Viral Video : ಅಳಿವಿನಂಚಿನಲ್ಲಿರುವ ಚಿರತೆಗಳ ವಿಷಯ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಹೀಗಿರುವಾಗಲೇ ಚಿರತೆಯ ವಿಡಿಯೋ ಒಂದು ನೆಟ್ಟಿಗರ ಗಮನ ಸೆಳೆದಿದೆ. ಐಎಫ್‌ಎಸ್ ಅಧಿಕಾರಿ ಕ್ಲೆಮೆಂಟ್ ಬೆನ್ ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಾಹನ ಕಾಡಿನಲ್ಲಿ ಸಫಾರಿಗೆ ಹೊರಟಿದೆ. ಇದರ ತುಂಬಾ ಪ್ರವಾಸಿಗರಿದ್ಧಾರೆ. ಮಧ್ಯೆ ಚಿರತೆಯೊಂದು ಅಡ್ಡ ಬರುತ್ತದೆ. ಕೆಲ ಸೆಕೆಂಡುಗಳಲ್ಲಿ ವಾಹನದ ಮೇಲೆ ಹಾರುತ್ತದೆ ಚಿರತೆ. ಪ್ರವಾಸಿಗರು ಭಯಭೀತರಾಗುತ್ತಾರೆ. ಸನ್ ರೂಫ್ನಿಂದ ಇಣುಕಿದಾಗಲಂತೂ ಜೀವವೇ ಬಾಯಿಗೆ ಬಂದಂತಾಗುತ್ತದೆ. ಅಂಥದ್ದರಲ್ಲಿ ಸಫಾರಿ ಗೈಡ್ ಎದ್ದುನಿಂತು ಚಿರತೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲಾರಂಭಿಸುತ್ತಾನೆ.
African Selfie…Cheetah style pic.twitter.com/WnOHkB5J9D
ಇದನ್ನೂ ಓದಿ— Clement Ben IFS (@ben_ifs) September 21, 2022
ನೋಡಿದ ಯಾರಿಗೂ ಇದು ಎಂಥ ಅಪಾಯಕಾರಿ ಸ್ಥಿತಿ ಅನ್ನಿಸದೇ ಇರದು. ಇನ್ನು ಹೀಗೆ ವಾಹನಗಳನ್ನು ಏರಿದ ಚಿರತೆಗಳು ಕೆಳಗಿಳಿಯಲು ಸಾಮಾನ್ಯವಾಗಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತವೆ. ಆದರೆ ಇಲ್ಲಿ ಈ ಚಿರತೆ ಎಷ್ಟು ಸಮಯ ತೆಗೆದುಕೊಂಡಿತು ಎನ್ನುವುದು ತಿಳಿದುಬಂದಿಲ್ಲ. ಸೆಲ್ಫೀ ತೆಗೆದುಕೊಂಡ ನಂತರ ಈ ವಿಡಿಯೋ ಥಟ್ಟನೆ ಮುಗಿದುಬಿಡುತ್ತದೆ. 78,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ಈ ವಿಡಿಯೋ ಪಡೆದಿದೆ.
ಸಫಾರಿ ಗೈಡ್ನ ಶೌರ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರಾದರೂ ಬಹಳಷ್ಟು ಜನರು ಈ ನಡೆ ಅಪಾಯಕಾರಿ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ