Partition : 1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಭಾರತ ಮತ್ತು ಪಾಕಿಸ್ತಾನ ಎರಡು ದೇಶಗಳಾಗಿ ವಿಭಜನೆಗೊಂಡವು. ಬಂಗಾಳ ಮತ್ತು ಪಂಜಾಬ್ ಪ್ರಾಂತ್ಯಗಳೂ ವಿಭಜನೆಗೊಂಡು ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ ದೇಶ ಎಂಬ ಹೊಸ ದೇಶಗಳು ರೂಪುಗೊಂಡವು. ಈ ಸಂದರ್ಭದಲ್ಲಿ ಅನೇಕ ಕುಟುಂಬ ಸದಸ್ಯರು ಬೇರ್ಪಟ್ಟರು. ಇದೀಗ 75 ವರ್ಷಗಳ ನಂತರ ಕರ್ತಾರ್ಪುರದಲ್ಲಿ ಅಣ್ಣ ತಂಗಿಯ ಜೋಡಿ ಒಂದಾಗಿದೆ! ನೋಡಿ ಈ ಕೆಳಗಿನ ವಿಡಿಯೋ.
An other separated family meetup at kartarpur Corridor (a Corridor of Peace). Mr sheikh Abdul Aziz and his sister Mohinder kaur who got separated at the time of partition in 1947 met at Gurdwara Sri Darbar Sahib kartarpur.
Both families were very happy and praised the government pic.twitter.com/TACb7O7SjH ಇದನ್ನೂ ಓದಿ— PMU Kartarpur Official (@PmuKartarpur) May 20, 2023
ಪಿಎಂಯು ಕತಾರ್ಪುರ್ ತನ್ನ ಸಾಮಾಜಿಕ ಜಾಲತಾಣದ ಪುಟದಲ್ಲಿ ಇದನ್ನು ದಾಖಲಿಸಿದೆ. ಸ್ಥಳೀಯ ಆಡಳಿತ ವರ್ಗ ಮತ್ತು ಕುಟುಂಬಸ್ಥರು ಈ ಪುನರ್ಮಿಲನ ಸಭೆಯಲ್ಲಿ ಒಳಗೊಂಡಿದ್ದಾರೆ. ಭಾರತೀಯ ಪ್ರಜೆ-ಸೋದರಿ 81 ವರ್ಷದ ಮಹೇಂದ್ರ ಕೌರ್, ಪಾಕ್ ಆಕ್ರಮಿತ ಕಾಶ್ಮೀರದ ಪ್ರಜೆ-ಸೋದರ 78 ವರ್ಷದ ಶೇಖ್ ಅಬ್ದುಲ್ ಅಜೀಜ್ ಕರ್ತಾರಪುರದ ಕಾರಿಡಾರಿನಲ್ಲಿ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಪ್ಯಾರೀಸ್ ಟೂರ್ ವಿಥ್ ಅಜ್ಜಿ; ದಂತವೈದ್ಯರ ಈ ನಡೆಗೆ ಭಾವುಕರಾಗುತ್ತಿರುವ ನೆಟ್ಟಿಗರು
ದೇಶ ವಿಭಜನೆಯ ಸಂದರ್ಭದಲ್ಲಿ ಪಂಜಾಬ್ನ ಸರ್ದಾರ್ ಭಜನ್ ಸಿಂಗ್ ಕುಟುಂಬವು ಹರಿದು ಹಂಚಿಹೋಗಿತ್ತು. ಸಾಮಾಜಿಕ ಜಾಲತಾಣದ ಮೂಲಕವೇ ಈ ಸುದ್ದಿ ತಿಳಿದ ಕುಟುಂಬಸ್ಥರು ಒಡಹುಟ್ಟಿದವರನ್ನು ಒಂದಾಗಿಸಿದರು. ನಂತರ ಎರಡೂ ಕುಟುಂಬದವರು ಕರ್ತಾರಪುರದ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭೇಟಿ ಕೊಟ್ಟು ಒಟ್ಟಿಗೇ ಊಟ ಮಾಡಿದರು. ಪುನರ್ಮಿಲನದ ಈ ಸಂದರ್ಭದಲ್ಲಿ ಪರಸ್ಪರ ಉಡುಗೊರೆಗಳನ್ನು ಕೊಟ್ಟುಕೊಂಡರು. ನಂತರ ಕರ್ತಾರಪುರ ಆಡಳಿತ ಸಿಬ್ಬಂದಿಯು ಎಲ್ಲರಿಗೂ ಸಿಹಿ ಹಂಚಿತು.
ಇದನ್ನೂ ಓದಿ : Viral Video: ಈಕೆಯ ಆತ್ಮವಿಶ್ವಾಸವನ್ನು ಗೌರವಿಸಲೇಬೇಕು ಎನ್ನುತ್ತಿರುವ ನೆಟ್ಟಿಗರು
ಕರ್ತಾರ್ಪುರ ಕಾರಿಡಾರ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುರುದ್ವಾರ ದರ್ಬಾರವು ಸಾಹಿಬ್ ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ ಕೊನೆಯ ವಿಶ್ರಾಂತಿ ಸ್ಥಳವನ್ನು ಮತ್ತು ಭಾರತದ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಡೇರಾಬಾಬಾ ನಾನಕ್ ದೇವಾಲಯವನ್ನು ಸಂಧಿಸುತ್ತದೆ. 4 ಕಿಮೀ ಉದ್ದದ ಈ ಕಾರಿಡಾರ್ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ವೀಸಾಮುಕ್ತ ಪ್ರವೇಶವಾಗಿರುತ್ತದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ