Shocking News: ರಸ್ತೆಯಲ್ಲೇ ಬೆತ್ತಲೆಯಾಗಿ ಜಗಳವಾಡಿದ ದಂಪತಿ; ವಿಡಿಯೋ​ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

|

Updated on: Jul 29, 2024 | 4:10 PM

ನಾಗ್ಪುರದಲ್ಲಿ ಬೆತ್ತಲೆ ಜೋಡಿಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗಂಡು- ಹೆಣ್ಣು ಇಬ್ಬರೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Shocking News: ರಸ್ತೆಯಲ್ಲೇ ಬೆತ್ತಲೆಯಾಗಿ ಜಗಳವಾಡಿದ ದಂಪತಿ; ವಿಡಿಯೋ​ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದ ಜೋಡಿ
Follow us on

ನಾಗ್ಪುರ: ನಾಗ್ಪುರದ ಲಕ್ಷ್ಮೀನಗರ ಪ್ರದೇಶದ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತಿರುವ ದಂಪತಿಗಳ ವಿಡಿಯೋ ವೈರಲ್ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜನನಿಬಿಡ ಪ್ರದೇಶವಾದ ಲಕ್ಷ್ಮೀನಗರ ಚೌಕದ ಬಳಿ ಈ ಘಟನೆ ನಡೆದಿದ್ದು, ಬೈಕ್​ನಲ್ಲಿ ಬಂದ ಸ್ಥಳೀಯ ಯುವಕರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಶನಿವಾರ ರಾತ್ರಿ 2 ಗಂಟೆಯ ಸುಮಾರಿಗೆ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಸಂಪೂರ್ಣ ಬೆತ್ತಲೆಯಾಗಿ ಜಗಳವಾಡುತ್ತಿರುವುದನ್ನು ತೋರಿಸುತ್ತದೆ. ನಂತರ ಆ ವ್ಯಕ್ತಿ ಪಾದಚಾರಿ ಮಾರ್ಗದ ಬಳಿ ಇರುವ ಪಾಳುಬಿದ್ದ ಮನೆಯ ಕಡೆಗೆ ಹೋಗುತ್ತಾನೆ. ಅದೇ ವೇಳೆ ಇನ್ನೋರ್ವ ಯುವತಿ ಕೂಡ ನಗ್ನಳಾಗಿ ನಡೆಯುತ್ತಿರುವುದು ರೆಕಾರ್ಡ್ ಆಗಿದೆ. ಆ ಸಮಯದಲ್ಲಿ, ಬೀದಿಗಳಲ್ಲಿ ಹೆಚ್ಚಿನ ಜನಸಂಚಾರವಿರಲಿಲ್ಲ. ಇಬ್ಬರು ಬೈಕರ್​ಗಳು ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ಈ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರದೇಶದಲ್ಲಿ ಗಣ್ಯ ವ್ಯಕ್ತಿಗಳೇ ಹೆಚ್ಚಾಗಿ ವಾಸವಾಗಿದ್ದಾರೆ. ಈ ಜೋಡಿಯ ವರ್ತನೆಗೆ ಹಲವು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Shocking News: ವಿಮಾನದೊಳಗೆ ಬೆತ್ತಲೆಯಾಗಿ ಓಡಿದ ಪ್ರಯಾಣಿಕ; ಆಮೇಲೇನಾಯ್ತು?

ನಾಗ್ಪುರದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇದೇ ರೀತಿಯ ಘಟನೆಗಳು ಧರಂಪೆತ್‌ನಲ್ಲಿ ಸಂಭವಿಸಿವೆ. ನಂತರ ಸದರ್ ಮತ್ತು ಬಜಾಜ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿದೆ. ಈ ಘಟನೆಯು ಗಂಭೀರ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.

ಈ ದಂಪತಿಗಳ ನಡುವೆ ವಾಗ್ವಾದದ ನಂತರ, ಮೊದಲು ಆ ವ್ಯಕ್ತಿ ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬೆತ್ತಲೆಯಾಗಿ ನಡೆಯಲು ಪ್ರಾರಂಭಿಸಿದನು. ನಂತರ ಯುವತಿ ಕೂಡ ಅವನ ಹಿಂದೆ ನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಅವಳು ಅವನಲ್ಲಿ ಕ್ಷಮೆಯಾಚಿಸಿ ಅವನನ್ನು ಕಾರಿನಲ್ಲಿ ಕುಳಿತುಕೊಳ್ಳಲು ಹೇಳುತ್ತಿದ್ದಳು. ಆದರೆ, ಆ ಯುವಕ ಕಾರಿನಲ್ಲಿ ಕುಳಿತುಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ಯುವತಿ ಪದೇ ಪದೇ ಆತನ ಹಿಂದೆ ಹೋಗಿ ನಗ್ನಳಾಗಿಯೇ ರಸ್ತೆಯಲ್ಲಿ ನಡೆಯುತ್ತಾ ಕಾರಿನೊಳಗೆ ಬಂದು ಕೂರಲು ಮನವಿ ಮಾಡಿದ್ದಾಳೆ. ಅವರಿಬ್ಬರೂ ಬೀದಿಯಲ್ಲಿಯೇ ನಗ್ನರಾಗಿ ಜಗಳವಾಡಿದ್ದಾರೆ.

ಇದನ್ನೂ ಓದಿ: Shocking News: ಶಾಲೆಯಲ್ಲೇ 16 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ; ಶಾಕಿಂಗ್ ವಿಡಿಯೋ ವೈರಲ್

ಈ ಹಿನ್ನೆಲೆಯಲ್ಲಿ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ತೋರುತ್ತಿದ್ದರಿಂದ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಿಲ್ಲ. “ನಾವು ಆ ದಂಪತಿ ಮತ್ತು ಅವರ ಕುಟುಂಬ ಸದಸ್ಯರನ್ನು ಕರೆಸಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅಸಂಬದ್ಧ ನಡವಳಿಕೆ ತೋರದಂತೆ ಸೂಚಿಸಲಾಗಿದೆ.” ಎಂದಿರುವ ಪೊಲೀಸರು ದಂಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದರಿಂದ ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ