Shocking News: ಯುವತಿಯಿಂದಲೇ ಸಮಾಧಿ ತೋಡಿಸಿ, ಆಕೆಯನ್ನು ಕೊಂದು ಹೂತು ಹಾಕಿದ ಕಿರಾತಕರು!

Viral News: ಅಲ್ಬಾಚ್ ಹತ್ಯೆಯ ಬಗ್ಗೆ ಪೊಲೀಸರು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದು, ಸಾಯಿಸುವ ಮೊದಲು ಆಕೆಯಿಂದಲೇ ಸಮಾಧಿಯನ್ನು ಅಗೆಯಿಸಲಾಯಿತು. ನಂತರ ಆಕೆಗೆ ಗುಂಡು ಹಾರಿಸಿ ಕೊಂದು, ಅದೇ ಗುಂಡಿಯಲ್ಲಿ ಸಮಾಧಿ ಮಾಡಲಾಯಿತು.

Shocking News: ಯುವತಿಯಿಂದಲೇ ಸಮಾಧಿ ತೋಡಿಸಿ, ಆಕೆಯನ್ನು ಕೊಂದು ಹೂತು ಹಾಕಿದ ಕಿರಾತಕರು!
ಪ್ರಾತಿನಿಧಿಕ ಚಿತ್ರ
Updated By: ಸುಷ್ಮಾ ಚಕ್ರೆ

Updated on: Dec 08, 2021 | 2:09 PM

ಯುವತಿಯೊಬ್ಬಳನ್ನು ಕೊಲೆ ಮಾಡಲು ಹೋಗಿದ್ದ ಆಗಂತಕರು ಆಕೆಯಿಂದಲೇ ಸಮಾಧಿ ತೋಡಿಸಿ, ನಂತರ ಆಕೆಗೆ ಶೂಟ್ ಮಾಡಿ ಅದೇ ಗುಂಡಿಯೊಳಗೆ ಹೆಣವನ್ನು ಹಾಕಿ ಸಮಾಧಿ ಮಾಡಿದ್ದಾರೆ. ಈ ವಿಚಿತ್ರ ಮತ್ತು ಆಘಾತಕಾರಿ ಘಟನೆ ಸಮುದ್ರತೀರದಲ್ಲಿ ನಡೆದಿದೆ. ಯುವತಿಯಿಂದಲೇ ಸಮಾಧಿಯನ್ನು ತೆಗೆಯಲು ಒತ್ತಾಯಿಸಿ, ನಂತರ ಆಕೆಗೆ ಗುಂಡಿಕ್ಕಿ ಕೊಂದು ಅದರಲ್ಲಿ ಹೂಳಲಾಯಿತು.

‘ದಿ ಸನ್ ಯುಕೆ’ ಪ್ರಕಾರ, ಈ ಘಟನೆ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾ ರಾಜ್ಯದಲ್ಲಿ ನಡೆದಿದೆ. ಮೃತ ಯುವತಿ ಅಮಂಡಾ ಅಲ್ಬಾಚ್ ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಗೆ ತೆರಳಿದ್ದರು. ಆಕೆಗೆ 21 ವರ್ಷವಾಗಿತ್ತು. ಅಲ್ಬಾಚ್ ಹತ್ಯೆಯ ಬಗ್ಗೆ ಪೊಲೀಸರು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದ್ದು, ಸಾಯಿಸುವ ಮೊದಲು ಆಕೆಯಿಂದಲೇ ತನ್ನ ಸಮಾಧಿಯನ್ನು ಅಗೆಯಲು ಒತ್ತಾಯಿಸಲಾಯಿತು. ನಂತರ ಆಕೆಗೆ ಗುಂಡು ಹಾರಿಸಿ ಕೊಂದು, ಅದೇ ಗುಂಡಿಯಲ್ಲಿ ಸಮಾಧಿ ಮಾಡಲಾಯಿತು ಎಂದಿದ್ದಾರೆ.

ಅಪರಾಧ ತನಿಖಾ ವಿಭಾಗದ ಪೊಲೀಸ್ ಮುಖ್ಯಸ್ಥ ಬ್ರೂನೋ ಫೆರ್ನಾಂಡಿಸ್ ಕೂಡ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಅಲ್ಬಾಚ್ ತನ್ನ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಕೆಲವು ಸ್ನೇಹಿತರೊಂದಿಗೆ ಸಾಂಟಾ ಕ್ಯಾಟರಿನಾಗೆ ಹೋಗಿದ್ದರು ಎಂದು ಹೇಳಿದ್ದಾರೆ. ಮಾದಕ ವಸ್ತು ದಂಧೆಯಲ್ಲಿ ಕೆಲವರು ಭಾಗಿಯಾಗಿದ್ದರು ಎನ್ನಲಾಗಿದೆ. ಈ ಸಮಯದಲ್ಲಿ, ಅಲ್ಬಾಚ್ ಅಲ್ಲಿದ್ದವರ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ತಾವು ಸಿಕ್ಕಿಬೀಳುತ್ತೇವೆ ಎಂಬ ಭಯದಲ್ಲಿ ಆ ಮಾದಕದ್ರವ್ಯ ಸೇವಿಸಿದ್ದ ವ್ಯಕ್ತಿಗಳು ಅಲ್ಬಾಚ್ ಅನ್ನು ಕೊಲ್ಲಲು ಪ್ಲಾನ್ ಮಾಡಿದರು.

ಅಲ್ಬಾಚ್ ಪಾರ್ಟಿಯಿಂದ ಮನೆಗೆ ಹಿಂತಿರುಗದಿದ್ದಾಗ ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ ಕುಟುಂಬ ಸದಸ್ಯರು ಆಕೆಗ ಮೊಬೈಲ್​ಗೆ ಫೋನ್ ಮಾಡಿದರೂ ಅವಳನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದರು. ಈ ಘಟನೆಯ ಮಧ್ಯೆ, ಪೊಲೀಸರು ಶಂಕಿತ ಡ್ರಗ್ ಡೀಲರ್​ನನ್ನು ಬಂಧಿಸಿದ್ದರು. ಆತನ ವಿಚಾರಣೆಯ ಸಮಯದಲ್ಲಿ ತಾವೆಲ್ಲರೂ ಸೇರಿ ಅಲ್ಬಾಚ್​ಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದ.

ಇದನ್ನೂ ಓದಿ: Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್

Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ಅಪ್ಪ!

Published On - 2:08 pm, Wed, 8 December 21