AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 100 ರೂ. ನೋಟಿನಲ್ಲಿ ಗಾಂಧಿಯ ಬದಲು ಶ್ರೀರಾಮ, ಕಲಾವಿದನ ಕೈಚಳಕ ಹೇಗಿದೆ ನೋಡಿ? 

100 ರೂಪಾಯಿ ನೋಟಿನಲ್ಲಿ ಭಗವಾನ್ ಶ್ರೀರಾಮನ ಫೋಟೋ! ಅಚ್ಚರಿಯಾಗಬೇಡಿ ಇದು ಕಲಾವಿದನ ಕೈಚಳಕದಲ್ಲಿ ಮೂಡಿದ ಚಿತ್ರಕಲೆಯಷ್ಟೆ. ಹೌದು ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಿತ್ರಕಲಾವಿದರ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಸದ್ಯ ಇದೀಗ 100 ರೂಪಾಯಿ ನೋಟಿನಲ್ಲಿ ಶ್ರೀರಾಮನ ಚಿತ್ರವನ್ನು ಬಿಡಿಸಿರುವಂತಹ ಕಲಾವಿದನ  ವಿಡಿಯೋ  ಹರಿದಾಡುತ್ತಿದ್ದು, ಕಲಾವಿದನ ಕೈ ಚಳಕಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ಲಭಿಸಿದೆ.

Viral Video: 100 ರೂ. ನೋಟಿನಲ್ಲಿ ಗಾಂಧಿಯ ಬದಲು ಶ್ರೀರಾಮ, ಕಲಾವಿದನ ಕೈಚಳಕ ಹೇಗಿದೆ ನೋಡಿ? 
ವೈರಲ್​​​​ ವಿಡಿಯೋ ಇಲ್ಲಿದೆ
ಮಾಲಾಶ್ರೀ ಅಂಚನ್​
| Edited By: |

Updated on:Feb 12, 2024 | 4:16 PM

Share

ಚಿತ್ರ ಕಲಾವಿದರು ತೋರುವ ಕೈಚಳಕ ನಿಜಕ್ಕೂ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇಂತಹ ಸಾಕಷ್ಟು ಅದ್ಭುತ ಕಲಾವಿದರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಪ್ರತಿಯೊಬ್ಬ ಕಲಾವಿದರೂ ಒಬ್ಬರಿಗಿಂತ ಇನ್ನೊಬ್ಬರು ಭಿನ್ನ ಎಂಬ ರೀತಿಯಲ್ಲಿ ತಮ್ಮ ಚಾಕಚಕ್ಯತೆಯನ್ನು ಚಿತ್ರದ ಮೂಲಕ ತೋರಿಸಿತ್ತಾರೆ.  ಕಲ್ಲು ಬಂಡೆಯ ಮೇಲೆ ಆನೆಯ ಚಿತ್ರ ಬಿಡಿಸಿರುವಂತಹ, ಅಕ್ಕಿಯಲ್ಲಿ ಸೀತಾರಾಮರ ಚಿತ್ರ ಬಿಡಿಸಿದಂತಹ, ಸೋಪ್ ನಲ್ಲಿ, ಬಾಲೆ ಎಲೆಯಲ್ಲಿ ಪ್ರಧಾನಿ ಮೋದಿಯವರ ಚಿತ್ರ ಬಿಡಿಸಿದಂತಹ, ಉಪ್ಪಿನಕಾಯಿ ಬಳಸಿಕೊಂಡು ಚಿತ್ರ ಬಿಡಿಸಿದಂತಹ  ಅದ್ಭುತ ಚಿತ್ರ ಕಲಾವಿದರ ಬಗ್ಗೆ ನೀವು ಕೇಳಿರುತ್ತೀರಿ ಅಲ್ವಾ. ಹಾಗೇ ಇಲ್ಲೊಂದು ಕಲಾವಿದರೊಬ್ಬರು 100 ರೂಪಾಯಿ ನೋಟಿನಲ್ಲಿ ಪ್ರಭು ಶ್ರೀರಾಮನ ಚಿತ್ರವನ್ನು ಬಿಡಿಸಿ ಸುದ್ದಿಯಲ್ಲಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ಕಲಾವಿದನ ಅದ್ಭುತ ಕೈ ಚಳಕಕ್ಕೆ ನೆಟ್ಟಿಗರು ತಲೆ ಬಾಗಿದ್ದಾರೆ.

ಚತ್ತೀಸ್ಗಡದ ಫಿರಾನ್ ಪಾಟೀಲ್ ಎಂಬ ಹೆಸರಿನ ಚಿತ್ರ ಕಲಾವಿದ 100 ರೂಪಾಯಿ ನೋಟಿನಲ್ಲಿ ಅಯೋಧ್ಯಾಪತಿ ಪ್ರಭು ಶ್ರೀರಾಮನ ಚಿತ್ರವನ್ನು ಬಿಡಿಸಿದ್ದು, ಇವರ ಈ ಕಲೆಗೆ ಭಾರಿ ಮೆಚ್ಚುಗೆ ಲಭಿಸಿದೆ. ಈ ವಿಡಿಯೋವನ್ನು @KreatelyMedia ಎಂಬ ಹೆಸರಿನ  X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ  ಕಲಾವಿದ ಫಿರಾನ್ ಪಾಟೇಲ್ ನೂರು ರೂಪಾಯಿ ನೋಟನ್ನು ತೆಗೆದುಕೊಂಡು ಅದ್ರಲ್ಲಿ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಮೊದಲಿಗೆ ನೂರು ರೂಪಾಯಿ ನೋಟಿನಲ್ಲಿ ಗಾಂಧಿಜೀ ಭಾವಚಿತ್ರವಿರುವ ಜಾಗಕ್ಕೆ ಬಿಳಿ ಕ್ಯಾನ್ವಸ್ ಪೇಂಟ್ ಹಚ್ಚಿ ನಂತರ ಆ ಜಾಗದಲ್ಲಿ  ಪ್ರಭು ಶ್ರೀರಾಮಚಂದ್ರನ ಸುಂದರ ಚಿತ್ರವನ್ನು ರಚಿಸಿದ್ದಾರೆ.

ಇದನ್ನೂ ಓದಿ: ಭಾರತದ ವಿಶೇಷತೆಗಳ ಬಗ್ಗೆ ಪಟ್​​ ಪಟ್​​​ ಎಂದು ವಿದೇಶಿ ಪ್ರವಾಸಿಗರಿಗೆ ಇಂಗ್ಲಿಷ್​​ನಲ್ಲಿ ವಿವರಿಸಿದ ರಿಕ್ಷಾವಾಲಾ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಫೆಬ್ರವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 64 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಏಳು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಮತ್ತು ನೆಟ್ಟಿಗರು ಕಮೆಂಟ್ಸ್  ಮಾಡುವ ಮೂಲಕ ಕಲಾವಿದನ ಕೈ ಚಳಕಕ್ಕೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಒಬ್ಬ ಬಳಕೆದಾರರು ʼವ್ಹಾವ್… ಇದು ತುಂಬಾ ಅದ್ಭುತವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಚಿತ್ರ ಸುಂದರವಾಗಿದೆ, ಆದ್ರೆ ನೋಟಿನಲ್ಲಿ ಚಿತ್ರ ಬಿಡಿಸಿರುವುದು ನನಗೇಕೋ ಸರಿ ಕಾಣಲಿಲ್ಲʼ ಎಂದು ತಮ್ಮ ಸಲಹೆಯನ್ನು ಸೂಚಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ಅದ್ಭುತ ಚಿತ್ರವನ್ನು ಬಿಡಿಸಿರುವ ಈ ಸಹೋದರನಿಗೆ ಧನ್ಯವಾದಗಳುʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಕಲಾವಿದನ ಕಲಾ ಪ್ರತಿಭೆಗೆ  ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Mon, 12 February 24