ಅಬ್ಬಬ್ಬಾ! ದೆಹಲಿಯಲ್ಲಿ ಚಿಂದಿ ಆಯುವವರ ದಿನದ ಆದಾಯ 1.5 ಕೋಟಿ ರೂ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಂದಿ ಆಯುವವರು ಪ್ರತಿನಿತ್ಯ ಪ್ಲಾಸ್ಟಿಕ್, ಕಬ್ಬಿಣ ಇತ್ಯಾದಿ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ದಿನಕ್ಕೆ  1.5 ಕೋಟಿ ರೂಪಾಯಿ ಆದಾಯ  ಗಳಿಸುತ್ತಾರೆ ಎಂದು  ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ (ASCI)  ನಡೆಸಿದ ವರದಿಯು  ಬಹಿರಂಗ ಪಡಿಸಿದೆ. 

ಅಬ್ಬಬ್ಬಾ! ದೆಹಲಿಯಲ್ಲಿ ಚಿಂದಿ ಆಯುವವರ ದಿನದ ಆದಾಯ 1.5 ಕೋಟಿ ರೂ. 
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2024 | 5:08 PM

ಚಿಂದಿ ಆಯುವವರು ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ,   ಅವುಗಳನ್ನು ಮಾರಾಟ ಮಾಡಿ ಅದರಿಂದ ಬರುವ ಅಲ್ಪಸ್ವಲ್ಪ ಆದಾಯದಿಂದ ಜೀವನ ಸಾಗಿಸುತ್ತಾರೆ. ಆದರೆ ದೆಹಲಿಯಲ್ಲಿ ಚಿಂದಿ ಆಯುವವರು ದಿನದಲ್ಲಿ 1.5 ಕೋಟಿ ರೂ. ಆದಾಯ ಗಳಿಸುತ್ತಾರಂತೆ.  ಹೌದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಂದಿ ಆಯುವವರು ದಿನಕ್ಕೆ ಬರೋಬ್ಬರಿ 1.5 ಕೋಟಿ ರೂಪಾಯಿ ಗಳಿಸುತ್ತಾರೆ ಎಂಬ ಆಘಾತಕಾರಿ ಮಾಹಿತಿಯನ್ನು ವರದಿಯೊಂದು ಬಹಿರಂಗ ಪಡಿಸಿದೆ. ಅಡ್ಮಿನಿಸ್ಟ್ರೇಟಿವ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾ (ASCI)  ನಡೆಸಿದ ಲೆಕ್ಕ ಪರಿಶೋಧನೆಯು ಈ ವರದಿಯನ್ನು ಬಹಿರಂಗ ಪಡಿಸಿದೆ.

ದೆಹಲಿಯಲ್ಲಿ ಪ್ರತಿದಿನ 11 ಸಾವಿರದ 30 ಮೆಟ್ರಿಕ್ ಟನ್  ಕಸ ಸಂಗ್ರಹವಾಗುತ್ತದೆ:

ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಪ್ರತಿದಿನ  11 ಸಾವಿರದ 30 ಮೆಟ್ರಿಕ್ ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಶೇ. 10 ರಷ್ಟು ಅಂದರೆ 1.10 ಲಕ್ಷ ಕಿಲೋ ತ್ಯಾಜ್ಯವು ಪ್ಲಾಸ್ಟಿಕ್, ಇ-ತ್ಯಾಜ್ಯ, ರಬ್ಬರ್, ಕಾಗದದ ರಟ್ಟು ಮತ್ತು ಕಬ್ಬಿಣದ ರೂಪದಲ್ಲಿದೆ. ಮತ್ತು ಇದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆ.ಜಿಗೆ 12 ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಮೂಲಕ ದೆಹಲಿಯ ಚಿಂದಿ ಆಯುವವರು ಒಟ್ಟಾರೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕವೇ  ದಿನದಲ್ಲಿ 1.32 ಕೋಟಿ ರೂ. ಗಳಿಸುತ್ತಿದ್ದಾರೆ. ಇದರ ಹೊರತಾಗಿ ಕಬ್ಬಿಣ, ಪೇಪರ್ ತ್ಯಾಜ್ಯಗಳನ್ನು ಮಾರಾಟ ಮಾಡುವ ಮೂಲಕ ಬರೋಬ್ಬರಿ 5 ಕೋಟಿ ರೂ. ಆದಾಯ ಗಳಿಸುತ್ತಾರೆ ಎಂಬ ವಿಚಾರ  ASCI  ಆಡಿಟ್ ನಿಂದ ಬಹಿರಂಗವಾಗಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲಿಯೇ ಮೂತ್ರ ವಿಸರ್ಜನೆ ಮಾಡಿದ ಆಸಾಮಿ, ಇದಕ್ಕೆ ಟ್ರಾಫಿಕ್ ಕಾರಣ

ಹೀಗೆ  ಇಲ್ಲಿನ ಚಿಂದಿ ಆಯುವ ಪ್ರತಿಯೊಬ್ಬ  ವ್ಯಕ್ತಿ ದಿನಕ್ಕೆ 14,000 ರೂ. ಗಳಿಗಿಂತಲೂ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ ಮತ್ತು ಅವರ ಗುತ್ತಿಗೆದಾರರು ತಿಂಗಳಿಗೆ 25,000 ರೂ. ಆದಾಯ ಗಳಿಸುತ್ತಾರೆ ಎಂದು ವರದಿ ತಿಳಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ