Viral Video: ‘ಚಹಾರಾಗ’ ದುಬೈನ ಕೇರಳ ರೆಸ್ಟೋರೆಂಟಿನಲ್ಲಿ ಶಂಕರ್ ಮಹಾದೇವನ್​

Dubai : ಶಂಕರ್​ ಮಹಾದೇವನ್ ಸರ್,​ ಇದು ಹೊಸ ರಾಗವೇ? ಮತ್ತಿದನ್ನೂ ನೀವು ಒಂದೇ ಉಸಿರಿನಲ್ಲಿ ಹಾಡುವುದಿಲ್ಲ ತಾನೆ? ಅಂದಹಾಗೆ ನಿಮ್ಮ ಪಕ್ಕದಲ್ಲಿ ಈಗ ಉಸ್ತಾದ್​ ಝಾಕೀರ್​ ಹುಸೇನ್ ಅವರು​ ಇದ್ದಿದ್ದರೆ ಏನು ಹೇಳುತ್ತಿದ್ದರು?

Viral Video: ಚಹಾರಾಗ ದುಬೈನ ಕೇರಳ ರೆಸ್ಟೋರೆಂಟಿನಲ್ಲಿ ಶಂಕರ್ ಮಹಾದೇವನ್​
ದುಬೈನ ಕೇರಳದ ರೆಸ್ಟೋರೆಂಟ್​ನ ಅಡುಗೆಮನೆಯಲ್ಲಿ ಶಂಕರ್ ಮಹಾದೇನ್​

Updated on: Jul 12, 2023 | 6:36 PM

Shankar Mahadevan : ಹೊಸಾ ಬಿಝಿನೆಸ್ ಶುರು ಮಾಡಿದರಾ ಶಂಕರ್ ಮಹಾದೇವನ್… ಅಂತೇನಾದರೂ ನಿಮಗೆ ಅನುಮಾನ ಶುರುವಾಗಿರಬೇಕಲ್ಲ? ದುಬೈನಲ್ಲಿರೋ ಕೇರಳದ ರೆಸ್ಟೋರೆಂಟ್​ನಲ್ಲಿ (Calicut Paragon Restaurant UAE) ಅವರು ಹೀಗೆ ಕಾಣಿಸಿಕೊಂಡಿದ್ದಾರೆ. ಈ ರೆಸ್ಟೋರೆಂಟ್​ನ ಅಡುಗೆ ಕೋಣೆಗೆ ಹೋಗಿ ಚಾಯ್​ವಾಲಾನ ಪಾತ್ರ ನಿರ್ವಹಿಸಿದ್ದಾರೆ. ಬಾಣಸಿಗನ ವೇಷವನ್ನೂ ಹಾಕಿಕೊಂಡಿದ್ದರೆ ಈ ವಿಡಿಯೋಗೆ ಇನ್ನೂ ರಂಗು ಬರುತ್ತಿತ್ತು ಎಂದು ಎನ್ನಿಸದೇ ಇರದು. ಯಾರೊಬ್ಬರೂ ಇವರನ್ನು ಬ್ರೆಥ್​ಲೆಸ್​ ಸಾಂಗ್​ ಗಾಯಕರು ಎಂದು ಗುರುತಿಸಲು ಶಕ್ಯವೇ ಇರುತ್ತಿರಲಿಲ್ಲ. ನೋಡಿ ಮತ್ತೆ ಎಷ್ಟೊಂದು ಪರ್ಫೆಕ್ಟ್ ಆಗಿ ಒಂದು ಮಗ್​ನಿಂದ ಇನ್ನೊಂದು ಮಗ್​ಗೆ ಚಹಾ ಸುರಿಯುತ್ತಾರೆ!

ಈ ವಿಡಿಯೋ ಅನ್ನು ಒಂದು ಲಕ್ಷ ಜನರು ನೋಡಿದ್ದಾರೆ. 5,000 ಕ್ಕಿಂತಲೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೂರಾರು ಜನರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ಅರೆ! ನಾನು ಈ ರೆಸ್ಟೋರೆಂಟ್​ಗೆ ಹೋಗುತ್ತಿರುತ್ತೇನೆ. ನೀವು ಇಲ್ಲಿಗೆ ಬಂದಾಗ ನಾನಿರಬಾರದಿತ್ತೆ? ಎಂದು ಹಳಹಳಿಸಿದ್ಧಾರೆ ಕೆಲವರು. ಈ ರೆಸ್ಟೋರೆಂಟ್​ನ ಬ್ರ್ಯಾಂಚ್​​ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿಯೂ ಆರಂಭವಾಗಿದೆ, ಮುಂಬೈನಲ್ಲಿಯೂ ಸದ್ಯದಲ್ಲಿಯೇ ಆರಂಭವಾಗಲಿದೆ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ‘ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ’

ಸರ್, ನೀವಿನ್ನೂ ದುಬೈನಲ್ಲಿದ್ದೀರೇ? ಎಲ್ಲಿ ಸಿಗುತ್ತೀರಿ, ನಿಮ್ಮನ್ನು ಭೇಟಿಯಾಗಬೇಕು ಎಂದು ಅನೇಕರು ಕೇಳಿದ್ದಾರೆ. ನಿಮ್ಮ ಸಂಗೀತ ಮತ್ತು ಬದುಕಿನ ಬಗೆಗೆ ಇರುವ ನಿಮ್ಮ ಉತ್ಸಾಹ ಇದೆಲ್ಲವನ್ನೂ ನಾನು ತುಂಬಾ ಪ್ರೀತಿಸುತ್ತೇನೆ ಎಂದಿದ್ದಾರೆ ಕೆವಲರು. ನಾನು ನಿಮ್ಮ ಅಭಿಮಾನಿ ಸರ್, ಒಮ್ಮೆಯಾದರೂ ಭೇಟಿಯಾಗಬೇಕು ಎಂದಿದ್ದಾರೆ

ಇದನ್ನೂ ಓದಿ : Viral Video: ಚೈತನ್ಯ ಚಿತ್ರ; ಅಜ್ಜಿಯ ಅಂದದ ಮೊಗಕೆ ನಗುವೇ ಭೂಷಣ

ನೀವು ಸಂಗೀತದಲ್ಲಷ್ಟೇ ಅಲ್ಲ ಅಡುಗೆಯಲ್ಲಿಯೂ ನಿಮಗೆ ಪ್ರಾವೀಣ್ಯ ಇದೆ, ವಾಹ್! ಎಂದಿದ್ದಾರೆ ಅನೇಕರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:33 pm, Wed, 12 July 23