AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಭಾರತದ ವಿಶೇಷತೆಗಳ ಬಗ್ಗೆ ಪಟ್​​ ಪಟ್​​​ ಎಂದು ವಿದೇಶಿ ಪ್ರವಾಸಿಗರಿಗೆ ಇಂಗ್ಲಿಷ್​​ನಲ್ಲಿ ವಿವರಿಸಿದ ರಿಕ್ಷಾವಾಲಾ

ಭಾರತದಲ್ಲಿ ವಿಶೇಷವಾದ ಆಕರ್ಷಿಣೀಯ ತಾಣಗಳಿವೆ. ಪ್ರತಿ ವರ್ಷವು ದೇಶ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ತಾಣಗಳನ್ನು ಸವಿಯುತ್ತಾರೆ. ದೂರದಿಂದ ಬರುವ ಪ್ರವಾಸಿ ಪ್ರಿಯರಿಗೆ ಆ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಟೂರಿಸ್ಟ್ ಗೈಡ್ ಗಳು ಸಿಕ್ಕರಂತೂ ಆ ಟ್ರಿಪ್ ಗೆ ಕಳೆ ಬರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿದೇಶಿ ಪ್ರವಾಸಿಗರಿಗೆ ರಿಕ್ಷಾ ಚಾಲಕನು ಪ್ರವಾಸಿ ತಾಣಗಳ ಕುರಿತು ಮಾಹಿತಿಯು ನೀಡಿದ್ದು, ವಿದೇಶಿಗರೊಂದಿಗೆ ಸಲೀಸಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದಾನೆ.

Viral Video : ಭಾರತದ ವಿಶೇಷತೆಗಳ ಬಗ್ಗೆ ಪಟ್​​ ಪಟ್​​​ ಎಂದು ವಿದೇಶಿ ಪ್ರವಾಸಿಗರಿಗೆ ಇಂಗ್ಲಿಷ್​​ನಲ್ಲಿ ವಿವರಿಸಿದ ರಿಕ್ಷಾವಾಲಾ
ವೈರಲ್​​ ವಿಡಿಯೋ
ಸಾಯಿನಂದಾ
| Edited By: |

Updated on: Feb 12, 2024 | 10:55 AM

Share

ವಿದೇಶಿಗರು ಭಾರತಕ್ಕೆ ಬಂದರೆ, ಅವರೊಂದಿಗಿನ ಆತ್ಮವಿಶ್ವಾಸದೊಂದಿಗೆ ಮಾತನಾಡಲು ಇಂಗ್ಲಿಷ್ ಭಾಷೆಯು ಬಲ್ಲವರಾಗಿರಬೇಕು. ಇಲ್ಲದೇ ಹೋದಲ್ಲಿ ಅವರೊಂದಿಗೆ ವ್ಯವಹಾರಿಸುವುದು ಕಷ್ಟವಾಗದು. ಭಾಷೆಯ ಗೊತ್ತಿಲ್ಲದ ಕಾರಣ ವಿದೇಶಿಗರ ಜೊತೆಯಲ್ಲಿ ವ್ಯವಹರಿಸುವುದು ಕಷ್ಟವಾಗುತ್ತದೆ. ಟೂರಿಸ್ಟ್ ಸ್ಥಳಗಳಲ್ಲಿ ವಿದೇಶಿಗರಿಗಾಗಿಯೇ ಟೂರಿಸ್ಟ್ ಗೈಡ್ ಗಳಿರುತ್ತಾರೆ. ಒಂದು ವೇಳೆ ನೀವೇನಾದರೂ ಪ್ರವಾಸಿ ಸ್ಥಳಕ್ಕೆ ಹೋದಾಗ ಅಲ್ಲಿನ ವಿಶೇಷತೆ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಲು ಮೊದಲು ಟೂರಿಸ್ಟ್ ಗೈಡ್ ಇದ್ದಾರೆಯೇ ಎಂದು ಮೊದಲು ಹುಡುಕುವುದು ಸಹಜ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಿದೇಶಿ ಪ್ರವಾಸಿಗರ ಜೊತೆಗೆ ರಿಕ್ಷಾ ಡೈವರ್ ಜುಮ್ಮಾ ಮಸೀದಿಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಹೇಗೆಲ್ಲಾ ನಾನು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುತ್ತಿದ್ದಾನೆ.

ಈ ವಿಡಿಯೋದಲ್ಲಿ ರಿಕ್ಷಾ ಚಾಲಕನು ಪ್ರವಾಸಿ ತಾಣಗಳ ಕುರಿತು ಮಾಹಿತಿಯನ್ನು ಇಂಗ್ಲಿಷ್ ಭಾಷೆಯಲ್ಲಿ ನೀಡಿದ್ದಾನೆ. ವಿದೇಶಿಗಾರೊಂದಿಗೆ ಯಾವುದೇ ಭಯವಿಲ್ಲದೇ ಇಂಗ್ಲಿಷ್ ಭಾಷೆಯಲ್ಲಿಯೇ ವ್ಯವಹರಿಸುತ್ತಿದ್ದಾನೆ. ಈ ವಿಡಿಯೋದಲ್ಲಿ ಆರಂಭದಲ್ಲಿ ರಿಕ್ಷಾ ಡೈವರ್ ವಿದೇಶಿಗರನ್ನು ತಮ್ಮ ರಿಕ್ಷಾದಲ್ಲಿ ಕೂರಿಸಿಕೊಂಡಿರುವುದನ್ನು ಕಾಣಬಹುದು. ಆ ಬಳಿಕ ಜಮಾ ಮಸೀದಿಯ ಬಗ್ಗೆ ಮಾಹಿತಿಯನ್ನು ನೀಡುತ್ತಾ ಅಲ್ಲಿನ ವಿಶೇಷತೆಗಳು ಅಲ್ಲೇ ಇರುವ ಸ್ಥಳೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ.

ವೈರಲ್​​​ ವಿಡಿಯೋ ಇಲ್ಲಿದೆ:

ನಾವೀಗ ಹೊರಡೋಣವೇ ಎಂದು ಕೇಳುತ್ತಿದ್ದಂತೆ ವಿದೇಶಿಗರು ನಗುತ್ತಾ ಯೆಸ್ ಯೆಸ್ ಎಂದಿದ್ದಾರೆ. ವಿದೇಶಿಗರು ಹಾಗೂ ರಿಕ್ಷಾ ಡ್ರೈವರ್ ನ ವಿಡಿಯೋವನ್ನು ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿಯು ಆತನ ಇಂಗ್ಲಿಷ್ ಮಾತನಾಡುವ ರೀತಿಗೆ ಸೂಪರ್ ಅಣ್ಣ ಎಂದಿದ್ದಾನೆ. ವಿದೇಶಿಗರ ಬಳಿ ನೀವು ಎಲ್ಲಿಯವರು ಎಂದು ಕೇಳಿದ್ದಾನೆ. ಈ ವಿದೇಶಿಗರು ಯುಕೆ ಎಂದು ಉತ್ತರಿಸಿದ್ದಾರೆ. ಆ ವೇಳೆಯಲ್ಲಿ ತಮಾಷೆಯಾಗಿ ಮಾತನಾಡಿದ್ದು ಜೋರಾಗಿ ನಕ್ಕಿದ್ದಾರೆ. ಈ ರಿಕ್ಷಾ ಡ್ರೈವರ್ ನ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಶಾಕ್ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕ್ರಿಯೇಟಿವಿಟಿಯಿಂದಲೇ ಗಮನ ಸೆಳೆದಿದ್ದ ಜೋಡಿಯ ಪ್ರೀ ವೆಡ್ಡಿಂಗ್ ಶೂಟ್​​​

ಈ ವಿಡಿಯೋವನ್ನು ಯುವರ್ ಡೈಲಿ ಗೈಡ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಒಂದೂವರೆ ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರನೊಬ್ಬ, ರಿಕ್ಷಾವಾಲಾ ಎಜುಕೇಟೆಡ್ ರಿಕ್ಷಾವಾಲಾ ಎಂದಿದ್ದಾನೆ. ಮತ್ತೊಬ್ಬ ಬಳಕೆದಾರನು, ನಿಮ್ಮ ಆತ್ಮವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದಿದ್ದಾನೆ. ಇನ್ನೊಬ್ಬ ಬಳಕೆದಾರನು, ‘ಇವನು ನನಗಿಂತಲು ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾನೆ’ ಎಂದಿದ್ದಾನೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ