ಅರೆ ಮನುಷ್ಯರೊಂದಿಗೆ ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುತ್ತಿರುವ ಇದು ಆಸ್ಟ್ರಿಚ್ ಅಲ್ಲವೆ? ಹೀಗೆಂದು ಮೊದಲ ನೋಟಕ್ಕೆ ಅನ್ನಿಸುವುದು ಸಹಜ. ಹೊರಾಂಗಣದಲ್ಲಿ ತನ್ನ ನಡಿಗೆಯ ವೇಗವನ್ನು ತಾನೇ ನಿಯಂತ್ರಿಸಿಕೊಂಡು ಓಡುವುದನ್ನು ಕಲಿತ ಮೊದಲ ಬೈಪೆಡೆಲ್ ರೋಬೋಟ್ ಕ್ಯಾಸ್ಸಿ. ಇದು ಮೊಣಕಾಲುಗಳನ್ನು ಹೊಂದಿರುವುದರಿಂದ ನಡೆಯುವಾಗ ಅಥವಾ ಓಡುವಾಗ ಆಸ್ಟ್ರಿಚ್ನಂತೆ ಬಾಗಬಲ್ಲುದು. ಈ ಹಿಂದೆ 2021 ರಲ್ಲಿ ಇದು 53 ನಿಮಿಷಗಳಲ್ಲಿ 5 ಕಿ.ಮೀ. ಓಡುವ ಸಾಮರ್ಥ್ಯವನ್ನು ಪಡೆದುಕೊಂಡಿತ್ತು. ಇದೀಗ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ತನ್ನ ಹಳೆಯ ದಾಖಲೆಯನ್ನು ಮುರಿದಿದೆ.
Robot World Record: Not sure whether to be inspired or terrified? https://t.co/xevauknkpV pic.twitter.com/2SlycGFsaX
ಇದನ್ನೂ ಓದಿ— Dan Tilkin (@DanTilkinKOIN6) September 27, 2022
‘ಒಂದೊಂದೇ ಹಂತದಲ್ಲಿ ಸಂಶೋಧನೆ ನಡೆಸುತ್ತಿರುವ ನಾವು ಹಲವಾರು ವರ್ಷಗಳಿಂದ ವಿಶ್ವದಾಖಲೆ ಗುರಿ ಇಟ್ಟುಕೊಂಡು ಶ್ರಮಿಸುತ್ತಿದ್ದೇವೆ.’ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿಕೊಂಡ ಪದವಿ ವಿದ್ಯಾರ್ಥಿ ಡೆವಿನ್ ಕ್ರೌಲಿ ಹೇಳಿದ್ದಾರೆ.
‘ನಿಂತುಕೊಂಡಿರುವ ಭಂಗಿಯಿಂದ ಓಟವನ್ನು ಪ್ರಾರಂಭಿಸುವುದು ಮತ್ತು ಓಟದಿಂದ ನಿಲ್ಲುವ ಭಂಗಿಗೆ ಬರುವುದು ಅತ್ಯಂತ ಕಷ್ಟಕರವಾದ ಪ್ರಕ್ರಿಯೆ. ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ, ವಿಮಾನಿನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ನಂತೆ’ ಎಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಧ್ಯಾಪಕ ಅಲನ್ ಫರ್ನ್ ಹೇಳಿದ್ದಾರೆ. ‘ಈ 100 ಮೀಟರ್ ಓಟದಲ್ಲಿ ರೋಬೋಟ್ ಯಶಸ್ವಿಯಾಗಬೇಕೆಂದರೆ ಕೃತಕ ಬುದ್ಧಿಮತ್ತೆಯ ತಾಂತ್ರಿಕತೆಯಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಯಿತು’ ಎಂದು ಅವರು ಹೇಳಿದ್ದಾರೆ.
3 ಮಿಲಿಯನ್ಗಿಂತಲೂ ಹೆಚ್ಚು ವೀಕ್ಷಕರನ್ನು ಈ ವಿಡಿಯೋ ಪಡೆದುಕೊಂಡಿದೆ. ನೆಟ್ಟಿಗರು ಈ ಕುರಿತು ಅಚ್ಚರಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಈ ರೋಬೋಟ್ ಭಯ ತರುವಂತಿದೆಯಾ, ಸ್ಫೂರ್ತಿ ತರುವಂತಿದೆಯಾ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:05 pm, Wed, 28 September 22