ಸಾಮಾಜಿಕ ಜಾಲತಾಣದಲ್ಲೂ ಹೋಳಿ ಮೆರಗು.. ಹಬ್ಬದ ಆಚರಣೆಗೆ ಫೇಸ್ಬುಕ್ನಿಂದ ವಿಶೇಷ ಸ್ಟಿಕರ್ಸ್ ಕೊಡುಗೆ
ಹೋಳಿ ಆಚರಣೆಗೆಂದು ಫೇಸ್ಬುಕ್ ವಿಶೇಷ ಸ್ಟಿಕರ್ಸ್ಗಳನ್ನು ತನ್ನ ಬಳಕೆದಾರರಿಗಾಗಿ ನೀಡಿದೆ. ಹಾಗಾದರೆ ಸ್ಟಿಕರ್ಸ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ಬೆಂಗಳೂರು: ಇಂದು ಮಾರ್ಚ್ 28 ಹೋಳಿ ಹಬ್ಬ. ಎಲ್ಲೆಡೆ ರಂಗುರಂಗಿನ ಬಣ್ಣದ ಮೆರುಗು. ಮನೆಯಂಗಳವೆಲ್ಲ ಕಲರ್ಫುಲ್ ಬಣ್ಣಗಳಿಂದ ಕಂಗೊಳಿಸುತ್ತಿರುತ್ತದೆ. ಮಕ್ಕಳೆಲ್ಲ ಮೋಜು ಮಸ್ತಿಯಿಂದ ವಿವಿಧ ಬಣ್ಣಗಳನ್ನು ಎರಚಿಕೊಳ್ಳುತ್ತಾ ಖುಷಿ ಪಡುವ ದಿನವಿದು. ಜೊತೆ ಜೊತೆಯೇ ಸೋಷಿಯಲ್ ಮೀಡಿಯಾ ಕೂಡಾ ಬಣ್ಣದಿಂದ ಕಂಗೊಳಿಸುತ್ತಿದೆ. ಫೇಸ್ಬುಕ್ ತನ್ನ ಬಳಕೆದಾರರಿಗಾಗಿ ಹೋಳಿ ಆಚರಣೆಗೆಂದು ವಿಶೇಷ ಸ್ಟಿಕರ್ಸ್ಗಳನ್ನು ಬಿಡುಗಡೆ ಮಾಡಿದೆ. ಫೇಸ್ಬುಕ್ನಲ್ಲಿ ಹಬ್ಬದ ಮೆರುಗು ಹೆಚ್ಚಿಸಲು ಬಳಕೆದಾರರಿಗೆ ಅನೇಕ ಸ್ಟಿಕರ್ಸ್ಗಳು ಲಭ್ಯವಿದೆ.
ಹೋಳಿ ಕುರಿತಾಗಿ ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಲ್ಲಿ 6.6 ಮಿಲಿಯನ್ ಪೋಸ್ಟ್ ಹಾಗೂ ಕಮೆಂಟ್ಗಳನ್ನು ಮಾಡಲಾಗಿದೆ. ಹೋಳಿ ವಿಶೇಷವಾಗಿ ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಶುಭಾಶಯಗಳನ್ನು ವರ್ಣರಂಜಿತವಾಗಿ ಹಾಗೂ ಆಕರ್ಷಕವಾಗಿ ತಿಳಿಸಲು ಫೇಸ್ಬುಕ್ ವಿವಿಧ ತೆರನಾದ ಸ್ಟಿಕರ್ಸ್ಗಳನ್ನು ಬಳಕೆದಾರರಿಗಾಗಿ ಒದಗಿಸಿದೆ. ಫೇಸ್ಬುಕ್ನಲ್ಲಿ ವಿಶೇಷ ಸ್ಟಿಕರ್ಸ್ಗಳನ್ನು ಕಳುಹಿಸುವ ಮೂಲಕ ಹೋಳಿ ಆಚರಣೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ರಂಗಾಗಿದೆ.
ಈಗಾಗಲೇ ಫೇಸ್ಬುಕ್ ಅಪ್ಲಿಕೇಶನ್ನಲ್ಲಿ ಕಮೆಂಟ್ ಬರೆಯುವ ಜಾಗದಲ್ಲಿ, ವಿವಿಧ ಸ್ಟಿಕರ್ಸ್ ಆಯ್ಕೆ ಮಾಡುವಾಗಲೇ ಹೋಳಿ ಆಚರಣೆಯ ವಿಶೇಷ ಸ್ಟಿಕರ್ಸ್ಗಳು ಬಳಕೆದಾರರಿಗೆ ಸಿಗುತ್ತಿದೆ. ಸ್ಟಿಕರ್ಸ್ಗಳು ಸಿಗುತ್ತಿಲ್ಲ ಎಂದಾದರೆ ಮತ್ತೊಮ್ಮೆ ಫೇಸ್ಬುಕ್ನ ಆ್ಯಪ್ನ ನೂತನ ಆವೃತ್ತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಫೇಸ್ಬುಕ್ ಖಾತೆಯಲ್ಲಿ ವಿಶೇಷ ಹೋಳಿ ಆಚರಣೆಯ ಸ್ಟಿಕರ್ಸ್ಗಳು ಎಲ್ಲಿ ಸಿಗುತ್ತವೆ? * ಮೊದಲಿಗೆ ಫೇಸ್ಬುಕ್ ಲಾಗಿನ್ ಆಗಿ * ಕಮೆಂಟ್ ಮಾಡುವ ಟ್ಯಾಬ್ ಒತ್ತಿರಿ * ನಗುವಿನ ಇಮೋಜಿಯನ್ನು ಕಾಣಬಹುದು * ನಗುವಿನ ಚಿತ್ರದ ವಿವಿಧ ಇಮೋಜಿಗಳನ್ನು ಡೌನ್ಲೋಡ್ ಮಾಡುವ ಆಯ್ಕೆಗಳು ಕಾಣಸಿಗುತ್ತದೆ * ಅಲ್ಲಿ ವಿಶೇಷ ಸ್ಟಿಕರ್ಸ್ಗಳನ್ನು ಡೌನ್ಲೋಡ್ ಮಾಡಬಹುದು * ಇದೀಗ ಹೋಳಿ ಆಚರಣೆಗೆ ವಿಶೇಷ ಸ್ಟಿಕರ್ಸ್ಗಳು ನಿಮ್ಮದಾಗಿವೆ * ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಕಲರ್ಫುಲ್ ಸ್ಟಿಕರ್ಸ್ಗಳನ್ನು ಕಳುಹಿಸುವ ಮೂಲಕ ಹೋಳಿಯ ವಿಶೇಷ ಸಂಭ್ರಮಾಚರಣೆ ನಿಮ್ಮದಾಗಿರಲಿ
ಇದನ್ನೂ ಓದಿ: ರಂಗಿನಾಟ ಹೋಳಿ ಹುಣ್ಣಿಮೆಯ ಮಹತ್ವ ವೇನು? ಕಾಮದೇವನನ್ನು ದಹಿಸೋದೇಕೆ?
ಹೋಳಿ ಸಂಭ್ರಮಕ್ಕೆ ಕೊರೊನಾ ಅಡ್ಡಿ.. ಮನೆ ಮನೆಗಳಿಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶನ
Published On - 12:25 pm, Sun, 28 March 21