ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ತಮಾಷೆಯ ವಿಡಿಯೋಗಳು, ಅಚ್ಚರಿಯ ವಿಡಿಯೋಗಳು ಹರಿದಾಡುತ್ತಿರುತ್ತದೆ. ಆಹಾರಕ್ಕಾಗಿ ಅಡುಗೆ ಮನೆ ಪ್ರವೇಶಿಸಿ ಪಾತ್ರೆಯ ಮುಚ್ಚಳ ತೆಗೆದು ತಿಂಡಿ ತಿನ್ನುತ್ತಿರುವ ಬುದ್ದಿವಂತಿಕೆಯ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ದಿಲ್ಲದೆ ಅಡುಗೆ ಮನೆ ಪ್ರವೇಶಿಸಿದ ನಾಯಿಯ ವಿಡಿಯೋ ಫುಲ್ ವೈರಲ್ ಆಗಿದೆ.
ನೀವು ಯೋಚಿಸುವುದಕ್ಕಿತಲೂ ನಾಯಿ ಹೆಚ್ಚು ಚುರುಕಾಗಿರಬಹುದು. ಸಾಕು ನಾಯಿ ಮಾನವರೊಂದಿಗೆ ದೈನಂದಿನ ಜೀವನಕ್ಕೆ ಎಷ್ಟು ಹೊಂದಿಕೊಳ್ಳುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಡುಗೆ ಮನೆಯಲ್ಲಿದ್ದ ಆಹಾರವನ್ನು ನಾಯಿ ಬಹಳ ಚತುರತೆಯಿಂದ ಕದಿಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ.
When you leave your dog alone for a minute.. pic.twitter.com/OLFvT0TF20
— Buitengebieden (@buitengebieden_) August 17, 2021
ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಒಂದು ನಿಮಿಷ ಒಬ್ಬಂಟಿಯಾಗಿ ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬಿಟ್ಟರೆ ಏನಾಲ್ಲಾ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಆಹಾರ ಸಿಗದಿದ್ದಾಗ ಖುರ್ಚಿಯನ್ನು ತಳ್ಳಿ ತನ್ನ ಆಹಾರವನ್ನು ಕದಿಯುತ್ತದೆ. ಬುದ್ಧಿವಂತಿಕೆಯ ನಾಯಿ ವಿಡಿಯೋ ನೋಡಿದ ನೆಟ್ಟಿಗರು ಸಾಕು ನಾಯಿಯ ಚತುರತೆಗೆ ಶ್ಲಾಘಿಸಿದ್ದಾರೆ.
ವಿಡಿಯೋ ಹಂಚಿಕೊಂಡ ಕೆಲವೇ ದಿನಗಳಲ್ಲಿ 3.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 170 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಲಭ್ಯವಾಗಿವೆ. ಸಾವಿರಾರು ರೀಟ್ವೀಟ್ ಮಾಡಲಾಗಿದೆ. ನಾಯಿ ಆಹಾರ ಕದಿಯುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಸ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
Lol. Don’t let my greedy Lab see this ?
— Ang – Angry at the Tories #FBPE #FBPA ??? (@Ang84842365) August 18, 2021
ಇದನ್ನೂ ಓದಿ:
Viral Video: ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಸ್ಥಂಭ ಹತ್ತಿ ಬಾವುಟ ಹಾರಿಸಿದ ದೇಶಪ್ರೇಮಿ ಕೋತಿ!
Viral Video: ಒಂದು ಜಿಂಕೆಗಾಗಿ 6 ಸಿಂಹಗಳ ಕಿತ್ತಾಟ; ಭಯಾನಕ ವಿಡಿಯೋ ವೈರಲ್