Viral Video : ಅಫ್ಘಾನಿಸ್ತಾನದ ಪುಟ್ಟ ಹುಡುಗಿ ಇಂಗ್ಲಿಷ್ನ ವರ್ಣಮಾಲೆಗಳನ್ನು ಹೇಳುತ್ತಿರುವ ವಿಡಿಯೋ ಅನ್ನು ನಟಿ ರವೀನಾ ಟಂಡನ್ ಟ್ವೀಟ್ ಮಾಡಿದ್ಧಾರೆ. 1.6 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಈ ವಿಡಿಯೋ ನೋಡಿದ್ದಾರೆ. ಸುಮಾರು 1,500 ಜನರು ಇಷ್ಟಪಟ್ಟಿದ್ದಾರೆ. ತಾಲಿಬಾನ್ ಅಟ್ಟಹಾಸದಿಂದಾಗಿ ಅಫ್ಘಾನಿಸ್ತಾನದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವಾಗ ಇಂಥ ವಿಡಿಯೋಗಳು ಭರವಸೆಯನ್ನು ಹುಟ್ಟಿಸುತ್ತಿವೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
The cutest thing on my twitter line today ! https://t.co/zfHFNyUB2W
ಇದನ್ನೂ ಓದಿ— Raveena Tandon (@TandonRaveena) December 8, 2022
ಮೂಲತಃ ಈ ವಿಡಿಯೋ ಅನ್ನು ಪತ್ರಕರ್ತ ನಾಸರ್ ಖಾನ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ತರಗತಿಯೊಂದರಲ್ಲಿ ಶಿಕ್ಷಕಿ ಉದ್ದೇಶಪೂರ್ವಕವಾಗಿ ಇಂಗ್ಲಿಷ್ ವರ್ಣಮಾಲೆಗಳನ್ನು ಹೇಳಲು ಈ ಪುಟ್ಟಹುಡುಗಿಗೆ ಪ್ರೋತ್ಸಾಹಿಸಿದ್ದಾರೆ. ಮುಖದ ಮೇಲಿನ ಉತ್ಸಾಹ ಮತ್ತು ಖುಷಿ ಗಮನಿಸಿ. ಅಲ್ಲಲ್ಲಿ ಒಂದೆರಡು ಅಕ್ಷರಗಳು ಲೋಪವಾದರೂ ಅದೆಲ್ಲ ಲೆಕ್ಕಕ್ಕುಂಟೇ?
ಅಫಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ದೊರೆಯಬೇಕು, ತಾಲಿಬಾನಿಗಳ ಅಟ್ಟಹಾಸದಿಂದ ಅವರು ನರಳಬಾರದು ಎಂದು ನೆಟ್ಟಿಗರು ಹೇಳಿದ್ದಾರೆ. ಈ ಮಗುವಿನ ಉತ್ಸಾಹ ಸಂತೋಷ ವರ್ಣಿಸಲಸಾಧ್ಯ ಎಂದು ಒಬ್ಬರು ಹೇಳಿದ್ಧಾರೆ. ಪುಟ್ಟಮಗುವಿಗೆ ಹಿಜಾಬ್ ಬೇಕೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ಮಕ್ಕಳಿಗೆಲ್ಲ ಶಿಕ್ಷಣ, ಜ್ಞಾನ ಅಪರಿಮಿತವಾಗಿ ಸಿಗಲಿ, ಅವರ ಮುಖಗಳು ಹೀಗೇ ನಗುವಿನಿಂದ ಕೂಡಿರಲಿ ಎಂದಿದ್ದಾರೆ ಮಗದೊಬ್ಬರು. ಅಲ್ಲಿರುವ ಹೆಣ್ಣುಮಕ್ಕಳಿಗೆ ಆರು ವರ್ಷ ತುಂಬುತ್ತಿದ್ದಂತೆ 40ರ ಗಂಡಸಿನೊಂದಿಗೆ ಮದುವೆಯಾಗುವ ಹಿಂಸೆ ಇದೆಯಲ್ಲ ಅದೆಲ್ಲ ಯಾವಾಗ ತಪ್ಪುತ್ತದೆಯೋ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ ಒಬ್ಬರು.
ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 9:16 am, Sat, 10 December 22