ಕತಾರ್‌ನ ದೋಹಾ ವಿಮಾನ ನಿಲ್ದಾಣ(Doha Airport) ದಲ್ಲಿ ಡಾಲರ್‌ನಂತೆಯೇ ಭಾರತೀಯ ಕರೆನ್ಸಿಯನ್ನು ಬಳಸಿ ಶಾಪಿಂಗ್ ಮಾಡಬಹುದು. ನಮ್ಮ ಹಣವನ್ನು ವಿದೇಶದಲ್ಲಿ ಡಾಲರ್‌ನಂತೆ ಬಳಸಲು ನಮಗೆ ಅನುವು ಮಾಡಿಕೊಟ್ಟಿದ್ದಕ್ಕಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಂದನೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿ ಪ್ರಧಾನಿಗೆ ಸೆಲ್ಯೂಟ್ ಮಾಡಿರುವ ಬಾಲಿವುಡ್ ಗಾಯಕ ಮಿಕಾ ಸಿಂಗ್(Mika Singh) ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ವತಃ ಮಿಕಾ ಸಿಂಗ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದು, ಜೊತೆಗೆ ಪ್ರಧಾನಿಯವರನ್ನೂ ಟ್ಯಾಗ್ ಮಾಡಲಾಗಿದೆ.
Good morning.
I felt so proud to be able to use Indian rupees whilst shopping at #Dohaairport in the @LouisVuitton store. You can even use rupees in any restaurant.. Isn’t that wonderful? A massive salute to @narendramodi saab for enabling us to use our money like dollars. pic.twitter.com/huhKR2TjU6— King Mika Singh (@MikaSingh) April 12, 2023
ಕತಾರ್‌ನ ವಿಮಾನ ನಿಲ್ದಾಣದ ಐಷಾರಾಮಿ Louis Vuitton ಸ್ಟೋರ್‌ನಲ್ಲಿ ಭಾರತೀಯ ಕರೆನ್ಸಿ ಬಳಸಿ ಮಿಕಾ ಸಿಂಗ್ ಶಾಪಿಂಗ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಏ.12ರಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಇದೀಗಾಗಲೇ 5.59 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. 13.8 ಲೈಕ್ ಹಾಗೂ ಸಾವಿರಾರು ರೀಟ್ವೀಟ್ಗಳನ್ನು ಕೂಡ ಕಾಣಬಹುದು.
ಇದನ್ನೂ ಓದಿ: ಬಿಬಿಸಿ ವರದಿಗಾರನೊಂದಿಗೆ ಎಲಾನ್ ಮಸ್ಕ್ ಸಂದರ್ಶನ; ‘ನೀನು ಸುಳ್ಳು ಹೇಳುತ್ತಿದ್ದೀಯ’ ಎಂದು ವರದಿಗಾರನನ್ನು ದೂಷಿಸಿದ ಮಸ್ಕ್
ಸಾಕಷ್ಟು ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಮಿಕಾ ಸಿಂಗ್ ಅವರನ್ನು ಶ್ಲಾಘಿಸಿದರು. ಅವರ ಟ್ವೀಟ್‌ಗೆ ಬಳಕೆದಾರರು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಭಾರತೀಯ ಕರೆನ್ಸಿ ವಿದೇಶದೆಲ್ಲೆಡೆ ಬಲಗೊಳ್ಳುತ್ತಿದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನವ ಭಾರತದ ಶಕ್ತಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:47 pm, Thu, 13 April 23