Viral News: 6 ತಿಂಗಳ ಬಳಿಕ ಕೋಮಾದಿಂದ ಎದ್ದ ಯುವಕ; ಆಸ್ಪತ್ರೆ ಬಿಲ್ ನೋಡಿ ಮತ್ತೆ ಪ್ರಜ್ಞೆ ತಪ್ಪೋದೊಂದು ಬಾಕಿ!

ಲಾಸ್ ವೇಗಾಸ್​ನ ವ್ಯಕ್ತಿಯೊಬ್ಬರು 6 ತಿಂಗಳ ಬಳಿಕ ಕೋಮಾದಿಂದ ಎದ್ದಿದ್ದಾರೆ. ಆದರೆ, ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದ್ದಾರೆ. 6 ತಿಂಗಳ ಕಾಲ ಕೋಮಾದಲ್ಲಿದ್ದ ಆ ವ್ಯಕ್ತಿ ಬದುಕುವುದೇ ಅನುಮಾನ ಎನ್ನಲಾಗಿತ್ತು. ಆದರೆ, ಆತ ಏಳುತ್ತಿದ್ದಂತೆ ವೈದ್ಯರಿಗೂ ಆಶ್ಚರ್ಯವಾಗಿದೆ. ಈ ಬಗ್ಗೆ ರೆಡ್ಡಿಟ್​ನಲ್ಲಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Viral News: 6 ತಿಂಗಳ ಬಳಿಕ ಕೋಮಾದಿಂದ ಎದ್ದ ಯುವಕ; ಆಸ್ಪತ್ರೆ ಬಿಲ್ ನೋಡಿ ಮತ್ತೆ ಪ್ರಜ್ಞೆ ತಪ್ಪೋದೊಂದು ಬಾಕಿ!
ಸಾಂದರ್ಭಿಕ ಚಿತ್ರImage Credit source: istock
Follow us
ಸುಷ್ಮಾ ಚಕ್ರೆ
|

Updated on: Aug 17, 2024 | 6:48 PM

ನ್ಯೂಯಾರ್ಕ್: ಲಾಸ್ ವೇಗಾಸ್‌ನ ಜಾನ್ ಪೆನ್ನಿಂಗ್‌ಟನ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ತಮ್ಮ 30ನೇ ವಯಸ್ಸಿನಲ್ಲಿ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾಗೆ ಜಾರಿದ್ದರು. ಅದಾಗಿ 6 ತಿಂಗಳ ಬಳಿಕ ಅವರು ಕೋಮಾದಿಂದ ಎಚ್ಚರವಾಗಿದ್ದಾರೆ. ಕೋಮಾದಿಂದ ಎಚ್ಚರವಾದಾಗಲೂ ಜಾನ್‌ನ ತೊಂದರೆಗಳು ಮುಗಿಯಲಿಲ್ಲ. ರೆಡ್ಡಿಟ್‌ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಅವರು, 6 ತಿಂಗಳು ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದದ್ದಕ್ಕೆ 2.5 ಮಿಲಿಯನ್ ಡಾಲರ್ (ರೂ. 2,09,67,775) ಬಿಲ್‌ ನೀಡಿದ್ದರು. ಅದನ್ನು ನೋಡಿ ನನಗೆ ಶಾಕ್ ಆಯಿತು ಎಂದಿದ್ದಾರೆ.

ನಾನು ಕಣ್ಣು ಬಿಟ್ಟಾಗ ನನ್ನನ್ನು ಹಾಸಿಗೆಗೆ ಕಟ್ಟಿಹಾಕಿದ್ದರು. ಬೆಳಗ್ಗೆ ನಿದ್ರೆಯಿಂದ ಎದ್ದು ಆಫೀಸಿಗೆ ಹೊರಡಲು ತಡವಾಯಿತು ಎಂಬ ಅನುಭವ ನನ್ನಲ್ಲಿತ್ತು. ಆ 6 ತಿಂಗಳ ಕಾಲ ನಾನು ಪ್ರಜ್ಞೆ ಕಳೆದುಕೊಂಡಿದ್ದ ಎಂಬುದೂ ನನಗೆ ತಿಳಿದಿರಲಿಲ್ಲ. ನನ್ನ ಪಕ್ಕದಲ್ಲಿದ್ದ ನರ್ಸ್ ಬಳಿ ನಾನು ಬಾತ್​ರೂಂ ಬಳಸಬಹುದಾ? ಎಂದು ಕೇಳಿದೆ. ಇದ್ದಕ್ಕಿದ್ದಂತೆ ನಾನು ಎದ್ದು ಕುಳಿತು ಮಾತನಾಡಿದ್ದನ್ನು ನೋಡಿ ಆ ನರ್ಸ್ ಕಣ್ಣೀರು ಹಾಕುತ್ತಾ ಹೊರಗೆ ಓಡಿಹೋದಳು ಎಂದು ಜಾನ್ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ಸಖತ್ತಾಗಿ ಸ್ಟೆಪ್ ಹಾಕಿದ ಎಲಾನ್ ಮಸ್ಕ್ – ಡೊನಾಲ್ಡ್ ಟ್ರಂಪ್; AI ಡ್ಯಾನ್ಸ್ ವಿಡಿಯೋ ವೈರಲ್

ಬಳಿಕ ಆ ನರ್ಸ್ ಕೆಲವು ನಿಮಿಷಗಳ ನಂತರ ನನ್ನಲ್ಲಿ ಕ್ಷಮೆ ಕೇಳಲು ಹಿಂತಿರುಗಿದಳು. ಕಳೆದ 6 ತಿಂಗಳಿನಿಂದ ನಾನು ತೀವ್ರವಾದ ಆಘಾತಕಾರಿ ಮಿದುಳಿನ ಗಾಯದಿಂದಾಗಿ ಕೋಮಾದಲ್ಲಿದ್ದ ವಿಚಾರವನ್ನು ಆಕೆ ನನಗೆ ತಿಳಿಸಿದರು ಎಂದಿರುವ ಜಾನ್ ಅವರು ತಮ್ಮ ಚಿಕಿತ್ಸೆಯ ವೆಚ್ಚವನ್ನು ಸರಿದೂಗಿಸಲು ಸಹಾಯ ಮಾಡಲು GoFundMe ಪುಟವನ್ನು ರಚಿಸಿದ್ದಾಗಿ ತಿಳಿಸಿದ್ದಾರೆ.

ಬಳಿಕ ಜಾನ್‌ನ ವಕೀಲರು ಅವನಿಗೆ ಸಹಾಯ ಮಾಡಲು ತಕ್ಷಣವೇ ಮುಂದಾದರು. ಎಲ್ಲ ವೈದ್ಯಕೀಯ ವೆಚ್ಚವನ್ನು ಭರಿಸಿದಾಗ ಜಾನ್ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯವಾಯಿತು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್