Viral Video: ಫ್ಲಿಪ್​ಕಾರ್ಟ್​; ಮುರಿದ ಕಿಚನ್​ ಚಿಮಣಿ, ಕೊನೆಗೂ ಪರಿಹಾರ ಪಡೆದ ಗ್ರಾಹಕರು

|

Updated on: Oct 31, 2023 | 4:26 PM

Flipkart: ಆನ್​ಲೈನ್​ ಮೂಲಕ ಲಕ್ಷ ರೂಪಾಯಿಯ ಸೋನಿ ಟಿವಿ ಆರ್ಡರ್ ಮಾಡಿದ ಗ್ರಾಹಕರಿಗೆ ಥಾಮ್ಸನ್​ ಟಿವಿ ಕಳಿಸಿದ ಫ್ಲಿಪ್​​ಕಾರ್ಟ್​ ಕಥೆಯನ್ನು ಓದಿದ್ದಿರಿ. ಇದೀಗ ಮತ್ತೊಬ್ಬ ಗ್ರಾಹಕರಿಗೆ ಇದೇ ಪ್ಲ್ಯಾಟ್​ಫಾರ್ಮ್​ ಆಘಾತ ನೀಡಿದೆ. ಅನ್​ಬಾಕ್ಸ್​ ಮಾಡಿದಾಗ ಕಿಚನ್​ ಚಿಮಣಿಯ ಗ್ಲಾಸ್​ ಪುಡಿಪುಡಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್​ ಮಾಡಿದ ನಂತರವೇ ಅವರಿಗೆ ಪರಿಹಾರ ದೊರೆಕಿದೆ.

Viral Video: ಫ್ಲಿಪ್​ಕಾರ್ಟ್​; ಮುರಿದ ಕಿಚನ್​ ಚಿಮಣಿ, ಕೊನೆಗೂ ಪರಿಹಾರ ಪಡೆದ ಗ್ರಾಹಕರು
ಮುರಿದ ಕಿಚನ್​ ಚಿಮಣಿ ಫ್ಲಿಪ್​ಕಾರ್ಟ್​ನಿಂದ ಬಂದಾಗ
Follow us on

Online Shopping: ವ್ಯಕ್ತಿಯೊಬ್ಬರು ಫ್ಲಿಪ್​ಕಾರ್ಟ್​ನಿಂದ ಕಿಚನ್​ ಚಿಮಣಿ (Kitchen Chimneys) ಆರ್ಡರ್ ಮಾಡಿದ್ದಾರೆ. ಅಕ್ಟೋಬರ್ 6ರಂದು ಡೆಲಿವರಿ ಬಾಕ್ಸ್​ ಗ್ರಾಹಕರನ್ನು ತಲುಪಿದೆ. ಆದರೆ ಬಾಕ್ಸ್ ತೆರೆಯುತ್ತಿದ್ದಂತೆ ಚಿಮಣಿಯ ಗಾಜು ಬಾಕ್ಸ್​ನ ಒಳಗೆ ಪುಡಿಪುಡಿಯಾಗಿ ಬಿದ್ದಿದ್ದನ್ನು ನೋಡಿ ಗ್ರಾಹಕರಿಗೆ ಬೇಸರ ಮತ್ತು ನಿರಾಶೆಯಾಗಿದೆ. ಆ ನಂತ ಆ ವ್ಯಕ್ತಿ ಫ್ಲಿಪ್‌ಕಾರ್ಟ್‌ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದರೆ ಅತ್ತಕಡೆಯಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಸಮಸ್ಯೆ ಬಗೆಹರಿಯದಿದ್ದಾಗ ಅವರು ಅನ್‌ಬಾಕ್ಸಿಂಗ್ ವಿಡಿಯೋ ಮತ್ತು ಚಿಮಣಿಯ ಫೋಟೋಗಳನ್ನು X ನಲ್ಲಿ ಹಂಚಿಕೊಂಡು ಈತನಕ ಫ್ಲಿಪ್​ಕಾರ್ಟ್​ನಿಂದ ಯಾವುದೇ ರೀತಿಯ ಪ್ರತ್ಯುತ್ತರ ದೊರೆತಿಲ್ಲ ಎಂದು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral: ಮುರ್ಷಿದಾಬಾದ್​; ಮಟಮಟ ಮಧ್ಯಾಹ್ನ ನಡುರಸ್ತೆಯಲ್ಲಿ 18 ಲಕ್ಷ ನಗದು ದೋಚಿದ ಕಳ್ಳರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಟೋಬರ್​ 26ರಂದು ಈ ಪೋಸ್ಟ್​ ಅನ್ನು ಹಂಚಿಕೊಂಡಿದ್ದಾರೆ; @jagograhakjago @nch1915 @flipkartsupport @Flipkart ಈ ಕುರಿತು ದಯವಿಟ್ಟು ಸಹಾಯ ಮಾಡಿ. @AdvisorLaborLaw @jagograhakjago ನಲ್ಲಿಯೂ ದೂರು ನೀಡಿದ್ದೇನೆ.

ಮುರಿದ ಕಿಚನ್​ ಚಿಮಣಿಯ ವಿಡಿಯೋ ಫೋಟೋ ನೋಡಿ

Till date no resolution given by Flipkart.

25 ದಿನಗಳ ನಂತರ ಅಂದರೆ ಇಂದು ಈ ವ್ಯಕ್ತಿಯ ಹಣ ​ಮರುಪಾವತಿಯಾಗಿದೆ. ನಿನ್ನೆಯಷ್ಟೇ ಗ್ರಾಹಕರೊಬ್ಬರು ಸೋನಿ ಟಿವಿಯ ಬದಲಾಗಿ ಥಾಮ್ಸನ್​ ಟಿವಿ ಪಡೆದು ಮೋಸ ಹೋದ ಪ್ರಕರಣದ ಬಗ್ಗೆ ಓದಿದ್ದಿರಿ. ಆಗಾಗ ಫ್ಲಿಪ್​ಕಾರ್ಟ್​, ಅಮೇಝಾನ್​ನಂಥ ಆನ್​ಲೈನ್​ ಪ್ಲ್ಯಾಟ್​ಫಾರ್ಮ್​ನಲ್ಲಿ ವಂಚಕರ ಜಾಲ ಆಟವಾಡುತ್ತಿರುತ್ತದೆ. ಗ್ರಾಹಕರು ಆನ್​ಲೈನ್ ಮೂಲಕ ದೂರು ಸಲ್ಲಿಸಿದಾಗ ತಕ್ಕಮಟ್ಟಿಗೆ ಪರಿಹಾರ ಸಿಗುತ್ತಿರುತ್ತವೆ.

ಇದನ್ನೂ ಓದಿ : Viral Video: ಹುಲಿಗಳನ್ನು ಸಾಕಲಾಗದು; ಈ ಯುವತಿ ಯಾಕೆ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾಳೆ ಎನ್ನುತ್ತಿರುವ ನೆಟ್ಟಿಗರು

ನೆಟ್ಟಿಗರು ಈ ಪೋಸ್ಟ್​ ನೋಡಿ, ಆನ್​ಲೈನ್​ನಲ್ಲಿ ತಮಗಾದ ವಂಚನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಫ್ಲಿಪ್​ಕಾರ್ಟ್​ ಇಂಥ ಸಮಸ್ಯೆಗಳನ್ನು ಬಗೆಹರಿಸಲು ಎರಡರಿಂದ ಮೂರು ತಿಂಗಳುಗಳ ಕಾಲ ಕಾಯಿಸುತ್ತದೆ, ಅತೀ ಕೆಟ್ಟ ಗ್ರಾಹಕ ಸೇವೆ ಎಂದಿದ್ದಾರೆ ಒಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ