Python: ಸಬ್‌ಸ್ಟೇಷನ್‌ನೊಳಗೆ ಎರಡು ದೊಡ್ಡ ಹೆಬ್ಬಾವುಗಳು (Rock Python) ಕಾಣಿಸಿಕೊಂಡಿದೆ. ವಿದ್ಯುತ್ ತಂತಿಗಳೊಳಗೆ ಸಿಕ್ಕಿಹಾಕಿಕೊಂಡಿದ್ದ ಈ ಹೆಬ್ಬಾವುಗಳನ್ನು ಧೈರ್ಯಶಾಲಿಯೊಬ್ಬರ ಸೂಕ್ತ ಮಾರ್ಗದರ್ಶನದಲ್ಲಿ ತಂಡವೊಂದು ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ. ಒಂದು ಹೆಬ್ಬಾವು ಸಬ್ಸ್ಟೇಷನ್ನ ವಿದ್ಯುತ್ ತಂತಿಗಳ ಮೇಲೆ ಇತ್ತು. ಇನ್ನೊಂದು ಲೈವ್ ವೈರ್ಗಳೊಳಗೆ ಇತ್ತು. ವಿದ್ಯುತ್ ತಂತಿಗಳಿಂದ ಹಾವುಗಳು ಅಪಾಯಕ್ಕೆ ಈಡಾಗುವ ಮೊದಲೇ ರಕ್ಷಣಾ ತಂಡವು ಇವುಗಳನ್ನು ರಕ್ಷಿಸಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ರಕ್ಷಣಾ ತಂಡವನ್ನು ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ : Viral Video: ವಾಟ್ ಝುಮ್ಕಾ; ಜೋಡಿಯ ಜಬರ್ದಸ್ತ್ ನೃತ್ಯ, ಪವರ್ ಪ್ಯಾಕ್ಡ್ ಡ್ಯಾನ್ಸ್ ಎಂದ ನೆಟ್ಟಿಗರು
ಪ್ರಾಣಿ ರಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ ಮುರಾರಿ ಲಾಲ್ ಈ ಹಾವನ್ನು ರಕ್ಷಿಸಿದ್ದಾರೆ. ಈ ಸಮಯದಲ್ಲಿ ಒಂದು ಹೆಬ್ಬಾವು ಇವರ ಹೆಬ್ಬೆರಳು ಕಚ್ಚಿರುವುದನ್ನು ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಇದು ಅದ್ಭುತವಾದ ಕಾರ್ಯ. ಆದರೆ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ ಎಂದಿದ್ದಾರೆ.
ಈ ವಿಡಿಯೋ ಅನ್ನು ಈತನಕ ಸುಮಾರು 7 ಮಿಲಿಯನ್ ಜನರು ನೋಡಿದ್ದಾರೆ. 5.8 ಲಕ್ಷ ಜನರು ಲೈಕ್ ಮಾಡಿದ್ದಾರೆ. ನಿಮ್ಮ ಈ ಪ್ರಾಣಿಪ್ರೇಮವನ್ನು ಹೊಗಳಲು ಶಬ್ದಗಳೇ ಹೊಮ್ಮುತ್ತಿಲ್ಲ. ನಿಜಕ್ಕೂ ಇದು ಅದ್ಭುತವಾದ ಕಾರ್ಯಾಚರಣೆ ಎಂದಿದ್ದಾರೆ ಅನೇಕರು. ಈ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಧೈರ್ಯಶಾಲಿಗಳು ಮಾತ್ರ ಇದನ್ನು ನಿಭಾಯಿಸಲು ಸಾಧ್ಯ ಎಂದಿದ್ದಾರೆ ಒಬ್ಬರು. ಜಾಗ್ರತೆಯಿಂದ ಇಂಥ ಕೆಲಸಗಳಲ್ಲಿ ತೊಡಗಿಕೊಳ್ಳಿ, ನಿಮ್ಮ ಜೀವವೂ ಅಮೂಲ್ಯ ಎಂದಿದ್ದಾರೆ ಕೆಲವರು.
ಇದನ್ನೂ ಓದಿ : Viral Video: ಉತ್ತರ ಪ್ರದೇಶ; ಮಥುರಾ ರೈಲು ಹಳಿಬಿಟ್ಟು ಪ್ಲ್ಯಾಟ್ಫಾರ್ಮ್ ಏರಿದ್ದಕ್ಕೆ ಕಾರಣ ಇಲ್ಲಿದೆ
ಇದು ಬಿಎಸ್ಎನ್ಲ್ ಆಫೀಸಿರಬೇಕು ಎಂದಿದ್ದಾರೆ ಕೆಲವರು. ಯಾಕೆ ನೀವು ಹೊಸ ಉದ್ಯೋಗಿಗಳಿಗೆ ಕೆಲಸದಿಂದ ತೆಗೆಯುತ್ತಿದ್ದೀರಿ ಎಂದು ಕೇಳಿದ್ದಾರೆ ಒಬ್ಬರು. ಅವರು ರಿಪೇರಿ ಮಾಡಿದ ಮೇಲೆ ನೀವು ಅವರಿಗೆ ಸಂಬಳ ಕೊಡದೇ ಹಾಗೆ ಹೊರಹಾಕುವುದು ಸರಿಯೇ? ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ