ಹೌದು, ‘ವಿರಿಂಚಿನೈ ವಿರ್ಚಿಂಚಿತಿನಿ’ ಹಾಡನ್ನು ಅರಬ್ ಶೇಖ್ ಹಾಡಿದ್ದಾರೆ. ಇದನ್ನು ಅವರು ಟಿಕ್ ಟಾಕ್ನಲ್ಲಿ ಹಂಚಿಕೊಂಡಿದ್ದರು. ನಂತರ ಈ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅರಬ್ ಶೇಖ್ ಸುಮಧುರವಾಗಿ ಹಾಡಿದ್ದು, ಎಸ್ಪಿಬಿ ಅಭಿಮಾನಿಗಳಿಗೆ ಇದು ಇಷ್ಟವಾಗಿದೆ. ಅಲ್ಲದೆ, ಅರಬ್ ರಾಷ್ಟ್ರಗಳಲ್ಲಿ ಎಸ್ಪಿಬಿಗೆ ದೊಡ್ಡ ಅಭಿಮಾನಿ ಬಳಗ ಇದೆ ಅನ್ನೋ ವಿಚಾರ ಸಾಕಷ್ಟು ಖುಷಿ ನೀಡಿದೆ.
ಎಸ್ಪಿಬಿ ಹೆಸರಲ್ಲಿ ಹಲವು ದಾಖಲೆ ಕೂಡ ಇವೆ. ಅವರು ಒಂದೇ ದಿನ 21 ಕನ್ನಡ ಹಾಡುಗಳನ್ನು ರೆಕಾರ್ಡ್ ಮಾಡಿ ದಾಖಲೆ ಮಾಡಿದ್ದಾರೆ. ಇಲ್ಲಿಯವರೆಗೆ ಈ ದಾಖಲೆ ಮುರಿಯೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಎಸ್ಪಿಬಿ ಅವರಿಗೆ ಆರು ಬಾರಿ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಎಸ್ಪಿಬಿ ಅವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಸಂಗೀತ ಪ್ರೇಮಿಗಳ ಹೃದಯದಲ್ಲಿ ಸುಮಧುರ ಗೀತೆಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಅವರ ಹಾಡುಗಳು ಇಂದಿಗೂ ಕೇಳುಗರ ಕಿವಿಯಲ್ಲಿ ಗುನುಗುತ್ತಿವೆ. ಅವರನ್ನು ಇಂದು ಹಾಡುಗಳ ಮೂಲಕ ಎಲ್ಲರೂ ನೆನೆಯುತ್ತಿದ್ದಾರೆ. ಅದಕ್ಕೆ ಇದು ತಾಜಾ ಉದಾಹರಣೆ.
ಇದನ್ನೂ ಓದಿ: ನಿಧನರಾಗುವುದಕ್ಕೂ ಮುನ್ನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮಾಡಿದ್ದರು ದೇವರು ಮೆಚ್ಚುವ ಕೆಲಸ
ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್ ಕೃಷ್ಣನ್