀತರೂ ಆಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಸ್ಮಯ ವಿದ್ಯಮಾನದ ((Sky Colour change in Turkey) ಹಿಂದೆ ಅನ್ಯಗ್ರಹ ಜೀವಿಗಳು (UFO) ಕೈವಾಡ ಇದೆ ಎಂದು ಸಹ ಕೆಲವರು ವಾದಿಸುತ್ತಿದ್ದಾರೆ. ಇನ್ನು ಕೆಲವರು ಉಲ್ಕಾಪಾತದಿಂದ ಆಕಾಶ ಹಸಿರುಗಟ್ಟಿದೆ ಎಂದು ವಾದಿಸಿದ್ದಾರೆ.
ಜುಲೈ 31ರಂದು ಟರ್ಕಿಯ ಇಜ್ಮಿರ್ ನಗರದಲ್ಲಿ ಈ ವಿದ್ಯಮಾನ ನಡೆದಿದೆ. ಕೆಲವು ವಿಡಿಯೋಗಳಲ್ಲಿ ಉಲ್ಕೆಯೊಂದು ಭೂಮಿಯತ್ತ ಪತನ ಹೊಂದುತ್ತಿರುವುದನ್ನು ಸಹ ಕಾಣಬಹುದಾಗಿದೆ. ಉಲ್ಕೆ ವಾತಾವರಣದತ್ತ ಬಂದು ಮಿಂಚಿನಂತೆ ಮಾಯವಾಗುತ್ತದೆ. ಅದೇ ಕ್ಷಣದಲ್ಲಿ ಆಕಾಶ ಒಮ್ಮೆ ಹಸಿರಾಗಿ ಕಾಣುತ್ತದೆ. ಇದು ಉಲ್ಕಾಪಾತವಲ್ಲ, ಬದಲಿಗೆ ಯಾವುದೋ ಉಪಗ್ರಹವೊಂದು ಪತನಗೊಂಡಿರುವುದು ಎಂದು ಕೆಲವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಟರ್ಕಿಯ ಡಾ. ಹಸನ್ ಅಲಿ ಎಂಬ ಖಗೋಲಶಾಸ್ತ್ರ ಪರಿಣಿತರೊಬ್ಬರು ಸಹ ಈ ಕುರಿತು ವಿವರಿಸಿದ್ದು, ಉಲ್ಕೆಯೊಂದು ಭೂಮಿಯ ವಾತಾವರಣವನ್ನು ಪ್ರವೇಶಿಸಿದ ಕಾರಣ ಹೊತ್ತಿ ಉರಿದಿದೆ. ಈ ಕಾರಣದಿಂದಲೇ ಆಕಾಶ ಹಸಿರು ಬಣ್ಣದಲ್ಲಿ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
A green #meteor was seen over #Izmir #Turkey. This is not a meteor, just a tiny/demo missile/bomb shot from satellite ?️. Notice the fire ? as meteor enters Earth’s atmosphere, you will see same effects in next videos in this thread. 1/5 ? pic.twitter.com/m4S1vdQdAw
— Ehsan Elahi (@VerySmartEhsan) August 1, 2021
Meteor in İzmir Turkey. A bizarre green meteor fell to Earth. Footage Shows Meteor turning the sky a Brilliant Green.@AliSahin501 pic.twitter.com/cD10gVqOIv
— Syed Muhammad Madni (@M1Pak) August 2, 2021
Geçtiğimiz gece saat 01:54 civarında İzmir’de gökyüzünde video kaydı yapılan olay bir meteor olayıdır. Daha önceki yıllarda gündüz saatlerinde yaşanmış çok benzer bir olayın buradaki video kaydındaki gibi görünen ve “Fireball (Ateştopu)” olarak bilinen bu olay, pic.twitter.com/tMKe56ClSj
— Hasan Ali Dal (@hsnldl) July 31, 2021
ಇದನ್ನೂ ಓದಿ:
Viral Video: ಮದುವೆಗೆ ತಯಾರಾಗಲು ವರನಿಗೆ ಸಹಾಯ ಮಾಡುತ್ತಿರುವ ವಧು! ಇಬ್ಬರ ನವಿರಾದ ಕ್ಷಣದ ವಿಡಿಯೋ ವೈರಲ್
ಹಳೆಯ ಫೋಟೋ ವೈರಲ್ ಪ್ರಕರಣ; ಕೋರ್ಟ್ ಮೊರೆ ಹೋದ ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ
(Sky Colour change in turkey UFO Or Satellite crash viral video)