Sandwich Bag: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?

|

Updated on: Jan 16, 2024 | 6:26 PM

ಐಷಾರಾಮಿ ಫ್ಯಾಷನ್ ಕಂಪನಿ ಲೂಯಿಸ್​​​​ ವಿಟಾನ್ ತಯಾರಿಸಿದ ಈ ಬ್ಯಾಗ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಆದ್ದರಿಂದ ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ? ಇದರ ವಿಶೇಷತೆ ಏನು? ಇಲ್ಲಿ ತಿಳಿದುಕೊಳ್ಳಿ.

Sandwich Bag: ಕಾಗದದ ಚೀಲದಂತೆ ಕಾಣುವ ಈ ಬ್ಯಾಗಿನ ಬೆಲೆ 3 ಲಕ್ಷ ರೂ.; ಯಾಕಿಷ್ಟು ದುಬಾರಿ?
Sandwich Bag
Image Credit source: instagram
Follow us on

ಈ ಕೆಳಗಿನ ಚಿತ್ರದಲ್ಲಿ ಕಾಣುವ ಬ್ಯಾಗ್​​​ ನೋಡಲು ಸಿಂಪಲ್​ ಆಗಿದ್ದರೂ ಅದರ ಬೆಲೆ ಕೇಳಿದರೆ ನೀವು ಶಾಕ್​ ಆಗುವುದಂತೂ ಖಂಡಿತಾ. ಸಾಮಾನ್ಯವಾಗಿ ಪುಡ್​​ ಆರ್ಡರ್​​ ಮಾಡಿದಂತಹ ಸಂದರ್ಭದಲ್ಲಿ ಇದೇ ವಿನ್ಯಾಸದ ಪೇಪರ್​​ ಬ್ಯಾಗ್​​​ಗಳಲ್ಲಿ ಪ್ಯಾಕ್​​ ಮಾಡಿ ಕೊಡುವುದನ್ನು ನೀವು ನೋಡಿರುತ್ತೀರಿ. ಆದರೆ ಇದು ಆ ಕಾಗದದ ಬ್ಯಾಗ್​​ ಅಲ್ಲ. ಈ ಬ್ಯಾಗ್​​​​ ಬೆಲೆ 2,80,000 ರೂ. ಹೌದು ಈ ಚೀಲದ ಬೆಲೆ ಸುಮಾರು ರೂ. 3 ಲಕ್ಷ. ಐಷಾರಾಮಿ ಫ್ಯಾಷನ್ ಕಂಪನಿ ಲೂಯಿಸ್​​ ವಿಟಾನ್ ತಯಾರಿಸಿದ ಈ ಬ್ಯಾಗ್ ಇದೀಗಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಆದ್ದರಿಂದ ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ? ಇದರ ವಿಶೇಷತೆ ಏನು? ಇಲ್ಲಿ ತಿಳಿದುಕೊಳ್ಳಿ.

ಈ ಸಿಂಪಲ್​​ ಬ್ಯಾಗ್​​​​ ಯಾಕಿಷ್ಟು ದುಬಾರಿ?

ಜನವರಿ 4 ರಂದು ಐಕಾನಿಕ್ ಫ್ರೆಂಚ್ ಬ್ರ್ಯಾಂಡ್ ಲೂಯಿಸ್ ವಿಟಾನ್ ಹಸುವಿನ ಚರ್ಮ(Cowhide leather) ದಿಂದ ರಚಿಸಲಾದ ಈ ಬ್ಯಾಗ್​​​ ಅನ್ನು ಬಿಡುಗಡೆ ಮಾಡಿದೆ. ಇದನ್ನು “ಸ್ಯಾಂಡ್‌ವಿಚ್ ಬ್ಯಾಗ್” ಎಂದು ಹೆಸರಿಸಲಾಗಿದೆ. ಲೂಯಿ ವಿಟಾನ್‌ನ ಪುರುಷರ ಕ್ರಿಯೇಟಿವ್​​​​ ನಿರ್ದೇಶಕರಾದ ಫಾರೆಲ್ ವಿಲಿಯಮ್ಸ್ ಈ ಸ್ಯಾಂಡ್‌ವಿಚ್ ಬ್ಯಾಗ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಚೀಲದ ಉದ್ದ ಕೇವಲ 30 ಸೆಂ.ಮೀ, ಎತ್ತರ 27 ಸೆಂ.ಮೀ ಮತ್ತು ಅಗಲ 17 ಸೆಂ.ಮೀ ಇದೆ. ಬ್ಯಾಗ್​​ ಒಳಗೆ ಜಿಪ್ ಮಾಡಿದ ಪಾಕೆಟ್ ಮತ್ತು ಡಬಲ್ ಫ್ಲಾಟ್ ಪಾಕೆಟ್ ಅನ್ನು ಒದಗಿಸಲಾಗಿದೆ.

ಇದನ್ನೂ ಓದಿ: ವರ್ಷದಲ್ಲಿ ಕೇವಲ 8 ತಿಂಗಳು ಕೆಲಸ ಮಾಡಿ 84 ಲಕ್ಷ ರೂಪಾಯಿ ಸಂಬಳ ಗಳಿಸುತ್ತಾಳೆ ಈ ಯುವತಿ

ಸದ್ಯ ಈ ಬ್ಯಾಗ್‌ನ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗುತ್ತಿದ್ದು, ಸಾಕಷ್ಟು ನೆಟ್ಟಿಗರು ಬಗೆಬಗೆಯ ಕಾಮೆಂಟ್​​ ಮಾಡಿದ್ದಾರೆ. ಇನ್ನು ಕೆಲವಷ್ಟು ನೆಟ್ಟಿಗರು ಹಾಸ್ಯಸ್ಪದವಾಗಿ 30, 40ರೂಪಾಯಿಗೆ ಬ್ಯಾಗ್​​​​ಗೆ ಲಕ್ಷ ಲಕ್ಷ ಏಕೆ ಖರ್ಚು ಮಾಡಬೇಕು ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:06 pm, Tue, 16 January 24