ಗಣಪತಿಯ ಹುಟ್ಟಿದ ದಿನವನ್ನು ಗಣೇಶ ಚತುರ್ಥಿ ಎಂದು ಆಚರಿಸಲಾಗುತ್ತದೆ. ಗಣೇಶ ಹಬ್ಬವನ್ನು ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ಭಾಗಗಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ವಿಘ್ನವಿನಾಶಕ ಗಣಪ ಎಲ್ಲರಿಗೂ ಅತಿ ಹತ್ತಿರ. ವಿವಿಧ ರೂಪಗಳಲ್ಲಿ ಗಣೇಶನನ್ನು ಪೂಜೆ ಮಾಡಲಾಗುತ್ತದೆ. ಈ ಹಬ್ಬದ ಕ್ರೇಜ್ ಭಾರತದಲ್ಲಿ ಹೇಗಿದೆ ಎಂದು ಹೊಸತಾಗಿ ಹೇಳಬೇಕಾದ್ದಿಲ್ಲ. ಅದಕ್ಕೆ ಹೊರತಾಗಿ ವಿದೇಶಗಳಲ್ಲಿ ಕೂಡ ಗಣೇಶ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಇಲ್ಲಿ ನಾವು ಅಂತಹ ಒಂದು ಉದಾಹರಣೆಯನ್ನು ಹೇಳುತ್ತಿದ್ದೇವೆ.
ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಂಡುಬಂದಂತೆ ವಿದೇಶಿ ಪ್ರಜೆಯೊಬ್ಬರು ಗಣೇಶನ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದಾರೆ. ದೇವ ಶ್ರೀಗಣೇಶ ಎಂಬ ಹಾಡಿಗೆ ವಿದೇಶೀಯರು ಒಬ್ಬರು ಸೂಪರ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ನಾವು ಮಾತನಾಡುತ್ತಿರುವುದು ಡ್ಯಾನ್ಸಿಂಗ್ ಡ್ಯಾಡ್ ಎಂದೇ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ರಿಕಿ ಪಾಂಡ್ ಬಗ್ಗೆ. ಬಾಲಿವುಡ್ ಹಾಡುಗಳಿಗೆ ರಿಕಿ ಪಾಂಡ್ ಹೆಜ್ಜೆ ಹಾಕಿರುವ ವಿಡಿಯೋಗಳು ಬಹುತೇಕ ಬಾರಿ ವೈರಲ್ ಆಗುತ್ತಿರುತ್ತದೆ. ಇದೇ ಕಾರಣಕ್ಕೆ ತುಂಬಾ ಜನ ಭಾರತೀಯರು ಕೂಡ ಆತನ ಫ್ಯಾನ್ಸ್, ಫಾಲೋವರ್ಸ್ ಆಗಿದ್ದಾರೆ. ಇದೀಗ ಗಣೇಶೋತ್ಸವ ಸಂದರ್ಭದಲ್ಲಿ ದೇವ ಶ್ರೀಗಣೇಶ ಹಾಡಿಗೆ ಡ್ಯಾನ್ಸಿಂಗ್ ಡ್ಯಾಡ್ ಕುಣಿದಿರುವುದು ವೈರಲ್ ಆಗಿದೆ.
ವಿಡಿಯೋದಲ್ಲಿ ನೀವು ನೋಡಿದಂತೆ, ಡ್ಯಾನ್ಸಿಂಗ್ ಡ್ಯಾಡ್ ದೇಸಿ ಶೈಲಿಯಲ್ಲಿ, ಭಾರತೀಯ ಉಡುಪು ಧರಿಸಿ ಹೆಜ್ಜೆ ಹಾಕಿದ್ದಾರೆ. ಬಾಲಿವುಡ್ನ ಅಗ್ನಿಪಥ್ ಸಿನಿಮಾದ ದೇವ ಶ್ರೀಗಣೇಶ ಹಾಡು ಕೂಡ ಕೇಳಿದೆ. ತಮ್ಮದೇ ಸಂಭ್ರಮದ ಶೈಲಿಯಲ್ಲಿ ಕುಣಿದು, ವಿಡಿಯೋ ಹಂಚಿಕೊಂಡಿದ್ದಾರೆ.
ರಿಕಿ ಪಾಂಡ್ ಭಾರತೀಯ ಹಾಡುಗಳನ್ನು ಇಷ್ಟಪಡುತ್ತಾರೆ ಎಂದು ಹೇಳಲು ಹತ್ತು ಕಾರಣಗಳನ್ನು ಕೊಡಬೇಕಿಲ್ಲ. ಅವರ ಸಾಮಾಜಿಕ ಜಾಲತಾಣ ಖಾತೆ ನೋಡಿದರೆ ಅದು ತಿಳಿದುಬರುತ್ತದೆ. ಭಾರತೀಯ ಹಾಡಿಗೆ ಹತ್ತಾರು ರೀತಿಯಲ್ಲಿ ಅವರು ಕುಣಿದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ಗಣೇಶ ಚತುರ್ಥಿ ವಿಡಿಯೋ ಇದೀಗ ಜನರ ಗಮನ ಸೆಳೆದಿದೆ.
ಇದನ್ನೂ ಓದಿ: ಯಶ್-ರಾಧಿಕಾ ಪಂಡಿತ್ ಪೂಜೆ ಮಾಡುವಾಗ ಗಂಟೆ ಬಾರಿಸಿದ ಯಥರ್ವ್; ವಿಡಿಯೋ ವೈರಲ್
ಇದನ್ನೂ ಓದಿ: ಅರಬ್ ಶೇಖ್ ಬಾಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡು; ವೈರಲ್ ಆಯ್ತು ವಿಡಿಯೋ