Hyderabad : ಫುಟ್ಬಾಲ್, ಕ್ರಿಕೆಟ್, ವಾಲಿಬಾಲ್ ಹೀಗೆ ಯಾವ ಕ್ರೀಡೆಯಾಗಲಿ, ನಾಟಕ, ಸಂಗೀತ, ನೃತ್ಯ ಹೀಗೆ ಯಾವುದೇ ಪ್ರದರ್ಶನ ಕಲೆಯಾಗಲಿ ಅಷ್ಟೇ ಏಕೆ ನಿತ್ಯವೂ ತಟ್ಟುವ ರೊಟ್ಟಿಯೇ ಇರಲಿ, ಅಭ್ಯಾಸವಿಲ್ಲದೇ ಯಾವುದೂ ಕರಗತವಾಗದು. ಅಭ್ಯಾಸ ಎನ್ನುವುದು ಆತ್ಮವಿಶ್ವಾಸವನ್ನು ಕೊಡುತ್ತದೆ ಅಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ವೃದ್ಧರೊಬ್ಬರು ಮನೆಯೊಳಗೆ ಲಗೇಜುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ಅರೆ! ಇವರು ಹೀಗೇಕೆ ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಏಳುತ್ತಿದೆಯೇ?
My 76 year old dad doing a trial walk at home before leaving for his trip to see if he can walk the Chennai railway station with my mom without having to hire a coolie #SeniorCitizenSpunk
Rockstar dad ? pic.twitter.com/DItaBgOdCE ಇದನ್ನೂ ಓದಿ— Manju Latha Kalanidhi (@mkalanidhi) May 22, 2023
ಹೈದರಾಬಾದಿನಲ್ಲಿ ಪತ್ರಕರ್ತೆಯಾಗಿರುವ ಮಂಜು ಲತಾ ಕಲಾನಿಧಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಇವರ ತಂದೆ ಪ್ರವಾಸಕ್ಕೆ ಹೋಗುವ ಮೊದಲು ಹೀಗೆ ಮನೆಯೊಳಗೆ ‘ಲಗೇಜು ತಾಲೀಮು’ ನಡೆಸಿದ ವಿಡಿಯೋ ಇದಾಗಿದೆ. ಅಂದರೆ, 76 ವರ್ಷದ ಅವರು ಅವರ ಹೆಂಡತಿ ಮತ್ತು ಲಗೇಜುಗಳೊಂದಿಗೆ ರೈಲುನಿಲ್ದಾಣದಲ್ಲಿ ಕೂಲಿಯ ಸಹಾಯವಿಲ್ಲದೆ ನಡೆಯಬಲ್ಲೆನೇ? ಎಂದು ಸ್ವಯಂಪರೀಕ್ಷೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : Viral Video: ದೇಶವಿಭಜನೆಯಲ್ಲಿ ಬೇರ್ಪಟ್ಟ ಒಡಹುಟ್ಟಿದವರು 75 ವರ್ಷಗಳ ನಂತರ ಪುನರ್ಮಿಲನಗೊಂಡಾಗ
ಇಂದು ಬೆರಳತುದಿಯಲ್ಲಿಯೇ ಇಷ್ಟೆಲ್ಲ ಸೌಲಭ್ಯಗಳು ಲಭ್ಯವಿದ್ದರೂ ಹಳೆಯ ತಲೆಮಾರಿನವರು ಆದಷ್ಟು ಸ್ವಾವಲಂಬಿತನವನ್ನು ಕಾಪಾಡಿಕೊಳ್ಳುವಲ್ಲಿ ಉತ್ಸುಕರಾಗಿರುತ್ತಾರೆ. ಇದು ಮೈಗೂ ಮನಸಿಗೂ ಹಿತಕರ ಎಂಬ ಗಟ್ಟಿ ನಿಲುವು ಅವರದು. ಹಾಗಾಗಿ ನಿತ್ಯದ ಚಟುವಟಿಕೆಗಳಿರಲಿ ಅಥವಾ ಇಂಥ ಅಪರೂಪದ ಚಟುವಟಿಕೆಗಳಿರಲಿ, ಅವಲಂಬನೆಯಿಂದ ತಪ್ಪಿಸಿಕೊಳ್ಳುವ ಆಲೋಚನೆಯಲ್ಲಿ ಅವರು ಸದಾ ಮುಳುಗಿರುತ್ತಾರೆ.
ಇದನ್ನೂ ಓದಿ : Viral Video: ಮುಂಬೈ ಲೋಕಲ್ ಟ್ರೇನಿನ ಈ ನಿತ್ಯಪ್ರಯಾಣಿಕನ ವಿಡಿಯೋ ವೈರಲ್
ಈ ವಿಡಿಯೋ ಅನ್ನು ಸುಮಾರು 6.7 ಲಕ್ಷ ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತಂದೆಗೆ ಸಲಾಮ್ ತಿಳಿಸಿ, ಅವರು ಯುವಕರಿಗಿಂತ ಯುವಕರಾಗಿ ಕಾಣುತ್ತಿದ್ದಾರೆ ಎಂದು ಒಬ್ಬರು ಹೇಳಿದ್ಧಾರೆ. 79 ವರ್ಷದ ನನ್ನ ತಂದೆಯೂ ಹೀಗೇ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅವರ ಮುಖದ ಮೇಲಿನ ಆತ್ಮವಿಶ್ವಾಸವನ್ನು ನೋಡಲು ಹೆಮ್ಮೆ ಎನ್ನಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ.
ಹೌದು ನಮ್ಮ ತಂದೆತಾಯಿಯ ತಲೆಮಾರಿನವರೆಲ್ಲರೂ ಸ್ವಸಹಾಯವನ್ನು ನೆಚ್ಚಿಕೊಂಡಿದ್ದವರು. ಅದಕ್ಕೇ ಅವರ ಆರೋಗ್ಯ, ಮನಸ್ಸು ಅಷ್ಟು ಗಟ್ಟಿಯಾಗಿರುವುದು ಎಂದು ಕೆಲವರು ಹೇಳಿದ್ಧಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:22 am, Wed, 24 May 23