Rahul Gandhi: ಅಮೆರಿಕನ್​ ಟ್ರಕ್ ಯಾತ್ರಾ; ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ರಾಹುಲ್ ಪ್ರಯಾಣ

|

Updated on: Jun 15, 2023 | 3:30 PM

American Truck Yatra: "ಟ್ರಕ್ಕುಗಳು ದೇಶದ ನಾಡಿಗಳು. ಶ್ರಮಜೀವಿಗಳಾದ ನನ್ನ ದೇಶದ ಚಾಲಕಸೋದರರಿಗೆ ಕನಿಷ್ಟ ವೇತನ ಮತ್ತು ಇಂಧನ ಖರ್ಚಿಗೆ ಅಗತ್ಯವಾದ ಉದ್ದರಿ ಸೌಲಭ್ಯವೂ ಸಿಗಬೇಕು'' ಭಾರತೀಯ ಮೂಲದ ಅಮೆರಿಕದ ಟ್ರಕ್​ ಡ್ರೈವರ್.

Rahul Gandhi: ಅಮೆರಿಕನ್​ ಟ್ರಕ್ ಯಾತ್ರಾ; ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ರಾಹುಲ್ ಪ್ರಯಾಣ
ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್​ನೊಂದಿಗೆ ರಾಹುಲ್ ಗಾಂಧಿ
Follow us on

American Truck Yatra: ಈ ಹೃದಯ ಸಂವಾದವನ್ನು ನಾನು ಸಂತೋಷದಿಂದ ಅನುಭವಿಸಿದ್ದೇನೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಟ್ರಕ್ ಡ್ರೈವರ್​ಗಳೊಂದಿಗೆ ವಾಷಿಂಗ್ಟನ್​ ಡಿಸಿಯಿಂದ ನ್ಯೂಯಾರ್ಕ್​ಗೆ ಪ್ರಯಾಣಿಸಿದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಡ್ರೈವರ್​ಗಳ ನಿತ್ಯಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರಯಾಣವನ್ನು ಅವರು ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಈ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ದೆಹಲಿಯಿಂದ ಚಂಡೀಗಢಕ್ಕೆ (Chandigarh) ಇದೇ ರೀತಿಯ ಪ್ರಯಾಣದ ಅನುಭವವನ್ನು ಅವರು ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡ್ರೈವರ್​ಗಳ ಜೊತೆ ಪ್ರಾಸಂಗಿಕವಾಗಿ ಮಾತನಾಡುತ್ತ ಅಲ್ಲಿಯ ಮತ್ತು ಭಾರತದ ಟ್ರಕ್ ಡ್ರೈವರ್​​ಗಳ ಜೀವನಶೈಲಿ ಮತ್ತು ಸೌಲಭ್ಯಗಳಲ್ಲಿರುವ ವ್ಯತ್ಯಾಸಗಳನ್ನು ಅವಲೋಕಿಸಿದ್ದಾರೆ. “ಟ್ರಕ್ ಓಡಿಸುವುದೆಂದರೆ ಎಲ್ಲಿದ್ದರೂ ಶ್ರಮದ ಕೆಲಸವೇ. ಆದರೆ ಇಲ್ಲಿ ಕಷ್ಟಪಟ್ಟರೂ ಒಳ್ಳೆಯ ಆದಾಯವಿದೆ. ಟ್ರಕ್ಕುಗಳನ್ನು ಡ್ರೈವರ್​​ಗಳಿಗೆ ಅನುಕೂಲಕರವಾಗುವಂತೆ ನಿರ್ಮಿಸಲಾಗಿರುತ್ತದೆ ಅವರ ಸುರಕ್ಷತೆಗೆ ಆದ್ಯತೆ ನೀಡಿರಲಾಗಿರುತ್ತದೆ. ದಾರಿಯಲ್ಲಿ ಪೊಲೀಸರ ಕಿರಿಕಿರಿ ಮತ್ತು ಕಳ್ಳರ ಹಾವಳಿ ಇರುವುದಿಲ್ಲ. ಹೀಗಾಗಿ ನಿರಾತಂಕವಾಗಿ ಓಡಿಸಬಹುದು,” ಎಂದು ಡ್ರೈವರ್​​ಗಳು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ; ಹಿರಿಯರೆಲ್ಲ ಕಿರಿಯರೆದುರು ಹೀಗೆ ಸುಮ್ಮನಿದ್ದರದೇ ಸ್ವರ್ಗ

ಭಾರತದ ನಿಮ್ಮ ಟ್ರಕ್ಕರ್ ಬಂಧುಗಳಿಗೆ ಏನು ಸಂದೇಶ ಕೊಡಬಯಸುತ್ತೀರಿ ಮತ್ತು ಅವರಿಗಾಗಿ ಏನು ಮಾಡಬಹುದು ಎಂದು ರಾಹುಲ್ ಕೇಳಿದಾಗ, “ಟ್ರಕ್ಕುಗಳು ದೇಶದ ನಾಡಿಗಳು. ಶ್ರಮಜೀವಿಗಳಾದ ನನ್ನ ದೇಶದ ಡ್ರೈವರ್ ಸೋದರರಿಗೆ ಕನಿಷ್ಟ ವೇತನವಾದರೂ ಬರುವಂತೆ ನೋಡಿಕೊಳ್ಳಬೇಕು ಮತ್ತು ಇಂಧನ ಖರ್ಚಿಗೆ ಅಗತ್ಯವಾದ ಉದ್ದರಿ (credit) ಸೌಲಭ್ಯ ಸಿಗುವಂತಾಗಬೇಕು,” ಎಂಬ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ : Viral Post: ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ; ನಾಸಾ ಬಿಡುಗಡೆ ಮಾಡಿದ ಚಿತ್ರವೀಗ ವೈರಲ್

ಟ್ರಕ್ ಡ್ರೈವರ್​ಗಳ ಜೊತೆ ತಿಂಡಿ ತಿಂದು ಅವರ ಮಾತುಗಳನ್ನು ಆಸಕ್ತಿಯಿಂದ ಕೇಳುವುದನ್ನು ಇಲ್ಲಿ ಗಮನಿಸಬಹುದು. ರಾಜಕೀಯ ನಾಯಕರ ಸಾಮಾನ್ಯ ಜನರೊಂದಿಗಿನ ಸಂವಾದಗಳು ಕೇವಲ ಫೋಟೋಆಪ್ (PhotoOp) ಆಗುಳಿದು, ಮನದಾಳದ ಮಾತುಗಳು ಮೇಲಿಂದ ಕೆಳಬೀಳುವ ಏಕಮುಖೀ ವಾಗ್ಝರಿಯಾಗಿ, ಎಲ್ಲವೂ ತೋರಿಕೆಯಾಗಿರುವ ಈ ಕಾಲದಲ್ಲಿ ರಾಹುಲ್ ಗಾಂಧಿಯವರು ಈ ರೀತಿ ಜನರೊಂದಿಗೆ ಬೆರೆಯುವುದು ಮೇಲ್ನೋಟಕ್ಕಾದರೂ ಪ್ರಾಮಾಣಿಕವೆನ್ನಿಸಿದರೆ ಆಶ್ಚರ್ಯವೇನಿಲ್ಲ. ನಿಮಗೇನೆನ್ನಿಸುತ್ತದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 3:28 pm, Thu, 15 June 23