Pyar Ke Geet: 1999ರಲ್ಲಿ ಬಿಡುಗಡೆಯಾದ ‘ಪ್ಯಾರ್ ಕೇ ಗೀತ್’ ಆಲ್ಬಮ್ನಲ್ಲಿ ‘ಢೋಲನಾ’ ಹಾಡನ್ನು ಖ್ಯಾತ ಗಾಯಕರಾದ ಶುಭಾ ಮುದ್ಗಲ್ (Shubha Mudgal) ಮತ್ತು ಸುಖವಿಂದರ್ ಸಿಂಗ್ ಹಾಡಿದ್ದಾರೆ. ಈ ಹಾಡೀಗ ವೈರಲ್ ಆಗುತ್ತಿದೆ. ಒಂದು ಸಮಯದಲ್ಲಿ ಪ್ರೀನರ್ಸರಿಯಿಂದ ಹಿಡಿದು ಕಾಲೇಜು ವಾರ್ಷಿಕೋತ್ಸವ ಮತ್ತು ಆಫೀಸ್ ಪಾರ್ಟಿಗಳಲ್ಲಿ ಕೂಡ ಈ ಹಾಡಿಗೆ ನೃತ್ಯ ಮಾಡಲಾಗುತ್ತಿತ್ತು. ಇದೀಗ ಈ ಇಬ್ಬರು ಯುವತಿಯರು ಈ ಹಾಡಿಗೆ ಭರ್ಜರಿಯಾಗಿ ನರ್ತಿಸಿದ್ದು, ನೆಟ್ಟಿಗರು ಇವರಿಬ್ಬರನ್ನು ಶ್ಲಾಘಿಸುತ್ತಿದ್ದಾರೆ. ಅಬ್ಬಾ ಎಂಥಾ ಎನರ್ಜಿ ಎಂದು ಕೊಂಡಾಡುತ್ತಿದ್ದಾರೆ. ಆ. 16ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಇದೀಗ ಜನರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ : Viral Video: ಕಪ್ಪುಸುಂದರಿಯ ಕನ್ನಡಿಯೊಂದಿಗಿನ ಏಕಾಂತ; ಭಂಗ ಮಾಡಿದ ನೆಟ್ಟಿಗರು
ಕನಿಷ್ಠಾ ಶರ್ಮಾ ಎನ್ನುವವರು ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. 4.9 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ನೀವಿಬ್ಬರೂ ಈ ಹಾಡನ್ನು ಮತ್ತಷ್ಟು ರಂಗೇರಿಸಿದ್ದೀರಿ ಎಂದಿದ್ದಾರೆ ಅನೇಕರು. ನಾನು ಡ್ಯಾನ್ಸ್ ಪಾರ್ಟನರ್ ಹುಡುಕುತ್ತಿದ್ದೇನೆ ಈ ಹಾಡಿಗಾಗಿಯೇ ಡ್ಯಾನ್ಸ್ ಮಾಡಲು ಎಂದಿದ್ದಾರೆ ಕೆಲವರು.
ಈ ವಿಡಿಯೋ ನೋಡಿ ನನ್ನ ಶಾಲಾದಿನಗಳು ನೆನಪಾದವು ಎಂದಿದ್ದಾರೆ ಒಬ್ಬರು. ನಿಮ್ಮಿಬ್ಬರ ಕಾಸ್ಟ್ಯೂಮ್ ಬಹಳ ಆಕರ್ಷಕವಾಗಿದೆ ಎಂದು ಮತ್ತೊಬ್ಬರು. ಪರಸ್ಪರ ಹೆಜ್ಜೆ, ಅಭಿನಯ ಸಿಂಕ್ ಆಗಿದೆ ಎಂದು ಇನ್ನೊಬ್ಬರು. ನನಗೂ ಈ ಹಾಡಿಗೆ ಡ್ಯಾನ್ಸ್ ಮಾಡಬೇಕು ಎನ್ನಿಸುತ್ತಿದೆ ಎಂದು ತಮ್ಮ ಸ್ನೇಹಿತರನ್ನು ಟ್ಯಾಗ್ ಮಾಡಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು
ನನ್ನ ಎನರ್ಜಿಗೆ ಇವರ ಎನರ್ಜಿಗೆ ಪಕ್ಕಾ ಮ್ಯಾಚ್ ಆಗುತ್ತದೆ, ಇವರು ಯಾವ ಊರಿನಲ್ಲಿದ್ದಾರೆ? ಎಂದು ಕೇಳಿದ್ದಾರೆ ಒಬ್ಬರು. ಅವರಿಬ್ಬರಿಗೂ ಚಿಪ್ಸ್ ಬೇಕಿದೆ, ಅದಕ್ಕೆ ಅವರು ಹೀಗೆ ಕುಣಿಯುತ್ತಿದ್ದಾರೆ ಎಂದು ಇನ್ನೊಬ್ಬರು. ಅಂತೂ ಈ ಹಾಡು ಕೇಳಿ ಬಹಳ ದಿನವಾಗಿತ್ತು, ಇಡೀ ದಿನ ನಾ ಈ ಹಾಡಿನ ಗುಂಗಿನಲ್ಲಿಯೇ ಎಂದು ಮತ್ತೊಬ್ಬರು.
ಈ ವಿಡಿಯ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:43 pm, Fri, 1 September 23