Viral Video: ಪೆಟ್ರೋಲ್ ಖಾಲಿ, ಗ್ರಾಹಕನನ್ನು ಬೈಕ್ನಲ್ಲೇ ಕೂರಿಸಿ ತಳ್ಳಿಕೊಂಡು ಹೋದ ರ‍್ಯಾಪಿಡೋ ಬೈಕ್ ಚಾಲಕ
ಹೈದರಾಬಾದಿನಲ್ಲಿ ವಿಚಿತ್ರ ಹಾಗೇನೇ ಅಮಾನವೀಯ ಘಟನೆಯೊಂದು ನಡೆದಿದ್ದು, ರ‍್ಯಾಪಿಡೋ ಬೈಕ್ ಟ್ಯಾಕ್ಸಿಯ ಪೆಟ್ರೋಲ್ ಖಾಲಿಯಾದ ಹಿನ್ನೆಲೆ, ಬೈಕ್ನಿಂದ ಕೆಳಗಿಳಿಯಲು ನಿರಾಕರಿಸಿದ ಗ್ರಾಹಕನನ್ನು, ಬೈಕಿನಲ್ಲಿಯೇ ಕೂರಿಸಿಕೊಂಡು ರ್ಯಾಪಿಡೋ ಬೈಕ್ ಚಾಲಕ ವಾಹನವನ್ನು ತಳ್ಳಿಕೊಂಡು ಪೆಟ್ರೋಲ್ ಬಂಕ್ ವರೆಗೂ ಹೋಗಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಪ್ರಯಾಣಿಕನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಗಳಲ್ಲಿ ಬಹುತೇಕ ಹೆಚ್ಚಿನವರು ಆಪ್ ಆಧಾರಿತ ಆಟೋ, ಕ್ಯಾಬ್ ಗಳಲ್ಲಿಯೇ ಸಂಚರಿಸುತ್ತಾರೆ. ಈ ಟ್ಯಾಕ್ಸಿಗಳು ಜನರಿಗೆ ತಮ್ಮ ಸ್ವಂತ ವಾಹನದಂತೆ ಯಾವಾಗಲೂ ಬೇಕಿದ್ದರೂ ಲಭ್ಯವಿರುವಂತಹ ಸೇವೆಯಾಗಿದೆ. ಇನ್ನೂ ಕೆಲವರು ಹಣ ಉಳಿತಾಯ ಮತ್ತು ಸಮಯದ ಉಳಿತಾಯಕ್ಕಾಗಿ ಕ್ಯಾಬ್ ಅಥವಾ ಸಾರ್ವಜನಿಕ ವಾಹನಗಳನ್ನು ಬಳಸದೆ ಬೈಕ್ ಟ್ಯಾಕ್ಸಿ ಸೇವೆಯನ್ನು ಆಯ್ದುಕೊಳ್ಳುತ್ತಾರೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಕೂಡಾ ಆಫೀಸಿಗೆ ಬೇಗ ತಲುಪಬೇಕೆಂಬ ಕಾರಣಕ್ಕೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಾನೆ. ಆದರೆ ಆಫೀಸಿಗೆ ಹೋಗುವಾಗ ದಾರಿ ಮಧ್ಯೆ ಆ ವಾಹನದ ಪೆಟ್ರೋಲ್ ಖಾಲಿಯಾದ ಕಾರಣ ಬೈಕಿನಿಂದ ಕೆಳಗಿಳಿಯಲು ನಿರಾಕರಿಸಿದ ಆ ಗ್ರಾಹಕನನ್ನು, ಬೈಕಿನಲ್ಲಿಯೇ ಕೂರಿಸಿಕೊಂಡು ರ್ಯಾಪಿಡೋ ಬೈಕ್ ಚಾಲಕ ವಾಹನವನ್ನು ತಳ್ಳಿಕೊಂಡು ಪೆಟ್ರೋಲ್ ಬಂಕ್ ವರೆಗೂ ಹೋಗಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ ಹೈದರಾಬಾದಿನ ರ‍್ಯಾಪಿಡೋ ಗ್ರಾಹಕರೊಬ್ಬರು ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದರು. ಹೀಗೆ ಈ ಗ್ರಾಹಕನನ್ನು ಕರೆದುಕೊಂಡು ಹೋಗುತ್ತಿರುವ ವೇಳೆಯಲ್ಲಿ ಅರ್ಧದಾರಿಯಲ್ಲಿ ಬೈಕ್ ಪೆಟ್ರೋಲ್ ಖಾಲಿಯಾಗುತ್ತದೆ. ಆ ಸಂದರ್ಭದಲ್ಲಿ ರ್ಯಾಪಿಡೋ ಬೈಕ್ ಚಾಲಕ ಗ್ರಾಹಕನ್ನು ಬೈಕಿನಿಂದ ಕೆಳಗಿಳಿಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಗ್ರಾಹಕ ಈ ಮಾತಿಗೆ ಒಪ್ಪದಿದ್ದಾಗ, ಪೆಟ್ರೋಲ್ ಬಂಕ್ ವರೆಗೂ ಆತನನ್ನು ಬೈಕಿನಲ್ಲಿಯೇ ಕೂರಿಸಿ ವಾಹನವನ್ನು ಚಾಲಕನೊಬ್ಬನೇ ತಳ್ಳಿಕೊಂಡು ಹೋಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A #Rapido bike driver in #Hyderabad was forced to push his bike with a customer on it after he refused to get down when his vehicle ran out of petrol.@rapidobikeapp @newstapTweets pic.twitter.com/xs58hmM1bZ
— Anusha Puppala (@anusha_puppala) February 12, 2024
ಈ ವಿಡಿಯೋವನ್ನು ಅನುಷಾ ಪುಪ್ಪಲಾ (@anusha_puppala) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಹೈದರಾಬಾದಿನಲ್ಲಿ ರ‍್ಯಾಪಿಡೋ ಬೈಕ್ ಚಾಲಕನೊಬ್ಬ ತನ್ನ ವಾಹನದಲ್ಲಿ ಪೆಟ್ರೋಲ್ ಖಾಲಿಯಾದಾಗ ಗ್ರಾಹಕನು ಕೆಳಗಿಳಿಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಹಕನ್ನು ಬೈಕಿನಲ್ಲಿಯೇ ಕೂರಿಸಿಕೊಂಡು, ವಾಹನವನ್ನು ತಳ್ಳಿಕೊಂಡು ಹೋಗಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಿಮ್ಗೂ ಚಾಕೊಲೇಟ್ ಅಂದ್ರೆ ತುಂಬಾನೇ ಇಷ್ಟಾನಾ? ಹಾಗಿದ್ರೆ ಈ ವಿಡಿಯೋ ತಪ್ಪದೆ ನೋಡಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ 15 ಸೆಕೆಂಡುಗಳ ಈ ವಿಡಿಯೋದಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಯ ಪೆಟ್ರೋಲ್ ಖಾಲಿಯಾದ ಹಿನ್ನೆಲೆ, ಬೈಕ್ನಿಂದ ಕೆಳಗಿಳಿಯಲು ನಿರಾಕರಿಸಿದ ಗ್ರಾಹಕನನ್ನು, ಬೈಕಿನಲ್ಲಿಯೇ ಕೂರಿಸಿಕೊಂಡು ರ್ಯಾಪಿಡೋ ಬೈಕ್ ಚಾಲಕ ಕಷ್ಟಪಟ್ಟು ವಾಹನವನ್ನು ತಳ್ಳಿಕೊಂಡು ಪೆಟ್ರೋಲ್ ಬಂಕ್ ವರೆಗೂ ಹೋಗುವಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಕನಿಷ್ಟ ಪಕ್ಷ ಮಾನವೀಯತೆಯ ದೃಷ್ಟಿಯಿಂದಾದರೂ ಆ ಗ್ರಾಹಕ ಬೈಕಿನಿಂದ ಕೆಳಗಿಳಿಯಬಹುದಿತ್ತಲ್ಲವೇ ಅಂತ ನೆಟ್ಟಿಗರು ಆತನ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Mon, 12 February 24