
ಮದವೇರಿದಾಗ ಆನೆ, ಗೂಳಿ ಸೇರಿದಂತೆ ಇನ್ನಿತರೆ ಪ್ರಾಣಿಗಳು ಎಲ್ಲೆಂದರಲ್ಲಿ ನುಗ್ಗಿ ದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತವೆ. ಹೀಗೆ ಹೆಚ್ಚಾಗಿ ಜನನಿಬಿಡ ಪ್ರದೇಶಗಳಿಗೆ ನುಗ್ಗಿ ಪ್ರಾಣಿಗಳು ಅವಾಂತರಗಳನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿ ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಏಕಾಏಕಿ ಬಸ್ಸಿನೊಳಗೆ ನುಗ್ಗಿದ ಗೂಳಿ ಕಿಟಕಿ ಗಾಜುಗಳನ್ನು ಪುಡಿ ಮಾಡಿ ಅವಾಂತರ ಸೃಷ್ಟಿಸಿದೆ. ಇದರಿಂದ ಭಯಭೀತರಾಗ ಕಂಡಕ್ಟರ್ ಮತ್ತು ಡ್ರೈವರ್ ಪ್ರಾಣ ಉಳಿದರೆ ಸಾಕೆನ್ನುತ್ತಾ ಬಸ್ಸಿನಿಂದ ಕೆಳ ಜಿಗಿದು ಓಡಿ ಹೋಗಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ರಾಜಸ್ಥಾನದ ಜೈಪುರದಲ್ಲಿ ಈ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಏಕಾಏಕಿ ಬಸ್ಸಿನೊಳಗೆ ನುಗ್ಗಿದಂತಹ ಗೂಳಿಯೊಂದು ವಾಹನದ ಕಿಟಕಿ ಗಾಜುಗಳನ್ನು ಒದು ಹಾಕಿದೆ. ಮಾಧ್ಯಮ ವರದಿಗಳ ಪ್ರಕಾರ ಇಲ್ಲಿನ ತೋಡಿಮೋಡ್ ಕ್ರಾಸಿಂಗ್ ಬಳಿ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್ಸಿನೊಳಗೆ ನುಗ್ಗಿದಂತಹ ಗೂಳಿಯೊಂದು ಹೊರ ಹೋಗಲು ಸಾಧ್ಯವಾಗದೆ ಕಿಟಕಿ ಗಾಜುಗಳನ್ನು ಒಡೆದು ಹಾಕಿದೆ. ಇದರಿಂದ ಗಾಬರಿಗೊಂಡ ಡ್ರೈವರ್ ಮತ್ತು ಕಂಡಕ್ಟರ್ ವಾಹನದಿಂದ ಕೆಳಜಿಗಿದು ಎದ್ನೋ ಬಿದ್ನೋ ಅಂತ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ.
Traffic came to a halt in #Rajasthan‘s #Jaipur after a bull entered a bus and smashed windows, prompting the driver and conductor to jump out of the vehicle and run for their lives. A video of the unusual incident which occurred on Monday night, has gone viral.
According to… pic.twitter.com/cluJte49eW
— Hate Detector 🔍 (@HateDetectors) February 11, 2025
Hate Detector ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಸ್ಸಿನೊಳಗೆ ನುಗ್ಗಿದ ಗೂಳಿ ಕೋಪದಲ್ಲಿ ಕಿಟಕಿ ಗಾಜುಗಳನ್ನು ಪುಡಿ ಮಾಡುತ್ತಿರುವ ಬೆಚ್ಚಿ ಬೀಳಿಸುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಕುಂಭಮೇಳದಲ್ಲಿ ಚಹಾ ಮಾರಿ ಕೇವಲ ಒಂದು ದಿನದಲ್ಲಿ 5 ಸಾವಿರ ರೂ. ಲಾಭ ಗಳಿಸಿದ ಯುವಕ; ವಿಡಿಯೋ ವೈರಲ್
ಈ ಘಟನೆಯಿಂದ ಬಸ್ಸಿಗೆ ಒಂದಷ್ಟು ಹಾನಿಯಾಗಿದ್ದು ಬಿಟ್ಟರೆ ಇನ್ನು ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ