Viral Video: ಮೊಲದ ಮರಿ ಈಜುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಪರೂಪದ ದೃಶ್ಯ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ತಮಾಷೆಯ ದೃಶ್ಯಗಳಾಗಿದ್ದರೆ ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ.

Viral Video: ಮೊಲದ ಮರಿ ಈಜುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅಪರೂಪದ ದೃಶ್ಯ ವೈರಲ್
ಮೊಲದ ಮರಿ ಈಜುವುದನ್ನು ನೀವು ಎಂದಾದರೂ ನೋಡಿದ್ದೀರಾ?
Edited By:

Updated on: Aug 31, 2021 | 9:09 AM

ಮೊಲ ಸ್ವಿಮ್ಮಿಂಗ್ ಮಾಡುತ್ತಿರುವ ದೃಶ್ಯವನ್ನು ಎಂದಾದರೂ ನೋಡಿದ್ದಿರಾ? ನಿಜವಾಗಿಯೂ ಅಪರೂಪದ ದೃಶ್ಯವಿದು. ಮುದ್ದು ಮುದ್ದಾಗಿರುವ ಮೊಲಕ್ಕೆ ನೀರು ನೋಡಿದಾಕ್ಷಣ ಖುಷಿಯಾಗಿದೆ. ತಡಮಾಡದೇ ಸ್ವಿಮ್ ಮಾಡಲು ಹೊರಟಿದೆ. ಈ ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರಿಗೆ ಇಷ್ಟವಾಗುವಂತಿದೆ.

ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವು ತಮಾಷೆಯ ದೃಶ್ಯಗಳಾಗಿದ್ದರೆ ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ಹಿಂದೆಲ್ಲೂ ನೋಡಿರದ ಕೆಲವು ದೃಶ್ಯಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಅದರಲ್ಲಿಯೂ ಮುಖ್ಯವಾಗಿ ಪುಟ್ಟ ಪುಟ್ಟ ಪ್ರಾಣಿಗಳು ಸಂತೋಷದಿಂದಿರುವ ಕೆಲವು ದೃಶ್ಯಗಳು ಜನರ ಮನ ಗೆಲ್ಲುತ್ತದೆ. ಅಂಥಹುದೇ ಒಂದು ವಿಡಿಯೋ ಇದಾಗಿದದು, ಅಪರೂಪದ ದೃಶ್ಯ ನೋಡಿದ ನೆಟ್ಟಿಗರು ಖುಷಿಪಟ್ಟಿದ್ದಾರೆ.

ಇದು ನಿಜವಾಗಿಯೂ ಅಪರೂಪದ ದೃಶ್ಯ ಎಂದು ಓರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಮೊಲ ನೀರಿನಲ್ಲಿ ಈಜುವ ದೃಶ್ಯ ಕಂಡು ಬರುವುದಿಲ್ಲ. ಆದರೆ ಇಲ್ಲಿರುವ ಮೊಲ ನೀರು ಕಂಡು ಖುಷಿ ಪಟ್ಟಿದೆ. ಆಶ್ಚರ್ಯವೆಂದರೆ ಒಂದು ಕಡೆಯಿಂದ ಮತ್ತೊಂದು ಕಡೆ ದಡ ತಲುಪಲು ನೀರಿನಲ್ಲಿ ಈಜಲು ಮುಂದಾಗಿಲ್ಲ. ಖುಷಿಯಾದ ಮೊಲಕ್ಕೆ ಒಮ್ಮೆ ನೀರಿನಲ್ಲಿ ಈಜುವ ಆಸೆ! ಹಾಗಾಗಿ ಒಂದು ರೌಂಡ್​ ಸ್ವಿಮ್​ ಮಾಡಿ ಪುನಃ ತಾನು ಮೊದಲಿದ್ದ ಸ್ಥಳಕ್ಕೆ ತಲುಪಿದೆ. ಮುದ್ದಾದ ಮೊಲ ನೀರಿನಲ್ಲಿ ವೇಗವಾಗಿ ಈಜುತ್ತಿರುವ ದೃಶ್ಯ ನೋಡಿದಾಕ್ಷಣ ಖುಷಿಯಾಗುವುದಂತೂ ಸತ್ಯ.

ಇದನ್ನೂ ಓದಿ:

Viral Video: ಇದು ಕಲ್ಲಂಗಡಿ ಆದ್ರೆ ವಾಟರ್​ಮೆಲನ್ ಅಲ್ಲ: ಖತರ್ನಾಕ್ ಪ್ಲ್ಯಾನ್ ಮಾಡಿ ಸಿಕ್ಕಿ ಬಿದ್ದ ಖದೀಮರು

Viral Video: ಲೂಸಿಯಾನದಲ್ಲಿ ಇಡಾ ಚಂಡಮಾರುತದ ಅಬ್ಬರ; ಹಿಮ್ಮುಖವಾಗಿ ಹರಿಯಿತು ಮಿಸಿಸಿಪ್ಪಿ ನದಿ

(Rabbit swimming and enjoying water rare video goes viral )