ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ಮಹಿಳೆ

ಸಾಮಾನ್ಯವಾಗಿ ಒಂದು ಸಂಸ್ಥೆ ಅಥವಾ ಕಂಪನಿಯಿಂದ ಉದ್ಯೋಗ ತೊರೆಯುವಾಗ ಔಪಚಾರಿಕವಾಗಿ ರಾಜೀನಾಮೆ ನೀಡಬೇಕಾಗುತ್ತದೆ. ಆದರೆ ಇದೀಗ ಸಿಂಗಾಪುರದ ಮಹಿಳಾ ಉದ್ಯೋಗಿ ಟಾಯ್ಲೆಟ್ ಪೇಪರ್ ನಲ್ಲಿ ರಾಜೀನಾಮೆ ಪತ್ರ ಬರೆದಿದ್ದಾರೆ. ಈ ರಾಜೀನಾಮೆ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಚರ್ಚೆಗೆ ಕಾರಣವಾಗಿದ್ದು, ಬಳಕೆದಾರರು ಈ ಕಂಪೆನಿಯೂ ಉದ್ಯೋಗಿಯನ್ನು ನಡೆಸಿಕೊಂಡ ರೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ಮಹಿಳೆ
ವೈರಲ್​​​ ಪೋಸ್ಟ್​
Edited By:

Updated on: Apr 17, 2025 | 12:11 PM

ಕೆಲಸದ ಸ್ಥಳಗಳಲ್ಲಿ ಕೆಲ ಉದ್ಯೋಗಿ (employees) ಗಳು ಅನುಭವಿಸುವ ಒತ್ತಡ (stress) ಹೇಳಲಾಗದು. ಕೆಲಸ ಬಿಟ್ಟು ಹೋದರೆ ಸಾಕು ಎನ್ನುವಷ್ಟರ ಮಟ್ಟಿಗೆ ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಆದರೆ ಮನೆಯ ಜವಾಬ್ದಾರಿ ಹೆಗಲ ಮೇಲೆ ಇರುವ ಕಾರಣ ಕೆಲಸ ಬಿಡಲು ಆಗದೇ ಇಕ್ಕಟ್ಟಿನಲ್ಲಿ ಸಿಲುಕಿರುವ ಉದ್ಯೋಗಿಗಳನ್ನು ನೋಡಬಹುದು. ಆದರೆ ಕೆಲವರಂತೂ ವಿಚಿತ್ರವಾಗಿ ಕೆಲಸಕ್ಕೆ ರಾಜೀನಾಮೆ (resignation) ನೀಡುವ ಮೂಲಕ ಸುದ್ದಿಯಾಗುವವರೇ ಹೆಚ್ಚು. ಸಿಂಗಾಪೂರ (singapore) ದ ಮಹಿಳಾ ಉದ್ಯೋಗಿ (women employes) ಯೊಬ್ಬರು ಟಾಯ್ಲೆಟ್ ಪೇಪರ್ (toilet paper) ಮೇಲೆ ತಮ್ಮ ರಾಜೀನಾಮೆ ಬರೆದು ಉದ್ಯೋಗವನ್ನು ತೊರೆದಿದ್ದಾರೆ. ಈ ರಾಜೀನಾಮೆ ಪತ್ರವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಖಾಸಗಿ ಕಂಪನಿ ನಿರ್ದೇಶಕಿ ಏಂಜೆಲಾ ಯೋಹ್ ಲಿಂಕ್ಡ್‌ಇನ್‌ ಪೋಸ್ಟ್ ನಲ್ಲಿ ಉದ್ಯೋಗಿಯೊಬ್ಬರು ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಬರೆದು ಸಲ್ಲಿಸಿದ್ದು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದೊಂದಿಗೆ ನಿರ್ದೇಶಕಿಯೂ, ಈ ರಾಜೀನಾಮೆ ಪತ್ರ ನನ್ನ ಮನಸ್ಸಿನಲ್ಲಿ ಇನ್ನೂ ಹಾಗೇ ಅಚ್ಚೊತ್ತಿದೆ. ಉದ್ಯೋಗಿಗಳನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳಬೇಡಿ ಎಂದಿದ್ದಾರೆ.

ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ ,ಈ ಸಂಸ್ಥೆ ನನ್ನನ್ನು ಟಾಯ್ಲೆಟ್ ಪೇಪರ್ ಎಂದು ಭಾವಿಸಿದೆ, ಅಗತ್ಯವಿದ್ದಾಗ ಮಾತ್ರ ಬಳಸಿ, ಬೇರೆ ಸಂದರ್ಭದಲ್ಲಿ ಎರಡನೇ ಆಲೋಚನೆಯಿಲ್ಲದೆ ನನ್ನನ್ನು ಬಿಸಾಡಲಾಗಿದೆ. ಕಂಪನಿಯು ನನ್ನನ್ನು ಹೇಗೆ ನಡೆಸಿಕೊಂಡಿದೆ ಎಂಬುದರ ಸಂಕೇತವಾಗಿ ನಾನು ನನ್ನ ರಾಜೀನಾಮೆಗಾಗಿ ಈ ರೀತಿಯ ಕಾಗದವನ್ನು ಆಯ್ಕೆ ಮಾಡಿದ್ದೇನೆ. ನಾನು ನನ್ನ ಸ್ಥಾನವನ್ನು ತ್ಯಜಿಸುತ್ತಿದ್ದೇನೆ ಎಂದು ಬರೆಯಲಾಗಿದೆ.

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಭಾರತದ ಕೊನೆಯ ರೈಲು ನಿಲ್ದಾಣವಿದು, ಏನಿದರ ವಿಶೇಷತೆ ಗೊತ್ತಾ?

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಇತ್ತೀಚೆಗೆ ಬಹುತೇಕ ಕಂಪನಿಗಳು ಉದ್ಯೋಗಿಗಳನ್ನು ಈ ರೀತಿಯೆ ನಡೆಸಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಉದ್ಯೋಗ ಮಾಡುವುದಕ್ಕಿಂತ ತೊರೆಯುವುದೇ ಮೇಲು’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ‘ಈ ಮಹಿಳೆಯೂ ಮಾನಸಿಕವಾಗಿ ಎಷ್ಟು ನೊಂದಿರಬೇಕು ಎಂದು ಇದುವೇ ಹೇಳುತ್ತದೆ’ ಎಂದಿದ್ದಾರೆ. ಮತ್ತೊಬ್ಬರು, ‘ದಯವಿಟ್ಟು ಉದ್ಯೋಗಿಗಳ ಬಳಿ ಈ ರೀತಿ ನಡೆದುಕೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ..

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:10 pm, Thu, 17 April 25