ಪೆಪ್ಸಿ ಹಾಕಿ ಟೀ ಮಾಡಿದ ಚಾಯ್​ವಾಲಾ; ಇದು ಚಹಾ ಅಲ್ಲ ವಿಷ ಎಂದ ನೆಟ್ಟಿಗರು

|

Updated on: Jul 11, 2024 | 6:10 PM

ಹಾಲು ಹಾಕಿದ ಟೀ ಜೊತೆಗೆ ಗ್ರೀನ್ ಟೀ, ಬ್ಲಾಕ್ ಟೀ, ಕೋಲ್ಡ್ ಟೀ, ಕ್ಯಾಮೊಮೈಲ್ ಟೀ, ಶುಂಠಿ ಟೀ, ಹರ್ಬಲ್ ಟೀ, ಮಸಾಲಾ ಟೀ, ಇರಾನಿ ಚಾಯ್, ಲೆಮೊನ್ ಗ್ರಾಸ್ ಟೀ, ತಂದೂರಿ ಟೀ ಬಗ್ಗೆ ನೀವು ಈಗಾಗಲೇ ಕೇಳುತ್ತೀರಿ. ಆದರೆ ನೀವು ಎಂದಾದರೂ ಪೆಪ್ಸಿ ಅಥವಾ ಕೋಕೋ ಕೋಲಾ ಟೀ ಬಗ್ಗೆ ಕೇಳಿದ್ದೀರಾ?

ಪೆಪ್ಸಿ ಹಾಕಿ ಟೀ ಮಾಡಿದ ಚಾಯ್​ವಾಲಾ; ಇದು ಚಹಾ ಅಲ್ಲ ವಿಷ ಎಂದ ನೆಟ್ಟಿಗರು
ಪೆಪ್ಸಿ ಹಾಕಿ ಟೀ ಮಾಡಿದ ಚಾಯ್​ವಾಲಾ
Follow us on

ಹೊಸ ರೀತಿಯಲ್ಲಿ ಏನಾದರೂ ರೆಸಿಪಿ ಮಾಡಿ ಗ್ರಾಹಕರನ್ನು ಸೆಳೆಯಬೇಕು ಎಂದು ಕೆಲವು ಜನರು ಅಡುಗೆಯಲ್ಲಿ ಏನೇನೋ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ಇದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಕೆಟ್ಟದ್ದಾ? ಎಂಬ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಹೊಸ ರೀತಿಯ ಚಹಾದ ಮೂಲಕ ಜನರನ್ನು ಸೆಳೆಯಲು ಇಲ್ಲೊಬ್ಬ ರಸ್ತೆ ಬದಿಯಲ್ಲಿ ಪೆಪ್ಸಿ ಹಾಕಿ ಟೀ ತಯಾರಿಸಿ ಕೊಡುವ ವಿಡಿಯೋ ವೈರಲ್ ಆಗಿದೆ.

ರಸ್ತೆಬದಿಯ ಚಹಾ ಮಾರಾಟಗಾರನೊಬ್ಬ ಗ್ರಾಹಕರಿಗೆ ವಿಶೇಷವಾದ ಚಹಾ ತಯಾರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಆತ ತಾನು ತಯಾರಿಸುವ ಚಹಾಕ್ಕೆ ಪೆಪ್ಸಿ ಹಾಕಿರುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಹಾಕ್ಕೆ ಈ ರೀತಿ ಕೋಲ್ಡ್ ಡ್ರಿಂಕ್ ಯಾರು ಸೇರಿಸುತ್ತಾರೆ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ಈ ವ್ಯಕ್ತಿ ಈ ರೀತಿ ಮಾಡಿದ್ದಾನೆ. ಚಾಯ್‌ವಾಲಾ ಪೆಪ್ಸಿಯನ್ನು ಹಾಕಿ ಚಹಾ ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: Viral Video: ಲಿಫ್ಟ್​ನೊಳಗೆ ಮೂತ್ರ ಮಾಡಿದ ಬಾಲಕ ಶಾಕ್; ಮಾಡಿದ್ದುಣ್ಣೋ ಮಾರಾಯ ಎಂದ ನೆಟ್ಟಿಗರು

ಈ ವಿಡಿಯೋದಲ್ಲಿ ರಸ್ತೆ ಬದಿಯ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬ ಟೀ ಮಾಡುತ್ತಿರುವುದು ಕಂಡುಬಂದಿದೆ. ಮೊದಮೊದಲು ಈ ಹಿಂದೆ ಚಹಾ ಮಾಡಿದ ಪಾತ್ರೆಯನ್ನು ಶುಚಿಗೊಳಿಸದೆ ಹಾಲಿನ ಪೊಟ್ಟಣಗಳನ್ನು ಕತ್ತರಿಸಿ ಒಲೆಯ ಮೇಲೆ ಇಟ್ಟು ಹಾಲನ್ನು ಸುರಿಯುವುದು ಕಂಡುಬರುತ್ತದೆ. ಅದರ ನಂತರ, ಆತ ಈ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಸುರಿಯುತ್ತಾನೆ. ಇದರ ನಂತರ ಆತ 2 ಅಥವಾ 3 ಚಮಚ ಚಹಾ ಎಲೆಗಳನ್ನು ಸೇರಿಸುತ್ತಾರೆ. ನಂತರ ಒಂದು ಬಾಟಲಿ ಪೆಪ್ಸಿಯನ್ನು ತೆಗೆದುಕೊಂಡು ಆ ಎಲ್ಲಾ ಪೆಸ್ಸಿಯನ್ನು ಟೀ ಪಾತ್ರೆಯಲ್ಲಿ ಸುರಿಯುತ್ತಾನೆ. ನಂತರ ಅದನ್ನು ಚೆನ್ನಾಗಿ ಕುದಿಸಿ ಟೀಯನ್ನು ಗ್ರಾಹಕರಿಗೆ ಕೊಡುತ್ತಾನೆ.

ಇದನ್ನೂ ಓದಿ: Viral Video: ಚರಂಡಿಗೆ ಇಳಿದು ಕುಡುಕನ ಜೀವ ಕಾಪಾಡಿದ ಪೊಲೀಸರು; ವಿಡಿಯೋ ವೈರಲ್

ಈ ವಿಚಿತ್ರ ಚಹಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೆಪ್ಸಿಯಿಂದ ತಯಾರಿಸಿದ ವಿಚಿತ್ರ ಟೀ ವಿಡಿಯೋದಲ್ಲಿ ಸಿನಿಮಾವೊಂದರ ಫನ್ನಿ ಡೈಲಾಗ್ ಕೂಡ ಸೇರಿಸಲಾಗಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪೆಪ್ಸಿ ಹಾಕಿ ಚಹಾ ತಯಾರಿಸಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಪೆಪ್ಸಿ ಹಾಕಿ ಚಹಾ ತಯಾರಿಸಿದರೆ ವಿಷವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ