Shocking News: ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

| Updated By: ಸುಷ್ಮಾ ಚಕ್ರೆ

Updated on: Dec 07, 2021 | 3:25 PM

Viral Video: ಮನೆಗೆ ಹೊಗೆ ಹಾಕಿದರೆ ಹಾವುಗಳು ಓಡಿಹೋಗುತ್ತವೆ ಎಂದು ಯಾರೋ ಹೇಳಿದ್ದರಿಂದ ಆತ ತನ್ನ ಬಂಗಲೆಯೊಳಗೆ ಬೆಂಕಿ ಹಾಕಿ, ಹಾವುಗಳನ್ನು ಓಡಿಸಲು ನೋಡಿದ್ದ. ಆದರೆ, ಆ ಬೆಂಕಿಯ ಕೆನ್ನಾಲಿಗೆಗೆ ಆತನ ಬಂಗಲೆಯೇ ಸುಟ್ಟು ಕರಕಲಾಗಿದೆ.

Shocking News: ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!
ಬೆಂಕಿ ಹೊತ್ತಿಕೊಂಡ ಬಂಗಲೆ
Follow us on

ಮೇರಿಲ್ಯಾಂಡ್: ಮನೆಯೊಳಗೆ ಸೇರಿಕೊಂಡಿದ್ದ ಹಾವುಗಳನ್ನು ಓಡಿಸಲು ಪ್ಲಾನ್ ಮಾಡಿದ ವ್ಯಕ್ತಿಯೊಬ್ಬ 13.57 ಕೋಟಿ ರೂ. ಮೌಲ್ಯದ ಬಂಗಲೆಯನ್ನೇ ಕಳೆದುಕೊಂಡಿದ್ದಾನೆ. ಬಂಗಲೆಯೊಳಗೆ ಬರುತ್ತಿದ್ದ ಹಾವುಗಳನ್ನು ಓಡಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ತನ್ನ ಮನೆಯನ್ನೇ ಸುಟ್ಟು ಹಾಕಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ನವೆಂಬರ್ 23ರಂದು ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ವಾಸಿಸುವ ಮಾಲೀಕರೊಬ್ಬರು ತಮ್ಮ 10,000 ಚದರ ಅಡಿಯ ಮನೆಯಲ್ಲಿ ಹಾವಿನ ಹಾವಳಿಯಿಂದ ಆತ ಬೇಸತ್ತಿದ್ದ. ಮನೆಗೆ ಹೊಗೆ ಹಾಕಿದರೆ ಹಾವುಗಳು ಓಡಿಹೋಗುತ್ತವೆ ಎಂದು ಯಾರೋ ಹೇಳಿದ್ದರಿಂದ ಆತ ತನ್ನ ಬಂಗಲೆಯೊಳಗೆ ಬೆಂಕಿ ಹಾಕಿ, ಹಾವುಗಳನ್ನು ಓಡಿಸಲು ನೋಡಿದ್ದ. ಆದರೆ, ಆ ಬೆಂಕಿಯ ಕೆನ್ನಾಲಿಗೆಗೆ ಆತನ ಬಂಗಲೆಯೇ ಸುಟ್ಟು ಕರಕಲಾಗಿದೆ.

ಮನೆಯಿಂದ ಹಾವುಗಳನ್ನು ಓಡಿಸಲು, ಮನೆಯಲ್ಲಿ ಹೊಗೆಯನ್ನು ಸೃಷ್ಟಿಸಲು ಕಲ್ಲಿದ್ದಲನ್ನು ಬಳಸಲಾಗಿತ್ತು. ಆದರೆ, ಕಲ್ಲಿದ್ದಲನ್ನು ತಮ್ಮ ಮನೆಯಲ್ಲಿದ್ದ ದಹನಕಾರಿ ವಸ್ತುಗಳ ಹತ್ತಿರ ಇರಿಸಿದ್ದರಿಂದ ಇಡೀ ಮನೆಗೆ ಬೆಂಕಿ ಹೊತ್ತಿಕೊಂಡಿತು. ಇದರಿಂದ 13.57 ಕೋಟಿ ರೂ. ಮೌಲ್ಯದ ಬಂಗಲೆ ಸುಟ್ಟು ಹೋಗಿದೆ.

ಮಾಂಟ್ಗೊಮೆರಿ ಕೌಂಟಿ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇವೆಯ ಮುಖ್ಯ ವಕ್ತಾರ ಪೀಟ್ ಪಿರಿಂಗರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹೊಗೆ ಎಬ್ಬಿಸಲು ಮನೆಯೊಳಗೆ ಕಲ್ಲಿದ್ದಲು ಹಾಕಿದ್ದರಿಂದ ಅಕ್ಕಪಕ್ಕದ ಪರದೆಗಳಿಗೆ ಬೆಂಕಿ ಹೊತ್ತಿಕೊಂಡು ಬಹು-ಅಂತಸ್ತಿನ ಮನೆಗೆ ಬಹಳ ಬೇಗ ಬೆಂಕಿ ಹೊತ್ತಿಕೊಂಡಿತು. ನೆಲಮಾಳಿಗೆಯಿಂದ ಇಡೀ ಮನೆಗೆ ಬೆಂಕಿ ಹರಡಿತು ಎಂದು ಹೇಳಿದ್ದಾರೆ.

ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಕಂಡ ನೆರೆಹೊರೆಯವರು ತಕ್ಷಣ ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಸುಮಾರು 75 ಅಗ್ನಿಶಾಮಕ ಸಿಬ್ಬಂದಿ ಇಡೀ ರಾತ್ರಿ ಬೆಂಕಿ ನಂದಿಸಲು ಶ್ರಮಿಸಿದರು. ಅದೃಷ್ಟವಶಾತ್, ಬೆಂಕಿ ಹೊತ್ತಿಕೊಂಡಾಗ ಮನೆಯಿಂದ ಎಲ್ಲರೂ ಹೊರಗೆ ಓಡಿಬಂದಿದ್ದರಿಂದ ಪ್ರಾಣಾಪಾಯವಾಗಿಲ್ಲ.

ಇದನ್ನೂ ಓದಿ: Viral Video: ಮದುವೆ ಮಂಟಪಕ್ಕೆ ನುಗ್ಗಿ ಪ್ರೇಯಸಿಯ ಹಣೆಗೆ ಸಿಂಧೂರವಿಟ್ಟ ಯುವಕ; ತಾಳಿ ಕಟ್ಟಲು ರೆಡಿಯಾಗಿದ್ದ ವರ ಶಾಕ್!

Shocking Video: ಪಟಾಕಿಗೆ ಬೆಂಕಿ ಹೊತ್ತಿಸಿ ಪೆಟ್ರೋಲ್ ಬಂಕ್​ ಮೇಲೆ ಎಸೆದ ಯುವಕರು; ಆಮೇಲೇನಾಯ್ತು?

Published On - 3:23 pm, Tue, 7 December 21