Video: ಹುಟ್ಟಿದ ನಂತರ ಮೊದಲ ಬಾರಿಗೆ ನೀರಿನ ಸ್ಪರ್ಶ, ಆನೆ ಮರಿಯ ಸಂತಸ ನೋಡಿ

ಆನೆ ಮರಿಯೊಂದರ ಸುಂದರ ಹಾಗೂ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಈ ವಿಡಿಯೋವನ್ನು ನೋಡಿ ಬಳಕೆದಾರರೂ ಮೆಚ್ಚಿಕೊಂಡಿದ್ದಾರೆ. ಪ್ರಾಣಿ ಪ್ರೇಮಿಗಳು ಈ ವಿಡಿಯೋವನ್ನು ನೋಡಿ, ಸೋ ಕ್ಯೂಟ್​​ ಎಂದು ಹೇಳಿದ್ದಾರೆ. ಆನೆ ಮರಿಯೊಂದು ಮೊದಲ ಬಾರಿ ನೀರಿನಲ್ಲಿ ಸ್ನಾನ ಮಾಡಿದ ಖುಷಿಯ ಕ್ಷಣದ ವಿಡಿಯೋ ಇದಾಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಹುಟ್ಟಿದ ನಂತರ ಮೊದಲ ಬಾರಿಗೆ ನೀರಿನ ಸ್ಪರ್ಶ, ಆನೆ ಮರಿಯ ಸಂತಸ ನೋಡಿ
ವೈರಲ್​​ ವಿಡಿಯೋ

Updated on: Aug 28, 2025 | 6:00 PM

ಪ್ರಕೃತಿಯಲ್ಲಿ ಒಂದೊಂದು ಜೀವಿಗಳು ವಿಭಿನ್ನ ಹಾಗೂ ಅದ್ಭುತ. ಇಲ್ಲೊಂದು ಆನೆ ಮರಿಯ (baby elephant) ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಹುಟ್ಟಿದ ನಂತರ ಮೊದಲ ಬಾರಿಗೆ ಸ್ನಾನ ಮಾಡಿಸಲಾಗಿದೆ. ಸೋಶಿಯಲ್​​​​​ ಮೀಡಿಯಾದಲ್ಲಿ ಸದ್ದು ಮಾಡಿದ ಈ  ವಿಡಿಯೋ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರ ಮನಸ್ಸು ಗೆದ್ದಿದೆ. ಈ ವೀಡಿಯೊವನ್ನು @MrLaalpotato ಅವರು ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನವಜಾತ ಆನೆ ತನ್ನ ಮೊದಲ ಸ್ನಾನವನ್ನು ಆನಂದಿಸುತ್ತಿದೆ” ಎಂಬ ಶೀರ್ಷಿಕೆಯೊಂದನ್ನು ಈ ವಿಡಿಯೋಗೆ ಕೊಡಲಾಗಿದೆ.

ವೀಡಿಯೊದಲ್ಲಿ, ಮರಿ ಆನೆಯು ಸಂತೋಷದಿಂದ ಶಾಂತವಾಗಿ ನಿಂತು ತನ್ನ ಮೊದಲ ಸ್ನಾನವನ್ನು ಆನಂದಿಸುತ್ತಿರುವ ಹಾಗೂ ನೀರಿನಲ್ಲಿ ಆಟವಾಡುತ್ತಿರುವುದನ್ನು ಕಾಣಬಹುದು. ಮರಿ ಆನೆ ತನ್ನ ಮೊದಲ ಸ್ನಾನವನ್ನು ಆನಂದಿಸುತ್ತಿರುವ ಮುದ್ದಾದ ವೀಡಿಯೊಗೆ ಬಳಕೆದಾರರೂ ಖುಷಿ ಪಟ್ಟಿದ್ದಾರೆ. ಈ  ಪುಟ್ಟ ಆನೆ ನೀರಿನಲ್ಲಿ ಎಷ್ಟು ಶಾಂತವಾಗಿ ನಿಂತು, ಸಂತೋಷವಾಗಿ ಆಟವಾಡುವುದನ್ನು ಕಂಡ ಅನೇಕರು ಅಚ್ಚರಿಪಟ್ಟಿದ್ದಾರೆ. ಮರಿ ಆನೆಗಳು ಸಾಮಾನ್ಯವಾಗಿ ಇಂತಹ ತುಂಟಾಟಗಳನ್ನು ಮಾಡುತ್ತ ಇರುತ್ತದೆ. ಆದರೆ ಈ ಆನೆ ಮರಿ ಮೊದಲ ಬಾರಿ ನೀರನ್ನು ಕಂಡು ಸಂತೋಷದಿಂದ ಅದರಲ್ಲಿ ಆಟವಾಡಿದೆ.

ಇದನ್ನೂ ಓದಿ
ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿದ ಆನೆ
ತಾಯಿಯಿಂದ ಬೆರ್ಪಟ್ಟು ಕೇರಳದ ಶಾಲಾ ಆವರಣಕ್ಕೆ ಎಂಟ್ರಿ ಕೊಟ್ಟ ಮರಿಯಾನೆ
ಚೊಂಪುವಿಗೆ ಚೆಂಡಾಟ ಆಡೋದಂದ್ರೆ ಬಲು ಇಷ್ಟ ನೋಡಿ
ನಿದ್ದೆಯಲ್ಲಿ ಗೊರಕೆ ಹೊಡೆಯುತ್ತಿರುವ ಪುಟಾಣಿ ಆನೆ

ಇಲ್ಲಿದೆ ನೋಡಿ ವೈರಲ್​​ ವಿಡಿಯೋ:

ಇದನ್ನೂ ಓದಿ: Video: ನೋಡ ನೋಡುತ್ತಿದ್ದಂತೆ ನಡುರಸ್ತೆಯಲ್ಲೇ ಮಿನಿ ಟ್ರಕನ್ನು ಉರುಳಿಸಿಯೇ ಬಿಡ್ತು ದೈತ್ಯ ಆನೆ

ಈ ಮರಿ ಆನೆಯ ವಿಡಿಯೋ ಮುಗ್ಧ ಮತ್ತು ಸಂತೋಷದಾಯಕ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಮರಿ ಆನೆಯು ವರ್ಷಪೂರ್ತಿ ನಾನು ಮಾಡಿದ್ದಕ್ಕಿಂತ 5 ನಿಮಿಷಗಳಲ್ಲಿ ಈ ಆಟದಲ್ಲಿ ಪಡೆದುಕೊಂಡಿದೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಅದಕ್ಕೆ ಐಸ್ ಸುರಿದ ಹಾಗೆ ಕಾಣುತ್ತಿದೆ ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ದಾರೆ. ಪ್ರಕೃತಿಯಲ್ಲಿ ಮಕ್ಕಳ ಸಂತೋಷದ ಕ್ಷಣ ಎಂದು ವಿಶೇಷವಾಗಿ ಹೇಳಿದ್ದಾರೆ.  ಇತ್ತೀಚಿಗಷ್ಟೇ ಕೇರಳದ ಶಾಲಾ ಆವರಣದಲ್ಲಿ ಆನೆ ಮರಿ ಅಲೆದಾಡುತ್ತಿರುವ ವಿಡಿಯೋ ವೈರಲ್​​ ಆಗಿತ್ತು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:58 pm, Thu, 28 August 25