ಸಂಬಳ ಜಾಸ್ತಿ ಮಾಡುತ್ತೇನೆ ಎಂದು ಆಫರ್ ಇಟ್ಟರೆ ಯಾರಾದರೂ ಬೇಡ ಎನ್ನುತ್ತಾರಾ? ಸಂಬಳಕ್ಕಾಗಿಯೇ ಕೆಲಸ ಮಾಡುವ ಈಗಿನ ಕಾಲದಲ್ಲಿ ನಿಮ್ಮ ಖಾತೆಗೇನಾದರೂ ನಿಮ್ಮ ಸಂಬಳಕ್ಕಿಂತ ಹೆಚ್ಚು ಪಟ್ಟು ಹಣ ಬಂದರೆ ನೀವು ಏನು ಮಾಡುತ್ತೀರಾ? ಸಿಕ್ಕಿದ್ದೇ ಛಾನ್ಸ್ ಅಂತ ಆ ಹಣವನ್ನು ಡ್ರಾ ಮಾಡಿಕೊಂಡು ಸುಮ್ಮನಿರುತ್ತೀರಾ? ಅಥವಾ ಇದ್ಯಾವ ಹಣವೆಂದು ಹೆಚ್ಆರ್ (HR) ಬಳಿಯೋ, ನಿಮ್ಮ ಮ್ಯಾನೇಜರ್ (Manager) ಬಳಿಯೋ ಪ್ರಶ್ನೆ ಮಾಡುತ್ತೀರಾ? ಇಲ್ಲೊಬ್ಬ ಉದ್ಯೋಗಿಗೆ ತನ್ನ ಸಂಬಳಕ್ಕಿಂತ ಬರೋಬ್ಬರಿ 286 ಪಟ್ಟು ಹೆಚ್ಚು ಸಂಬಳ ಕ್ರೆಡಿಟ್ ಆಗಿದೆ. ತಿಂಗಳಿಗೆ 43,000 ರೂ. ಸಂಬಳ ಪಡೆಯುವ ಉದ್ಯೋಗಿ ಆ ತಿಂಗಳು ತನ್ನ ಖಾತೆಗೆ 1.43 ಕೋಟಿ ರೂ. ಹಣ ಬಂದಿದ್ದನ್ನು ನೋಡಿ ಕಂಗಾಲಾಗಿದ್ದಾನೆ.
ಸೊನ್ನೆಗಳನ್ನೆಲ್ಲ ಮತ್ತೆ ಮತ್ತೆ ಎಣಿಸಿ ನೋಡಿದಾಗ ತನ್ನ ಅಕೌಂಟ್ಗೆ 1.43 ಕೋಟಿ ರೂ. ಹಣ ಬಂದಿರುವುದು ಆತನಿಗೆ ಖಚಿತವಾಗಿದೆ. ಆಗ ಮುಂದೇನಾಗುವುದೋ ಎಂಬ ಭಯದಲ್ಲಿ ಆತ ಈ ಬಗ್ಗೆ ಯಾರಿಗೂ ಹೇಳದೆ ಸುಮ್ಮನಾಗಿದ್ದಾನೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಜೀವನಪೂರ್ತಿ ದುಡಿದರೂ ಸಂಪಾದನೆ ಮಾಡಲು ಸಾಧ್ಯವಿಲ್ಲ ಎಂದು ಆತ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಮೇ ತಿಂಗಳಲ್ಲಿ ಆಕಸ್ಮಿಕವಾಗಿ ತನ್ನ ಸಂಬಳದ 286 ಪಟ್ಟು ಹೆಚ್ಚು ಸಂಬಳ ಪಡೆದ ವ್ಯಕ್ತಿ ಆ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಆ ವೇಳೆ ಕಂಪನಿಯ ಖಾತೆಯಿಂದ 1.43 ಕೋಟಿ ರೂ. ಆತನ ಖಾತೆಗೆ ವರ್ಗಾವಣೆಯಾಗಿದೆ ಎಂಬ ವಿಚಾರ ಹೆಚ್ಆರ್ಗೆ ಗೊತ್ತಾಗಿದೆ.
ಇದನ್ನೂ ಓದಿ: Shocking News: ಈ ಕಂಪನಿಯಲ್ಲಿ ಹಸ್ತಮೈಥುನಕ್ಕೂ ಸಿಗುತ್ತೆ ಅರ್ಧ ಗಂಟೆ ಬ್ರೇಕ್; ಸೆಕ್ಸ್ ಟಾಯ್ಸ್ ಕೂಡ ಕೊಡ್ತಾರೆ!
ಅಷ್ಟರಲ್ಲಾಗಲೇ ರಾಜೀನಾಮೆ ನೀಡಿದ್ದ ಆ ಉದ್ಯೋಗಿ ತನ್ನ ಖಾತೆಗೆ ಬಂದ ಹೆಚ್ಚುವರಿ ಹಣವನ್ನು ಹಿಂದಿರುಗಿಸುವುದಾಗಿ ಬಾಸ್ಗೆ ಭರವಸೆ ನೀಡಿ ನಾಪತ್ತೆಯಾಗಿದ್ದಾರೆ. ಈ ಘಟನೆ ಚಿಲಿಯಲ್ಲಿ ನಡೆದಿದೆ. ಚಿಲಿಯಲ್ಲಿ ಕೋಲ್ಡ್ ಕಟ್‌ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಬ್ಬರಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್)ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗೆ 43,000 ರೂ. ಸಂಬಳದ ಬದಲು 1.43 ಕೋಟಿ ರೂ. ಕ್ರೆಡಿಟ್ ಆಗಿದೆ.
ಕಂಪನಿಯ ಆಡಳಿತ ಮಂಡಳಿಯು ರಾಜೀನಾಮೆ ನೀಡಿದ ಆ ಉದ್ಯೋಗಿಗೆ ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಸೂಚಿಸಿತ್ತು. ಬ್ಯಾಂಕ್ಗೆ ಹೋಗಿ ಹೆಚ್ಚುವರಿಯಾಗಿ ಬಂದ ಹಣವನ್ನು ಹಿಂತಿರುಗಿಸುವುದಾಗಿ ಹೇಳಿ ಹೋದ ಆ ಉದ್ಯೋಗಿ ನಾಪತ್ತೆಯಾಗಿದ್ದಾನೆ. ಜೂನ್ 2ರಂದು ರಾಜೀನಾಮೆ ನೀಡಿ ನಾಪತ್ತೆಯಾಗಿರುವ ಆ ಉದ್ಯೋಗಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಇದನ್ನೂ ಓದಿ: Shocking News: ಹೆರಿಗೆ ವೇಳೆ ಶಿಶುವಿನ ತಲೆ ಕತ್ತರಿಸಿ ಮಹಿಳೆಯ ಗರ್ಭದಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ!
ಕಂಪನಿಯು ಆ ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ. ಉದ್ಯೋಗಿಗೆ ಅವರ ಮಾಸಿಕ ವೇತನಕ್ಕಿಂತ ಸರಿಸುಮಾರು 286 ಪಟ್ಟು ಹೆಚ್ಚು ಸಂಬಳ ವರ್ಗಾಯಿಸಿದ ಕಂಪನಿಯ ಅವಿವೇಕತನಕ್ಕೆ ನೆಟ್ಟಿಗರು ಲೇವಡಿ ಮಾಡಿದ್ದಾರೆ. ಈ ಸುದ್ದಿ ಈಗ ಭಾರೀ ವೈರಲ್ ಆಗಿದೆ.
Published On - 3:09 pm, Wed, 29 June 22