ನೆಗಡಿ (Cold), ತಲೆನೋವು (Headache) , ಮೈಕೈ ನೋವು, ಕೆಮ್ಮು ಬಾರದ ಮನುಷ್ಯರು ಯಾರಾದರೂ ಇದ್ದಾರಾ? ಇವೆಲ್ಲವೂ ಬಹಳ ಸಾಮಾನ್ಯವಾದ ರೋಗಗಳು. ಇದಕ್ಕೆಲ್ಲ ಯಾರೂ ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಆದರೆ, 43 ವರ್ಷದ ಮಹಿಳೆಯೊಬ್ಬರು ನೆಗಡಿ ಬಂದು ಬೆಳಗ್ಗೆ ಏಳುವಷ್ಟರಲ್ಲಿ ಕಳೆದ 20 ವರ್ಷಗಳ ಎಲ್ಲ ಘಟನೆಗಳನ್ನೂ ಮರೆತಿದ್ದಾರೆ! ಶೀತದಿಂದ ಶುರುವಾದ ಸಮಸ್ಯೆಯೊಂದು ಮಹಿಳೆಯನ್ನು ಮಾರಣಾಂತಿಕ ರೋಗದತ್ತ ತಳ್ಳಿದೆ. ನೆಗಡಿಯಿಂದ ಹೀಗೆಲ್ಲ ಆಗುತ್ತದಾ? ಎಂದು ನಿಮಗೆ ಆಶ್ಚರ್ಯವಾಗಬಹುದು. ಕ್ಲೇರ್ ಮಫೆಟ್-ರೀಸ್ ಎಂಬ 43 ವರ್ಷದ ಮಹಿಳೆಗೆ 2021ರಲ್ಲಿ ಒಂದು ರಾತ್ರಿ ಆಕೆಯ ಮಗನಿಂದ ಶೀತ ಹರಡಿತ್ತು. ನೆಗಡಿಯಿಂದ ತಲೆನೋವು ಕೂಡ ಶುರುವಾಗಿದ್ದರಿಂದ ಬೇಗ ಮಲಗಿದ ಆಕೆ ಮರುದಿನ ಬೆಳಗ್ಗೆ ಎದ್ದಾಗ ಆಕೆಗೆ ಕಳೆದ 20 ವರ್ಷಗಳಿಂದ ಈಚೆಗೆ ನಡೆದಿದ್ದು ಏನೂ ನೆನಪಿರಲಿಲ್ಲ.
ಇಷ್ಟಕ್ಕೇ ಆಕೆಯ ಆರೋಗ್ಯದ ಸಮಸ್ಯೆ ನಿಲ್ಲಲಿಲ್ಲ. ಕೇವಲ ನೆಗಡಿಯಿಂದ 2 ದಶಕಗಳ ಎಲ್ಲವನ್ನೂ ಮರೆತ ಆಕೆ ಬಳಿಕ 16 ದಿನಗಳವರೆಗೆ ಕೋಮಾಗೆ ಹೋದಳು. ತನ್ನ ಇಬ್ಬರು ಮಕ್ಕಳು ಮತ್ತು ಗಂಡ ಸ್ಕಾಟ್ ಜೊತೆಗೆ ಇಂಗ್ಲೆಂಡ್ನಲ್ಲಿ ವಾಸವಾಗಿದ್ದ ಕ್ಲೇರ್ ಈ ರೀತಿಯ ಅನಾರೋಗ್ಯಕ್ಕೀಡಾದ ಬಗ್ಗೆ ಅವರ ಪತಿ ಸ್ಕಾಟ್ ಮಾಹಿತಿ ನೀಡಿದ್ದಾರೆ. ನನ್ನ ಹೆಂಡತಿ ಎರಡು ವಾರಗಳ ಕಾಲ ಶೀತದಿಂದ ಬಳಲುತ್ತಿದ್ದಳು. ನಮ್ಮ ಮಗ ಮ್ಯಾಕ್ಸ್ಗೆ ಮೊದಲು ನೆಗಡಿ ಶುರುವಾಗಿತ್ತು. ಅವನಿಂದ ನನ್ನ ಹೆಂಡತಿಗೂ ನೆಗಡಿ ಹರಡಿತು. ಅದಾದ ನಂತರ ಆಕೆಯ ಸ್ಥಿತಿಯು ಬಹಳ ವೇಗವಾಗಿ ಕ್ಷೀಣಿಸಲು ಪ್ರಾರಂಭಿಸಿತು. ನೆಗಡಿಯಿಂದ ರಾತ್ರಿ ಮಲಗಿದ ಆಕೆ ಬೆಳಗಾಗುವಷ್ಟರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವಳನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. 1 ವಾರ ಅಲ್ಲಿದ್ದ ಆಕೆಯನ್ನು ನಂತರ ರಾಯಲ್ ಲಂಡನ್ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಆಕೆಯ ಮೆದುಳಿಗೆ ರಕ್ತಸ್ರಾವವಾಗಿರಬಹುದು ಎಂದು ವೈದ್ಯರು ಅನುಮಾನಪಟ್ಟರು. ಆದರೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ ಆಕೆ ಎನ್ಸೆಫಾಲಿಟಿಸ್ನಿಂದ ಬಳಲುತ್ತಿರುವುದು ಗೊತ್ತಾಯಿತು ಎಂದಿದ್ದಾರೆ.
Tomorrow marks World Encephalitis Day, so catch me and @Chipfatinasock on @PackedLunchC4 to raise awareness of encephalitis and how serious it is#worldencephalitisday #red4wed #theencephalitissociety #encephalitis #abi #acquiredbraininjury #stephspackedlunch #channel4 pic.twitter.com/33VXkBiF5y
— Claire Muffett-Reece (@MrsMuffettReece) February 21, 2022
ಆಕೆ ರಾಯಲ್ ಲಂಡನ್ ಆಸ್ಪತ್ರೆಗೆ ದಾಖಲಾದ ಎರಡು ವಾರಗಳ ನಂತರ ಕ್ಲೇರ್ 20 ವರ್ಷಗಳ ಹಿಂದಿನ ಎಲ್ಲ ನೆನಪನ್ನು ಕಳೆದುಕೊಂಡಿದ್ದಾಳೆ ಎಂದು ಖಚಿತವಾಯಿತು. 43 ವರ್ಷ ವಯಸ್ಸಿನ ಕ್ಲೇರ್ ತನ್ನ ಕುಟುಂಬದ ಸದಸ್ಯರ ಮುಖಗಳನ್ನು ನೆನಪಿಟ್ಟುಕೊಂಡಿದ್ದಾರೆ. ಆದರೆ ಮದುವೆ, ಗರ್ಭಧಾರಣೆ, ಹೆರಿಗೆ ಮತ್ತು ರಜಾದಿನಗಳಂತಹ ಪ್ರಮುಖ ಜೀವನದ ಘಟನೆಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದರು.
“I woke up and had forgotten the past 20 years – I couldn’t remember my kids’ birthdays”
Great article from Claire – a member of @encephalitis – who shares her story in @TheSun
Read now ? https://t.co/DnHrINxWMa pic.twitter.com/OUlZ5veovX
— Encephalitis Society (@encephalitis) January 24, 2022
ಕ್ಲೇರ್ ಇದೀಗ ಸುದೀರ್ಘ ವಿರಾಮದ ನಂತರ ಮತ್ತೆ ಪತ್ರಕರ್ತೆಯಾಗಿ ಕೆಲಸ ಆರಂಭಿಸಿದ್ದಾರೆ. ಮರೆತು ಹೋದ ಘಟನೆಗಳ ಬಗ್ಗೆ ಆಕೆ ತಲೆ ಕೆಡಿಸಿಕೊಂಡಿಲ್ಲ.
ಇದನ್ನೂ ಓದಿ: Headache: ಆಗಾಗ ತಲೆನೋವು ಬರುತ್ತಾ? ತಲೆನೋವಿನಿಂದ ಸುಲಭವಾಗಿ ಮುಕ್ತಿ ಹೊಂದಲು ಹೀಗೆ ಮಾಡಿ
Headache Home Remedies: ತಲೆನೋವಿನಿಂದ ಪದೇ ಪದೇ ಸಮಸ್ಯೆ ಎದುರಾಗುತ್ತಿದೆಯೇ? ಈ ಮನೆಮದ್ದುಗಳನ್ನು ಬಳಸಿ
Published On - 4:56 pm, Thu, 24 February 22