Viral Video : ದಯೆ, ಕರುಣೆ, ಸಹಾಯ, ಪ್ರಜ್ಞೆ, ಜವಾಬ್ದಾರಿ ಇವೆಲ್ಲವೂ ಮನುಷ್ಯನಲ್ಲಿರಬೇಕಾದ ಮೂಲಗುಣಗಳು. ಇವೆಲ್ಲವೂ ವಾತಾವರಣದಿಂದ ಮತ್ತು ಸ್ವಭಾವದಿಂದ ರೂಢಿಗೊಳ್ಳುತ್ತವೆ. ಮಕ್ಕಳಲ್ಲಿ ಈ ಬಗ್ಗೆ ಎಳೆವೆಯಿಂದಲೇ ಬೀಜ ಬಿತ್ತಬೇಕು. ಅಂದಾಗ ಮಾತ್ರ ಬದುಕಿನುದ್ದಕ್ಕೂ ಮಕ್ಕಳಲ್ಲಿ ಮಾನವೀಯ ಗುಣಗಳು ಜಾಗೃತವಾಗಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮಕ್ಕಳು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿವೆ. ಹೀಗೆ ಹೋಗುತ್ತದೆ ಒಂದು ಕ್ಷಣ ರಸ್ತೆಯಲ್ಲಿರುವ ಮ್ಯಾನ್ಹೋಲ್ ಅನ್ನು ನೋಡಿವೆ. ಇತರೇ ಮಕ್ಕಳಾಗಿದ್ದರೆ ಅದರೊಳಗೆ ಸಣ್ಣಸಣ್ಣ ಕಲ್ಲುಗಳನ್ನು ಎಸೆಯುತ್ತ ಆಟವಾಡುತ್ತಿದ್ದರೋ ಏನೋ. ಆದರೆ ಈ ಮಕ್ಕಳು ಏನು ಮಾಡಿವೆ ನೋಡಿ.
You are never too young to make a difference. pic.twitter.com/jZ95Hj7N5e
ಇದನ್ನೂ ಓದಿ— Awanish Sharan (@AwanishSharan) December 5, 2022
ಹೀಗೆ ಕಲ್ಲುಗಳನ್ನು ತಂದು ಮ್ಯಾನ್ಹೋಲ್ ಸುತ್ತಲೂ ಇಟ್ಟಿವೆ ಈ ಮಕ್ಕಳು. ಈ ವಿಡಿಯೋ ಅನ್ನು ಐಎಎಸ್ ಅಧಿಕಾರಿ ಅವನೀಶ ಶರಣ ಟ್ವೀಟ್ ಮಾಡಿದ್ದಾರೆ. 17,000ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಈ ಮಕ್ಕಳನ್ನು ದೇವರು ಹೆಚ್ಚು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ಮಕ್ಕಳೇ ನಮ್ಮ ಶಿಕ್ಷಕರು ಎಂದಿದ್ದಾರೆ ಹಲವರು. ಇದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ ಕೆಲವರು. ನಾಯಕತ್ವ ಎನ್ನುವುದು ಎಳವೆಯಿಂದಲೇ ರೂಢಿಗೊಳ್ಳುವಂಥದ್ದು ಎಂದಿದ್ದಾರೆ ಒಬ್ಬರು. ನಮ್ಮ ಸುತ್ತಮುತ್ತಲನ್ನು ಗಮನಿಸುವುದು, ಒಪ್ಪ ಮಾಡುವುದು ಪ್ರತಿಯೊಬ್ಬರ ಸಾಮಾಜಿಕ ಕರ್ತವ್ಯ ಎಂದಿದ್ದಾರೆ ಇನ್ನೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ