ಪ್ರೀತಿ ಕುರುಡು ಅಂತಾರೆ, ಅದು ಖಂಡಿತ ಸುಳ್ಳಲ್ಲ. ಕೆಲವೊಂದು ಲವ್ ಸ್ಟೋರಿಗಳನ್ನು ಕೇಳಿದಾಗ ಈ ಮಾತು ನಿಜ ಎನಿಸುತ್ತದೆ. ನಾಯಿ, ಬೆಕ್ಕುಗಳು ಮಾತ್ರವಲ್ಲದೆ ನಾನಾ ಪ್ರಾಣಿಗಳ ಬಗ್ಗೆ ಅತಿಯಾದ ಪ್ರೀತಿಯನ್ನು ಇಟ್ಟುಕೊಂಡಿರುತ್ತಾರೆ. ಆ ಪ್ರಾಣಿಗಳನ್ನು ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಆದರೆ, ಬೆಲ್ಜಿಯಂನ ಪ್ರಾಣಿ ಸಂಗ್ರಹಾಲಯದಲ್ಲಿರುವ ಚಿಂಪಾಂಜಿಯೊಂದರ ಲವ್ ಸ್ಟೋರಿ ಬಹಳ ವಿಚಿತ್ರವಾಗಿದೆ. ಈ ಲವ್ ಸ್ಟೋರಿ ಕೇಳಿದರೆ ನೀವು ಅಚ್ಚರಿ ಪಡುವುದು ಗ್ಯಾರಂಟಿ.
ಬೆಲ್ಜಿಯಂನ ಈ ಪ್ರಾಣಿ ಸಂಗ್ರಹಾಲಯಕ್ಕೆ ಮಹಿಳೆಯೊಬ್ಬರಿಗೆ ನಿಷೇಧ ಹೇರಲಾಗಿದೆ. ಈ ಝೂನಲ್ಲಿರುವ ಚಿಂಪಾಂಜಿಯೊಂದಿಗೆ 4 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದ ಕಾರಣಕ್ಕೆ ಆ ಮಹಿಳೆ ನಿರಂತರವಾಗಿ ಝೂಗೆ ಬರುತ್ತಿದ್ದರು. ಈ ವಿಷಯ ಗೊತ್ತಾದ ಕೂಡಲೇವ ಆಕೆಗೆ ಆ ಝೂಗೆ ನಿಷೇಧ ಹೇರಲಾಗಿದೆ. ಮೃಗಾಲಯದಲ್ಲಿರುವ ಚಿಟಾ (Chita) ಎಂಬ ಚಿಂಪಾಂಜಿಯನ್ನು ನಾನು ಪ್ರೀತಿ ಮಾಡುತ್ತಿದ್ದೇನೆ. ಆ ಚಿಂಪಾಂಜಿಯನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಆ ಮಹಿಳೆ ಹೇಳಿದ್ದಾರೆ.
ಆ್ಯಡಿ ತಿಮ್ಮೆರ್ಮನ್ಸ್ ಎಂಬ 38 ವರ್ಷದ ಮಹಿಳೆ ಝೂನಲ್ಲಿದ್ದ ಚೀತಾ ಎಂಬ ಗಂಡು ಚಿಂಪಾಂಜಿಯನ್ನು ಪ್ರೀತಿ ಮಾಡುತ್ತಿದ್ದುದಾಗಿ ಹೇಳಿಕೊಂಡಿದ್ದಾಳೆ. ನನ್ನ ಮತ್ತು ಚಿಂಪಾಂಜಿ ನಡುವೆ ಆಪ್ತ ಸಂಬಂಧ ಏರ್ಪಟ್ಟಿದೆ. ನಾವಿಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರಲಾರದಷ್ಟು ಆಪ್ತರಾಗಿದ್ದೇವೆ. ನಾನು ಮತ್ತು ಚಿಂಪಾಂಜಿ ಇಬ್ಬರೂ ಆಗಾಗ ಚುಂಬಿಸಿಕೊಳ್ಳುತ್ತಿದ್ದೆವು ಎಂದು ಕೂಡ ಆಕೆ ಹೇಳಿದ್ದಾಳೆ.
ಮಹಿಳೆಯೊಂದಿಗೆ ಲವ್ ಸಂಬಂಧ ಹೊಂದಿದ್ದ ಚಿಂಪಾಂಜಿ ಬೇರೆ ಚಿಂಪಾಂಜಿಗಳೊಂದಿಗೆ ಬೆರೆಯದಿದ್ದರೆ ಕಷ್ಟ ಎಂಬ ಕಾರಣಕ್ಕೆ ಮೃಗಾಲಯ ನಿಷೇಧ ಹೇರಿದೆ. ಇದಕ್ಕೆ ಆ ಮಹಿಳೆ ಕಣ್ಣೀರು ಹಾಕಿದ್ದು, ನನ್ನಂತೆ ಆ ಪ್ರಾಣಿ ಕೂಡ ನನ್ನನ್ನು ಪ್ರೀತಿ ಮಾಡುತ್ತಿದೆ. ಇದಕ್ಕೆ ಮೃಗಾಲಯದ ಸಿಬ್ಬಂದಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಮೃಗಾಲಯದ ಅಡಳಿತ ಮಂಡಳಿಯವರಿಂದ ಚಿಂಪಾಂಜಿ ಮತ್ತು ಮಹಿಳೆಯ ಲವ್ ಸ್ಟೋರಿ ಬ್ರೇಕಪ್ ಆಗಿದೆ.
ಇದನ್ನೂ ಓದಿ: Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!
Shocking Video: ಪೊಲೀಸ್ ಎದುರೇ ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ; ವಿಡಿಯೋ ವೈರಲ್
(Shocking News: Woman Banned From Visiting Zoo After She Said Having An Affair with Chimpanzee)