Viral Video: ನಿಮ್ಗೂ ಚಾಕೊಲೇಟ್ ಅಂದ್ರೆ ತುಂಬಾನೇ ಇಷ್ಟಾನಾ? ಹಾಗಿದ್ರೆ ಈ ವಿಡಿಯೋ ತಪ್ಪದೆ ನೋಡಿ

chocolate: ಚಾಕೊಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಈ ಯುವತಿಯರು ಮತ್ತು ಮಕ್ಕಳು ಊಟವಿಲ್ಲದಿದ್ದರೂ ಚಾಕೊಲೇಟ್ ಅನ್ನು ಮಾತ್ರ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದೀಗ ಈ ಚಾಕೊಲೇಟ್ಗೆ ಸಂಬಂಧಿಸಿದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ಖರೀದಿಸಿದಂತಹ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅಲ್ಲಿ ಹುಳವೊಂದು ಪತ್ತೆಯಾಗಿದೆ. 

Viral Video: ನಿಮ್ಗೂ ಚಾಕೊಲೇಟ್ ಅಂದ್ರೆ ತುಂಬಾನೇ ಇಷ್ಟಾನಾ? ಹಾಗಿದ್ರೆ ಈ ವಿಡಿಯೋ ತಪ್ಪದೆ ನೋಡಿ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 12, 2024 | 4:08 PM

ಚಾಕೊಲೇಟ್ (chocolate) ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಈ ಮಕ್ಕಳಿಗಂತೂ ಪ್ರತಿನಿತ್ಯ ಚಾಕೊಲೇಟ್ ತಿನ್ನದಿದ್ದರೆ ನಿದ್ದೆಯೇ ಬಾರೋದಿಲ್ಲ. ಕೇವಲ ಮಕ್ಕಳು ಮಾತ್ರವಲ್ಲ ಎಲ್ಲಾ ವಯಸ್ಸಿನವರಿಗೂ ಚಾಕೊಲೇಟ್ ಅಂದ್ರೆ ಬಲು ಇಷ್ಟ. ನೀವು ಕೂಡಾ ವಿವಿಧ ಬಗೆಯ ಚಾಕೊಲೇಟ್​​​​ಗಳನ್ನೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿಂದಿರುತ್ತೀರಿ ಅಲ್ವಾ. ಆದರೆ ಇತ್ತೀಚಿಗೆ ವೈರಲ್ ಆಗುತ್ತಿರುವ ವಿಡಿಯೋ ನೋಡಿದ್ರೆ ನೀವು ಚಾಕೊಲೇಟ್ ತಿನ್ನಲು ಹಿಂಜರಿಯುತ್ತೀರಿ. ಹೌದು  ಕೆಲ ದಿನಗಳ ಹಿಂದೆ ಹೈದರಾಬಾದಿನ ವ್ಯಕ್ತಿಯೊಬ್ಬರು ಸೂಪರ್ ಮಾರ್ಕೆಟ್ ನಿಂದ ಖರೀದಿಸಿದಂತಹ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅಲ್ಲಿ ಹುಳವೊಂದು ಪತ್ತೆಯಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬ್ರಾಂಡೆಡ್ ಚಾಕೊಲೇಟ್ಗಳಲ್ಲಿಯೂ ಹುಳಗಳಿರುತ್ತದೆಯೇ ಅಂತ ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ವೈರಲ್ ವಿಡಿಯೋವನ್ನು ರಾಬಿನ್ ಜಾಕಿಯಾಸ್ (@RobinZaccheus) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಇಂದು ಅಮೀರಪೇಟೆಯಲ್ಲಿರುವ ರತ್ನದೀಪ್ ಮೆಟ್ರೋದಲ್ಲಿ ಖರೀದಿಸಿ ಕ್ಯಾಡ್ಬರಿ ಚಾಕೊಲೇಟ್ ಅಲ್ಲಿ ಹುಳು ಇರುವುದು ಕಂಡು ಬಂದಿದೆ. ಇಂತಹ  ಉತ್ಪನ್ನಗಳಿಗೆ ಗುಣಮಟ್ಟದ ಪರಿಶೀಲನೆ ಇದೆಯೇ? ಸಾರ್ವಜನಿಕ ಆರೋಗ್ಯ ಅಪಾಯಗಳಿಗೆ ಯಾರು ಹೊಣೆ?” ಎಂದು ಡೈರಿಮಿಲ್ಕ್ ಇಂಡಿಯಾ ಕಂಪೆನಿಯನ್ನು ಟ್ಯಾಗ್ ಮಾಡಿ ಶೀರ್ಷಿಕೆ ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ:

ಇದಕ್ಕೆ ಪ್ರತಿಕ್ರಿಯಿಸಿದಂತಹ ಚಾಕೊಲೇಟ್ ಕಂಪೆನಿ ಮೊಂಡೆಲೆಜ್ ಇಂಡಿಯಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಡ್ಬರಿ ಇಂಡಿಯಾ ಲಿಮಿಟೆಡ್) ಆಹಾರದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತದೆ. ಆದರೆ ಇಂದು ನೀವು ಈ ಕೆಟ್ಟ ಅನುಭವವನ್ನು ಎದುರಿಸಿದ್ದಕ್ಕಾಗಿ ನಾವು ನಿಮ್ಮ ಬಳಿ ಕ್ಷಮೆ ಕೇಳುತ್ತೇವೆ. ನಿಮ್ಮ ಸಮಸ್ಯೆಯನ್ನು ಪರಿಹರಿಸಲು ನಮ್ಮೊಂದಿಗೆ ಮಾತನಾಡಿ ಎಂದು ಹೇಳಿದೆ.

ವೈರಲ್ ಆಗುತ್ತಿರುವ  ಈ ವಿಡಿಯೋ ತುಣುಕಿನಲ್ಲಿ   ವ್ಯಕ್ತಿಯೊಬ್ಬರು ಅವರ ಕೈಯಲ್ಲಿ ಕ್ಯಾಡ್ಬರಿ ಡೈರಿ ಮಿಲ್ಕ್ ಚಾಕೊಲೇಟ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಆ ಚಾಕೊಲೇಟ್ ಪ್ಯಾಕೆಟ್ ಓಪನ್ ಮಾಡಿದ ತಕ್ಷಣ ಅದರಲ್ಲಿ ಜೀವಂತ ಹುಳವೊಂದು ಸುಳಿದಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣ ಇದನ್ನು ವಿಡಿಯೋ ಮಾಡಿ ಆ ವ್ಯಕ್ತಿ ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ.

ಇದನ್ನೂ ಓದಿ: 100 ರೂ. ನೋಟಿನಲ್ಲಿ ಗಾಂಧಿಯ ಬದಲು ಶ್ರೀರಾಮ, ಕಲಾವಿದನ ಕೈಚಳಕ ಹೇಗಿದೆ ನೋಡಿ?

ಫೆಬ್ರವರಿ 09 ರಂದು ಹಂಚಿಕೊಳ್ಳಲಾದ ಈ ಪೋಸ್ಟ್  ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರ ಮೇಲೆ ಮೊಕದ್ದಮೆ ಹೂಡಿ ಪರಿಹಾರವನ್ನು ಪಡೆದುಕೊಳ್ಳಿʼ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ20 ವರ್ಷಗಳ ಹಿಂದೆ ನನಗೆ ಕೂಡಾ ಇದೇ ಅನುಭವವಾಗಿತ್ತು. ನಾನು ಖರೀದಿಸಿದಂತಹ ಕ್ಯಾಡ್ಬರೀಸ್ ಫ್ರೂಟ್ ಆಂಡ್ ನಟ್ ಚಾಕೊಲೇಟ್ ಅಲ್ಲಿ ಹುಳವಿತ್ತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದಕ್ಕಾಗಿಯೇ ಇಂತಹ ಪ್ಯಾಕೆಜ್ಡ್ ಉತ್ಪನ್ನಗಳನ್ನು ತಿನ್ನುವ ಬದಲು ಯಾವಾಗಲೂ ತಾಜಾ ಸಿಹಿ ತಿನಿಸು ತಿನ್ನಬೇಕುʼ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ