ಅಣ್ಣ ತಂಗಿಯರ ಈ ಬಂಧ ಜನುಮ ಜನುಮದ ಅನುಬಂಧ ಎನ್ನುವ ಹಾಡನ್ನು ಕೇಳಿರಬಹುದು. ಸೋದರ ಸೋದರಿಕೆಯ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಭಾರತೀಯರು ಸಹೋದರತ್ವದ ಬಂಧಕ್ಕೆ ವಿಶಿಷ್ಟವಾದ ಸ್ಥಾನಮಾನವನ್ನು ನೀಡಿದ್ದಾರೆ. ಆದರೆ ಭಾರತದ ಈ ಬುಡಕಟ್ಟು ಜನಾಂಗದಲ್ಲಿ ಸಹೋದರಿಯನ್ನೇ ಮದುವೆ ಆಗುವ ವಿಚಿತ್ರ ಸಂಪ್ರದಾಯವಿದೆ.
ಈ ಬುಡಕಟ್ಟಿನಲ್ಲಿ ಒಡಹುಟ್ಟಿದವರು ವಯಸ್ಸಿಗೆ ಬಂದ ನಂತರದಲ್ಲಿ ಗಂಡ ಹೆಂಡತಿಯಾಗುತ್ತಾರೆ. ಛತ್ತೀಸ್‌ಗಢದಲ್ಲಿ ಬಾಸ್ಟರ್ ಪ್ರಾಂತ್ಯದಲ್ಲಿ ಧುರ್ವಾ ಎಂಬ ಬುಡಕಟ್ಟು ಜನಾಂಗದವರು ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ತಮ್ಮದೇ ಅದ ಆಚಾರ ವಿಚಾರ, ವಿಚಿತ್ರ ಪದ್ಧತಿಯಿಂದಲೇ ಗಮನ ಸೆಳೆದಿದ್ದಾರೆ. ಈ ಬುಡಕಟ್ಟು ಜನಾಂಗದಲ್ಲಿ ಹೆತ್ತವರೇ ತಮ್ಮ ಇಬ್ಬರು ಮಕ್ಕಳಾದ ಅಣ್ಣ ತಂಗಿಯರಿಗೆ ಮದುವೆ ಮಾಡುತ್ತಾರೆ..
ಮಗಳನ್ನು ಮಗನಿಗೆ ಮದುವೆ ಮಾಡುವ ಪದ್ಧತಿ ಈ ಗ್ರಾಮದಲ್ಲಿ ಹಲವು ವರ್ಷಗಳಿಂದಲೇ ನಡೆಯುತ್ತಿದೆ. ಇದಕ್ಕೆ ಕಾರಣ ಈ ಧುರ್ವಾ ಬುಡಕಟ್ಟು ಜನರು ರಕ್ತ ಸಂಬಂಧಗಳ ಬಗ್ಗೆ ನಂಬಿಕೆಯನ್ನು ಇಟ್ಟಿಲ್ಲ. ಇದೇ ಕಾರಣದಿಂದಾಗಿ ಈ ಬುಡಕಟ್ಟಿನ ಜನರು ಮಗಳನ್ನೇ ಮಗನಿಗೆ ಧಾರೆಯೆರೆದು ಕೊಡುತ್ತಾರೆ.
ಇದನ್ನೂ ಓದಿ: 6 ತಿಂಗಳ ಬಳಿಕ ಕೋಮಾದಿಂದ ಎದ್ದ ಯುವಕ; ಆಸ್ಪತ್ರೆ ಬಿಲ್ ನೋಡಿ ಮತ್ತೆ ಪ್ರಜ್ಞೆ ತಪ್ಪೋದೊಂದು ಬಾಕಿ!
ಒಂದು ವೇಳೆ ಮಕ್ಕಳು ಈ ಮದುವೆಯನ್ನು ನಿರಾಕರಿಸಿದರೆ ಅವರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತದೆಯಂತೆ. ಈ ಬುಡಕಟ್ಟು ತಮ್ಮ ತಮ್ಮ ಮಕ್ಕಳಿಗೆ ಮದುವೆ ಮಾಡಿಸಿಕೊಂಡು ಮನೆಯಲ್ಲಿ ಇರಿಸಿಕೊಳ್ಳುತ್ತಾರೆ. ಧುರ್ವಾ ಬುಡಕಟ್ಟಿನಲ್ಲಿ ಕಡಿಮೆ ಜನಸಂಖ್ಯೆಯ ಕಡಿಮೆಯಿರುವುದೇ ಈ ಪದ್ಧತಿಯನ್ನು ಅನುಸರಿಸಿಕೊಂಡು ಬರುವುದು ಎನ್ನಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Sun, 18 August 24