ಎಲ್ಲವೂ ಸರಿಯಿತ್ತು, ಆದರೆ ಏಕಾಏಕಿ ಆ ಹುಡುಗ ಅಥವಾ ಆ ಹುಡುಗಿ ಈ ಪ್ರೀತಿ ಸರಿಹೋಗಲ್ಲ ಅಂತ ಬಿಟ್ಟುಹೋಗಿಬಿಟ್ಟರು ಅನ್ನೋ ಮಾತನ್ನು ನೀವೆಲ್ಲಾದರೂ ಕೇಳಿದ್ದಲ್ಲಿ ಅಥವಾ ನೀವೇ ಆ ಮಾತನ್ನು ಆಡಿದ್ದಲ್ಲಿ ಈ ಜ್ಯೋತಿಷ ಲೇಖನ ಬಹಳ ಆಸಕ್ತಿಕರವಾಗಿರುತ್ತದೆ. ಅಥವಾ ನಿಮಗೂ ಸಂಗಾತಿಯ ಸಹವಾಸ ಬೇಡ ಎನಿಸಲು ಶುರುವಾಗಿದ್ದರೆ, ಇದ್ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿದ್ದಲ್ಲಿ ಉತ್ತರವೂ ಸಿಕ್ಕಂತಾಗುತ್ತದೆ. ಜ್ಯೋತಿಷದ ಪ್ರಕಾರ ಯಾವ ರಾಶಿಯವರು ಯಾವಾಗ ಸಂಗಾತಿ ಜತೆಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
Ad
1 / 12
ಮೇಷ
ಸಂಗಾತಿ ಬೋರ್ ಎನಿಸುವುದಕ್ಕೆ ಶುರುವಾದರೆ ಯಾವುದೇ ಆಲೋಚನೆಯೂ ಮಾಡದೆ ಮೇಷ ರಾಶಿವರು ಬಿಟ್ಟುಬಿಡುತ್ತಾರೆ. ಸಂಬಂಧಗಳಿಂದ ಇವರು ಹೊರಬರುವುದಕ್ಕೆ ಅದೇ ಮುಖ್ಯ ಕಾರಣ. ಯಾವ ವ್ಯಕ್ತಿ ಬೋರಿಂಗ್ ಆಗಿರುತ್ತಾರೋ ಅಂಥವರ ಜತೆಗೆ ಇವರು ಇರಲಾರರು. ತುಂಬ ಬೇಗ ಅಂಥ ಜನರ ಮೇಲೆ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.
2 / 12
ವೃಷಭ
ಯಾವುದೇ ವಿಷಯವನ್ನಾಗಲೀ ಬಹಳ ನಿಧಾನವಾಗಿ ತೆಗೆದುಕೊಳ್ಳುತ್ತಾರೆ ಈ ರಾಶಿಯವರು. ನೋಡನೋಡುತ್ತಲೇ ಲವ್ ಆಯಿತು ಅನ್ನೋ ಜಾಯಮಾನದವರಲ್ಲ ಇವರು. ಪದೇಪದೇ ಫೋನ್ ಮಾಡೋದು ಹಾಗೂ ಹೆಚ್ಚು ಸಮಯ ಕೇಳೋದು ಮಾಡಿಬಿಟ್ಟರೆ ಸಂಗಾತಿ ಬಗ್ಗೆ ಬಹಳ ಬೇಗ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.