ಭದ್ರತಾ ಸಿಬ್ಬಂದಿಯ ಮನವಿ ಮೇರೆಗೆ ದೇಶಭಕ್ತಿ ಹಾಡು ನುಡಿಸಿದ ಕೊಳಲುವಾದಕ

ಸಂಗೀತಕ್ಕೆ ಮನಸೋಲದವರು ಯಾರಿಲ್ಲ ಹೇಳಿ, ಸಂಗೀತವೇ ಹಾಗೆ ಒಂದು ಕ್ಷಣ ಎಲ್ಲರನ್ನು ಮೋಡಿ ಮಾಡುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಕೋರಿಕೆಯ ಮೇರೆಗೆ ಕೊಳಲುವಾದಕರೊಬ್ಬರು ಕೊಳಲಿನಲ್ಲಿ ದೇಶಭಕ್ತಿ ಹಾಡನ್ನು ನುಡಿಸಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋವೊಂದು ಸೋಶಿಯಲ್ ಮೀಡಿಯಾ ಬಳಕೆದಾರರ ಮನಸ್ಸನ್ನು ಗೆದ್ದುಕೊಂಡಿದ್ದು ಮೆಚ್ಚುಗೆಯ ಪ್ರತಿಕ್ರಿಯೆಗಳು ಹರಿದು ಬಂದಿದೆ.

ಭದ್ರತಾ ಸಿಬ್ಬಂದಿಯ ಮನವಿ ಮೇರೆಗೆ ದೇಶಭಕ್ತಿ ಹಾಡು ನುಡಿಸಿದ ಕೊಳಲುವಾದಕ
ವೈರಲ್ ವಿಡಿಯೋ
Image Credit source: Instagram

Updated on: May 04, 2025 | 11:05 AM

ರಾಯ್ ಪುರ್, ಮೇ 4 : ಸಂಗೀತ (music) ದ ಶಕ್ತಿಯೇ ಅಂತಹದ್ದು, ಎಷ್ಟೇ ನೋವಿರಲಿ ಸಂಗೀತ ಕೇಳಿದರೆ ಸಾಕು, ಭಾರವಾದ ಮನಸ್ಸನ್ನು ತಿಳಿಗೊಳಿಸುತ್ತದೆ. ಹೀಗಾಗಿ ಸಂಗೀತ ಪ್ರಿಯರು ಬಿಡುವಿನ ಸಮಯದಲ್ಲಿ ಹಾಡು ಕೇಳಲು ಇಷ್ಟ ಪಡುತ್ತಾರೆ. ಇದೀಗ ಕೊಳಲುವಾದಕರೊಬ್ಬರು  ವಿಮಾನ ನಿಲ್ದಾಣದಲ್ಲಿ ತಮ್ಮ ಕೊಳಲಿನಲ್ಲಿ ದೇಶಭಕ್ತಿಹಾಡನ್ನು ನುಡಿಸುವ ಮೂಲಕ ಅಲ್ಲಿಂದವರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಹೌದು, ರಾಯ್ ಪುರ್ ವಿಮಾನ ನಿಲ್ದಾಣ (raipur airport) ದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಸಿಆರ್ ಪಿ ಎಫ್ ಯೋಧ (CRPF soldier) ರ ಮನವಿಯ ಮೇರೆಗೆ ಸೂಫಿ ಬಾಲಿವುಡ್ ಫ್ಯೂಷನ್ ಬ್ಯಾಂಡ್ ಜೈಪುರಿ ಬ್ರದರ್ ನ ಕೊಳಲು ವಾದಕ ತೇರಿ ಮಿಟ್ಟಿ ಗೀತೆಯನ್ನು ನುಡಿಸಿದ್ದು, ಈ ಹೃದಯ ಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ.

Jaipuri brothers and Artist mehaboob flute ಹೆಸರಿನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ರಾಯ್ ಪುರ್ ವಿಮಾನ ನಿಲ್ದಾಣದಲ್ಲಿ, ವಿಮಾನ ನಿಲ್ದಾಣದ ಸಿಬ್ಬಂದಿಯ ಕೋರಿಕೆಯ ಮೇರೆಗೆ ಸಣ್ಣ ಪ್ರದರ್ಶನ ನೀಡಿದ್ದೇವೆ. ಸಂಗೀತ ಪ್ರಿಯರಿಗೆ ಹಾಗೂ ವಿಮಾನ  ನಿಲ್ದಾಣದ ಸಿಬ್ಬಂದಿಗಳನ್ನು ಸಂಗೀತದ ಮೂಲಕ ಖುಷಿ ಪಡಿಸಿದ್ದಕ್ಕೆ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ?
ಸಾಕು ಗಿಡುಗನಿಗೂ ಪಾಸ್‌ಪೋರ್ಟ್‌ ಮಾಡಿಸಿದ ವ್ಯಕ್ತಿ
ದೈತ್ಯ ಚೀತಾವನ್ನು ಅಪ್ಪಿ ಮುದ್ದಾಡಿದ ಮಹಿಳೆ
ಪಾಕಿಸ್ತಾನ ವಿರುದ್ಧ ಬಾಂಬ್ ಕಟ್ಕೊಂಡು ಯುದ್ಧಕ್ಕೆ ಹೋಗ್ತೀನಿ: ಸಚಿವ ಜಮೀರ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ವೈರಲ್ ಆಗಿರುವ ವಿಡಿಯೋದಲ್ಲಿ ಜೈಪುರಿ ಬ್ರದರ್ಸ್ ಕಾರ್ಯಕ್ರಮವೊಂದರಲ್ಲಿ ತೆರಳಲು ವಿಮಾನ ನಿಲ್ದಾಣದಲ್ಲಿದ್ದರು. ಈ ವೇಳೆಯಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಸಿಆರ್ ಪಿ ಎಫ್ ಯೋಧರು ಇವರ ಬ್ಯಾಗ್ ನಲ್ಲಿ ಕೊಳಲುಗಳು ಇರುವುದನ್ನು ಗಮನಿಸಿದ್ದು ಒಂದು ಸುಮಧುರವಾದ ಗೀತೆಯನ್ನು ನುಡಿಸಲು ಕೇಳಿ ಕೊಂಡಿದ್ದಾರೆ. ಅವರ ಮನವಿಗೆ  ಕೊಳಲುವಾದಕರೊಬ್ಬರು ಕೇಸರಿ ಚಿತ್ರದ ತೇರಿ ಮಿಟ್ಟಿ ಗೀತೆಯನ್ನು ಕೊಳಲಿನಲ್ಲಿ ನುಡಿಸಿದ್ದು, ದೇಶ ಕಾಯುವ ಸೈನಿಕರಿಗೆ ಅರ್ಪಿಸಿದ್ದಾರೆ. ಈ ದೇಶಭಕ್ತಿಯ ಹಾಡು ಕೇಳುತ್ತಿದ್ದಂತೆ ಸಿಆರ್ ಪಿ ಎಫ್ ಯೋಧರು ನಗುತ್ತಾ ಮೆಚ್ಚುಗೆ ವ್ಯಕ್ತಪಡಿಸಿರುವುದನ್ನು ನೋಡಬಹುದು.

ಇದನ್ನೂ ಓದಿ : ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ? ಕತೆ ಕೇಳಿ ಮೋಸ ಹೋಗದಿರಿ

ಈ ವಿಡಿಯೋವೊಂದು 4.5 ಮಿಲಿಯನ್ ವೀಕ್ಷಣೆಗಳನ್ನು ಕಂಡು ಕೊಂಡಿದ್ದು ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಶ್ರೀಕೃಷ್ಣ ಯಾವಾಗಲೂ ನಿಮ್ಮ ಜೊತೆಗೆ ಇರುತ್ತಾರೆ’ ಎಂದಿದ್ದಾರೆ. ಮತ್ತೊಬ್ಬರು, ‘ನಿಮಗೊಂದು ದೊಡ್ಡ ಸೆಲ್ಯೂಟ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಅತ್ಯದ್ಭುತ, ಮನಸ್ಸಿಗೆ ಹತ್ತಿರವಾಗುವ ಕೊಳಲ ನಾದನ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಕೆಲವು ಬಳಕೆದಾರರು, ಹೃದಯದ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 am, Sun, 4 May 25