ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ತಮಾಷೆಯ ವಿಡಿಯೋಗಳು ಜತೆಗೆ ಕೆಲವು ಭಯಾನಕ ವಿಡಿಯೋಗಳು ಹರಿದಾಡುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ಮಹಿಳೆ ಮತ್ತು ಮಗು ಒಟ್ಟಿಗೆ ಕುಳಿತುಕೊಂಡಿರುವಾಗ ಹಿಂದಿದ್ದ ಇಟ್ಟಿಗೆಯ ಗೋಡೆ ಕೆಳಗೆ ಬೀಳುತ್ತಿದೆ. ಮಗುವನ್ನು ರಕ್ಷಿಸಲು ಮಹಿಳೆ ಓಡಿ ಹೋಗುತ್ತಿದ್ದಾಳೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ.
ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಮಗು ಮತ್ತು ಮಹಿಳೆ ಒಟ್ಟಿಗೆ ಕುಳಿತುಕೊಂಡಿದ್ದಾರೆ. ಏತನ್ಮಧ್ಯೆ ಇದ್ದಕ್ಕಿದ್ದಂತೆ ಗೋಡೆ ಬೀಳುತ್ತಿರುವುದು ಅರಿವಿಗೆ ಬಂದಿದೆ. ತಕ್ಷಣ ಮಗುವನ್ನು ರಕ್ಷಿಸಲು ತಾಯಿ ಮುಂದಾಗಿದ್ದಾಳೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
The world needs mothers pic.twitter.com/g1tWtL9hmr
— Susanta Nanda IFS (@susantananda3) September 21, 2021
ಪಕ್ಕದಲ್ಲಿದ್ದ ವ್ಯಕ್ತಿಯೋರ್ವ ಓಡಿ ಬಂದಿರುವುದನ್ನು ನೋಡಬಹುದು. ಇಟ್ಟಿಗೆ ಮೈಮೇಲೆ ಬಿದ್ದ ಕಾರಣ ಮಹಿಳೆಯೂ ಕೆಳಗೆ ಬಿದ್ದಿದ್ದಳು. ಮಹಿಳೆ ಎದ್ದು ಮಗುವನ್ನು ಎತ್ತಿಕೊಂಡು ಬರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಅದೃಷ್ವವಶಾತ್ ಮಗುವಿಗೆ ಏನೂ ಆಗಿಲ್ಲ, ಮಹಿಳೆ ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಂಡಳು ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಸೀರೆಯುಟ್ಟ ಮಹಿಳೆಗೆ ದೆಹಲಿಯ ರೆಸ್ಟೋರೆಂಟ್ನಲ್ಲಿ ನೋ ಎಂಟ್ರಿ; ವೈರಲ್ ವಿಡಿಯೋಗೆ ಭಾರೀ ವಿರೋಧ
Viral Video: ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ; ಹೃದಯಸ್ಪರ್ಶಿ ವಿಡಿಯೋವಿದು
(Shocking Video A woman holding a wall against a baby Child escape from danger)