Video: ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ ಒಮ್ಮೆ

ಕೈಯಲ್ಲಿ ಮೊಬೈಲ್ ಇದ್ರೆ ನಮ್ಮ ಸುತ್ತಮುತ್ತಲಿನ ಏನು ನಡೆದ್ರು ಗೊತ್ತಾಗಲ್ಲ. ಕೆಲವೊಮ್ಮೆಈ ಮೊಬೈಲ್ ಫೋನ್‌ನಲ್ಲೇ ಕಳೆದು ಹೋಗ್ತೇವೆ. ಹೌದು, ರೈಲ್ವೆ ಸ್ಟೇಟಸ್‌ನಲ್ಲಿ ಕುಳಿತಿದ್ದ ವೃದ್ಧರೊಬ್ಬರಿಗೆ ಹೀಗೆ ಆಗಿದೆ. ಮೊಬೈಲ್ ನೋಡುತ್ತಾ ಕುಳಿತಿದ್ದ ಈ ವ್ಯಕ್ತಿಗೆ ರೈಲು ಹೊರಟದ್ದೇ ತಿಳಿಯೇ ಇಲ್ಲ. ಆ ಬಳಿಕ ಈ ವೃದ್ಧ ವ್ಯಕ್ತಿ ಮಾಡಿದ್ದೇನು ಗೊತ್ತಾ? ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.

Video: ಮೊಬೈಲ್‌ ನೋಡುತ್ತಾ ಕುಳಿತು ಮೈ ಮರೆತ್ರೆ ಏನಾಗುತ್ತೆ ಅನ್ನೋದನ್ನು ನೋಡಿ ಒಮ್ಮೆ
ವೈರಲ್‌ ವಿಡಿಯೋ
Image Credit source: Twitter

Updated on: Jul 23, 2025 | 5:29 PM

ಈಗಿನ ದಿನಗಳಲ್ಲಿ ಮೊಬೈಲ್ (mobile) ಗೀಳು ಹೆಚ್ಚಾಗಿದೆ. ಸ್ವಲ್ಪ ಸಮಯ ಸಿಕ್ಕರೆ ಸಾಕು, ಸ್ಮಾರ್ಟ್ ಫೋನ್‌ನಲ್ಲಿ ಕೈಯಲ್ಲಿ ಇದ್ದರೆ ಅದನ್ನು ನೋಡುತ್ತಾ ಸಮಯ ಕಳೆಯುತ್ತಾರೆ. ಹೌದು ಟೈಮ್ ಪಾಸ್ ಆದದ್ದು ಗೊತ್ತಾಗಲ್ಲ ಅನ್ನೋದೇನೆ ನಿಜ. ಆದರೆ ಇದರಿಂದ ಆಗುವ ಎಡವಟ್ಟುಗಳು ಒಂದೆರಡರಲ್ಲ. ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ಎಲ್ಲೆಂದರಲ್ಲಿ ಮೊಬೈಲ್ ನೋಡಬಾರ್ದು ಅಂತ ಅನಿಸಿದ್ರೂ ತಪ್ಪಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿ ರೈಲ್ವೆ ಸ್ಟೇಷನ್‌ಗೆ ಬಂದ ವೃದ್ಧರೊಬ್ಬರು ರೈಲು ಹೊರಡಲು ಇನ್ನು ಟೈಮ್‌ ಇದೆಯಲ್ಲ ಎಂದು ಮೊಬೈಲ್ ನೋಡುತ್ತಾ ಕುಳಿತುಕೊಂಡಿದ್ದಾರೆ. ಆದ್ರೆ ಈ ವೃದ್ಧನಿಗೆ ಟ್ರೈನ್ ಹೊರಟದ್ದೇ ತಿಳಿಯಲಿಲ್ಲ. ಸ್ವಲ್ಪ ಸಮಯದ ಬಳಿಕ  ಟ್ರೈನ್‌ ಹೊರಟಿರುವುದು ತಿಳಿಯುತ್ತಿದ್ದಂತೆ ಒಂದು ತಬ್ಬಿಬ್ಬಾದ ಈ ವೃದ್ಧ ಚಲಿಸುವ ರೈಲು ಹತ್ತಲು ಮುಂದಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯು ಬೇತುಲ್ ರೈಲ್ವೆ ನಿಲ್ದಾಣದಲ್ಲಿ (Betul Railway station) ನಡೆದಿದೆ ಎನ್ನಲಾಗಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

@jsuryareddy ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದೊಂದಿಗೆ ಮೊಬೈಲ್ ಫೋನ್‌ಗಳಲ್ಲಿ, ಸಾಮಾಜಿಕ ಮಾಧ್ಯಮದ ವ್ಯಸನಿಯಾಗಿರುವ ಜನರೇ , ರೈಲಿನಲ್ಲಿ ಪ್ರಯಾಣಿಸುವಾಗ ಜಾಗರೂಕರಾಗಿರಿ ಬೇತುಲ್ ರೈಲ್ವೆ ನಿಲ್ದಾಣದಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಸತ್ಯ ಪ್ರಕಾಶ್ ರಾಜೂರ್ಕರ್ ಅವರು ವೃದ್ಧರೊಬ್ಬರ ಜೀವ ರಕ್ಷಿಸಿದ ವಿಡಿಯೋ ಇದು. ಚಲಿಸುವ ರೈಲು ಹತ್ತಲು ಪ್ರಯತ್ನಿಸುವಾಗ ಜಾರಿಬಿದ್ದ 66 ವರ್ಷದ ವ್ಯಕ್ತಿಯನ್ನು ರಕ್ಷಿಸಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನಿಲ್ದಾಣಗಳಲ್ಲಿ ಮೊಬೈಲ್ ಫೋನ್‌ ಬಳಸಿ ಗೊಂದಲಗಳಾಗುವುದನ್ನು ತಪ್ಪಿಸಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಅಂಬಾನಿ ದಂಪತಿಯ ಈ ಅಪರೂಪದ ಫೋಟೋ ನೋಡಿರಲು ಸಾಧ್ಯವಿಲ್ಲ
ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ
ರೈಲಿನಲ್ಲಿ ಬಡ ವ್ಯಾಪಾರಿ ಚೀಲದಲ್ಲಿದ್ದ ತಿಂಡಿ ಎಗರಿಸಿದ ಪ್ರಯಾಣಿಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ವೃದ್ಧಯೊಬ್ಬರು ರೈಲ್ವೆ ಪ್ಲಾಟ್ ಫಾರ್ಮ್‌ನಲ್ಲಿ ಮೊಬೈಲ್ ನೋಡುತ್ತಾ ಕುಳಿತಿರುವುದು ಕಾಣಬಹುದು. ಮೊಬೈಲ್‌ನಲ್ಲೇ ಮುಳುಗಿದ ಈ ವಯಸ್ಸಾದ ವ್ಯಕ್ತಿಗೆ ರೈಲು ಹೊರಟಿರುವುದು ಗಮನಕ್ಕೆ ಬರಲೇ ಇಲ್ಲ. ಸ್ವಲ್ಪ ಸಮಯದ ಬಳಿಕ ರೈಲು ಹೊರಟಿರುವುದು ಗೊತ್ತಾಗುತ್ತಿದ್ದಂತೆ ಏನು ಮಾಡಬೇಕೆಂದು ತೋಚದೆ ವೇಗವಾಗಿ ಚಲಿಸುತ್ತಿದ್ದ ರೈಲು ಹತ್ತಲು ಮುಂದಾಗಿದ್ದಾರೆ. ಆದ್ರೆ ರೈಲು ಬಹಳ ವೇಗವಾಗಿದ್ದ ಕಾರಣ ವೃದ್ದ ಕೆಳಗೆ ಬಿದ್ದಿದ್ದಾರೆ. ಅಲ್ಲೇ ಇದ್ದ ಆರ್‌ಪಿಎಫ್ ಕಾನ್ಸ್‌ಟೇಬಲ್ ಸತ್ಯ ಪ್ರಕಾಶ್ ರಾಜೂರ್ಕರ್ ಅವರು ಈ ವೃದ್ಧನನ್ನು ಎಳೆದು ಜೀವ ಉಳಿಸಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ :Video: ಅಯ್ಯೋ… ಅಮ್ಮ ನನಗೆ ಕುರ್ಚಿಯಲ್ಲಿ ಕೂರೋಕೆ ಆಗ್ತಿಲ್ಲ, ಈ ಮರಿಯಾನೆಯ ಕಷ್ಟ ನೋಡಿ

ಜುಲೈ 21 ರಂದು ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆರ್‌ಪಿಎಫ್ ಕಾನ್ಸ್‌ಟೇಬಲ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಮಯ ಪ್ರಜ್ಞೆ ವೃದ್ಧನ ಪ್ರಾಣ ಉಳಿಸಿತು ಎಂದಿದ್ದಾರೆ. ಮತ್ತೊಬ್ಬರು, ಎಲ್ಲೆಂದರಲ್ಲಿ ಕುಳಿತು ಮೊಬೈಲ್ ನೋಡುವ ಮುನ್ನ ಈ ವಿಡಿಯೋ ನಿಮಗೊಂದು ಪಾಠವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಈಗಿನವರು ಮೊಬೈಲ್ ಚಟಕ್ಕೆ ಬಿದ್ದಿದ್ದಾರೆ. ಮೊಬೈಲ್ ಬಿಟ್ಟರೆ ಪ್ರಪಂಚವೇ ಇಲ್ಲ ಎನ್ನುವಂತಾಗಿದೆ ಎಂದು ಕಾಮೆಂಟ್‌ನಲ್ಲಿ ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Wed, 23 July 25